ಹುಬ್ಬಳ್ಳಿ: ಡಿ.ಕೆ ಶಿವಕುಮಾರ್ (DK Shivakumar) ನಿಮ್ಮ ತತ್ವದ ವಿರುದ್ಧ ಇದ್ದರೆ ಅವರನ್ನು ಸಸ್ಪೆಂಡ್ ಮಾಡಿಬಿಡಿ ಎಂದು ಕಾಂಗ್ರೆಸ್ಸಿಗರಿಗೆ (Congress) ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಟಾಂಗ್ ಕೊಟ್ಟಿದ್ದಾರೆ.
- Advertisement -
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಡಿಕೆಶಿ ಕುಂಭಮೇಳಕ್ಕೆ (Maha Kumbh Mela) ಹೋಗಿರೋದು, ಕೊಯಮತ್ತೂರಿಗೆ ಹೋಗಿರೋ ವಿಚಾರಕ್ಕೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದರು. ಡಿಕೆಶಿ ಹೋಗಿರೋದು ಸಹಜ, ಇದರಲ್ಲಿ ದೊಡ್ಡಸ್ಥಿಕೆ ಏನಿಲ್ಲ. ಇದು ಸರಿ ಆಗಲ್ಲ ಅಂದ್ರೆ, ನಿಮ್ಮ ಪಕ್ಷದ ತತ್ವ ಸಿದ್ಧಾಂತಕ್ಕೆ ವಿರೋಧವಾಗಿದ್ರೆ ಅವರನ್ನು ಸಸ್ಪೆಂಡ್ ಮಾಡಿ ಎಂದು ಹೇಳಿದ್ದಾರೆ.
- Advertisement -
- Advertisement -
ಕಾಂಗ್ರೆಸ್‍ಗೆ ಹಿಂದೂಗಳ ಬಗ್ಗೆ ದ್ವೇಷ ಇದೆ. ಇದರಿಂದ ಕಾಂಗ್ರೆಸ್ ಉದ್ದಾರ ಆಗಲ್ಲ. ಹಿಂದೂಗಳಿಲ್ಲದೆ ನೀವು ರಾಜಕಾರಣ ಮಾಡ್ತೀವಿ ಅಂದ್ರೆ ಅದು ನಿಮ್ಮ ಹಣೆಬರಹ. ಹಿಂದೂಗಳನ್ನ ಕೀಳಾಗಿ ಕಾಣೋದೆ, ಅವರ ಅವನತಿಗೆ ಕಾರಣ ಎಂದಿದ್ದಾರೆ.
- Advertisement -
ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಹಿಂದೂ ವಿರೋಧಿಯಾಗಿವೆ. ಈ ದೇಶ ಹಿಂದೂಗಳ ದೇಶ, ಹಿಂದೂ ರಾಷ್ಟ್ರ ಅನ್ನೋ ಪರಂಪರೆ ಇದೆ. ಕಮ್ಯುನಿಸ್ಟರು ಕೂಡಾ ಹಿಂದೂ ದೇವಾಲಯಕ್ಕೆ ಹೋಗಿದ್ದಾರೆ. ಕಾಂಗ್ರೆಸ್‍ನವರು ಎಷ್ಟೋ ಜನ ಕುಂಭಮೇಳಕ್ಕೆ ಹೋಗಿದ್ದಾರೆ. ರಾಜಕಾರಣಕ್ಕೆ ಧರ್ಮಕ್ಕೆ ತಳಕು ಹಾಕಬಾರದು ಎಂದಿದ್ದಾರೆ.