ತುಮಕೂರು: ಐಸಿಸ್ ನಂಟು ಹೊಂದಿರುವ ಶಂಕೆಯ ಮೇರೆಗೆ ಎನ್ಐಎ ತಂಡ ಭಾನುವಾರ ತುಮಕೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದೆ. ಮಹಾರಾಷ್ಟ್ರ ಮೂಲದ ಸಾಜಿದ್ ಮಕ್ರಾನಿ ಬಂಧಿತ ಶಂಕಿತ ಉಗ್ರ.
ಈತ ತುಮಕೂರಿನ ಹೆಚ್ಎಂಎಸ್ ಯುನಾನಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದು, ಸದಾಶಿವ ನಗರದ 9 ನೇ ತಿರುವಿನಲ್ಲಿರುವ ರಂಗಸ್ವಾಮಿಯವರ ಮನೆಯಲ್ಲಿ ಒಟ್ಟು 4 ಜನ ಸ್ನೇಹಿತರೊಂದಿಗೆ ವಾಸವಿದ್ದ. ಇದನ್ನೂ ಓದಿ: ISIS ನಂಟು – ಭಟ್ಕಳದಲ್ಲಿ ಶಂಕಿತ ಉಗ್ರ ವಶಕ್ಕೆ
Advertisement
Advertisement
ಇಂದು ಬೆಳಗ್ಗಿನ ಜಾವ 4 ಗಂಟೆಗೆ ಸ್ಥಳಕ್ಕೆ ಆಗಮಿಸಿದ 20 ಜನ ಎನ್ಐಎ ತಂಡ ಆತನನ್ನು ಸೆರೆ ಹಿಡಿದು, ಸತತ 6 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಆತನ ಬಳಿ ಇದ್ದ ಲ್ಯಾಪ್ಟಾಪ್, ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಉಡುಪಿಯ ನಿರ್ಜನ ಪ್ರದೇಶದಲ್ಲಿ ಅಪರಿಚಿತ ಇಯಾನ್ ಕಾರ್ ಪತ್ತೆ