ಬೆಂಗಳೂರು: ನಗರದಲ್ಲಿ ಬಂಧಿತನಾದ ಶಂಕಿತ ಉಗ್ರ ಅಕ್ತರ್ ಹುಸೇನ್ ಭಯಾನಕ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.
ಈತ ಉಗ್ರ ಸಂಘಟನೆ ಸೇರಲು ಪ್ರಚೋದಿಸಿದ್ದು ಏನು ಎಂಬುದನ್ನು ಹೊರಗೆಡವಿದ್ದಾನೆ. ನನಗೆ ಚಿಕ್ಕವಯಸ್ಸಿನಿಂದಲೂ ನಮ್ಮ ಧರ್ಮದ ಬಗ್ಗೆ ಅಭಿಮಾನ ಇತ್ತು. ಹೀಗಾಗಿ ಧರ್ಮದ ಬಗ್ಗೆ ಅವಹೇಳನ ಸಹಿಸುತ್ತಿರಲಿಲ್ಲ. ಮುಸ್ಲಿಮರ ಬಳಿ ವ್ಯಾಪಾರ ಮಾಡಬೇಡಿ. ಹಿಜಬ್ ಸಂಬಂಧ ಹೋರಾಟ ಶುರುವಾಗಿತ್ತು. ಈ ಬಗ್ಗೆ ಆಕ್ರೋಶ ಹೊರಹಾಕಲು ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದಿದ್ದೆ. ಬಳಿಕ ಪ್ರಚೋದನಕಾರಿ ಪೋಸ್ಟ್ ಹಾಕುತ್ತಿದ್ದೆ ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ – ಶಾಲಾ, ಕಾಲೇಜುಗಳಿಗೆ ರಜೆ
ನನ್ನ ಪೋಸ್ಟ್‌ಗೆ ಲೈಕ್, ಕಾಮೆಂಟ್ ಮಾಡುತ್ತಿದ್ದ ಪಶ್ಚಿಮ ಬಂಗಾಳದ ವ್ಯಕ್ತಿ ಮೂಲಕ ಅಲ್‍ಕೈದಾ ಉಗ್ರರು ಪರಿಚಿತರಾದರು. ಅವರು ನನಗೆ ಇ-ಬುಕ್ ಕಳುಹಿಸುತ್ತಿದ್ದರು. ಎಲ್ಲ ಸೌಕರ್ಯ ಕೊಡುವುದಾಗಿ ಹೇಳಿದ್ದರು. ಹೀಗಾಗಿ ನಾನು ಉಗ್ರನಾಗಲು ತೀರ್ಮಾನ ತೆಗೆದುಕೊಂಡೆ ಎಂದು ಶಂಕಿತ ಅಕ್ತರ್ ಹುಸೇನ್ ಸತ್ಯ ಬಹಿರಂಗ ಪಡಿಸಿದ್ದಾನೆ. ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣಕ್ಕೆ ತಿರುವು – ಉಗ್ರ ಸಂಘಟನೆಯೊಂದರ ಕೈವಾಡ: ಎನ್‍ಐಎ