ಶಿವಮೊಗ್ಗ: ಶಂಕಿತ ಉಗ್ರ (Suspected Terrorist) ಅಬ್ದುಲ್ ಮತೀನ್ ತಂದೆ ಮನ್ಸೂರ್ ಅಹಮ್ಮದ್ ಹೈ ಬಿಪಿಯಿಂದ (High BP) ಜಿಲ್ಲೆಯ ತೀರ್ಥಹಳ್ಳಿ ಸೊಪ್ಪುಗುಡ್ಡೆ ನಿವಾಸದಲ್ಲಿ ಮೃತಪಟ್ಟಿದ್ದಾರೆ.
ಮೃತ ಮನ್ಸೂರ್ ಅಹಮ್ಮದ್ (57) ಭಾರತೀಯ ಸೇನೆಯಲ್ಲಿ (Indian Army) ಸೈನಿಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದರು. ಅವರ ಮೂರು ಮಂದಿ ಪುತ್ರರಲ್ಲಿ ಉಗ್ರ ಅಬ್ದುಲ್ ಮತೀನ್ ಮೊದಲ ಪುತ್ರ. ಇದನ್ನೂ ಓದಿ: ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ – ಇಬ್ಬರ ಸಾವು
ಶಂಕಿತ ಉಗ್ರ ಅಬ್ದುಲ್ ಮತೀನ್ ಬೆಂಗಳೂರು ಬಾಂಬ್ ಬ್ಲಾಸ್ಟ್ (Bengaluru Bomb Blast) ಸೇರಿದಂತೆ ಹಲವು ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ. ಎನ್‌ಐಎ (NIA) ಅಧಿಕಾರಿಗಳು ಮತೀನ್‌ಗಾಗಿ ಎಲ್ಲೆಡೆ ಶೋಧ ಕಾರ್ಯ ನಡೆಸಿದ್ದರು. 2020ರಿಂದ ತಲೆಮರೆಸಿಕೊಂಡಿರುವ ಮತಿನ್ ಸುಳಿವು ಕೊಟ್ಟವರಿಗೆ ಎನ್‌ಐಎ ಎರಡು ಲಕ್ಷ ರೂ. ಬಹುಮಾನ ಸಹ ಘೋಷಿಸಿದೆ. ಇದನ್ನೂ ಓದಿ: ವಿಷವುಣಿಸಿ 18 ಶ್ವಾನಗಳ ಹತ್ಯೆ – ಬೆಂಗ್ಳೂರಲ್ಲೊಂದು ಅಮಾನವೀಯ ಘಟನೆ
ಇದೀಗ ಅನಾರೋಗ್ಯದಿಂದ ಆತನ ತಂದೆ ಮೃತಪಟ್ಟಿದ್ದು, ಮೃತದೇಹವನ್ನು ಸೊಪ್ಪುಗುಡ್ಡೆಯ ಮಸೀದಿಯಲ್ಲಿ ಇರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಇಂದು ಸಂಜೆಯ ವೇಳೆಗೆ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಲಿದ್ದಾರೆ. ಮೃತರ ನಿವಾಸದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಪ್ರೇಮಿಯೊಂದಿಗೆ ಸರಸವಾಡಲು ಸ್ಕೆಚ್ ಹಾಕಿ ಪತಿಯನ್ನೇ ಮುಗಿಸಿದ ಕೇಡಿ ಲೇಡಿ
Web Stories