ಭುವನೇಶ್ವರ್: ಒಡಿಶಾದ (Odisha) ಜಗತ್‍ಸಿಂಗ್‍ಪುರ ಜಿಲ್ಲೆಯ ಪರದೀಪ್ ಕರಾವಳಿಯಲ್ಲಿ ಮೈಕ್ರೋ ಕ್ಯಾಮೆರಾ ಅವಳವಡಿಸಿದ್ದ ಪಾರಿವಾಳವನ್ನು (Pigeon) ಸೆರೆ ಹಿಡಿದಿದ್ದು, ಬೇಹುಗಾರಿಕೆಗೆ (Spy) ಬಳಸಿರುವುದಾಗಿ ಎಂದು ಪೊಲೀಸರು ಶಂಕಿಸಿದ್ದಾರೆ.
ಒಡಿಶಾದ ಜಗತ್‍ಸಿಂಗ್‍ಪುರ ಜಿಲ್ಲೆಯ ಪರದೀಪ್ ಕರಾವಳಿಯಲ್ಲಿ ಮೀನುಗಾರರು ಕೆಲವು ದಿನಗಳ ಹಿಂದೆ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಈ ವೇಳೆ ಆ ಮೀನುಗಾರರ ದೋಣಿಯ ಮೇಲೆ ಒಂದು ಪಾರಿವಾಳ ಕುಳಿತಿರುವುದನ್ನು ಮೀನುಗಾರರು ಗಮನಿಸಿದ್ದಾರೆ. ಅಷ್ಟೇ ಅಲ್ಲದೇ ಆ ಪಾರಿವಾಳದ ಕಾಲಿಗೆ ಮೈಕ್ರೊ ಕ್ಯಾಮೆರಾವನ್ನು (Camera) ಬಳಸಿರುವುದನ್ನು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣ ಎಚ್ಚೆತ್ತುಕೊಂಡ ಮೀನುಗಾರರು ತಮ್ಮ ಟ್ರಾಲರ್‌ನಲ್ಲಿ ಪಾರಿವಾಳವನ್ನು ಸೆರೆ ಹಿಡಿದರು. ನಂತರ ಅದನ್ನು ಮೆರೈನ್ ಪೊಲೀಸರಿಗೆ ಒಪ್ಪಿಸಿದರು.
ಇದಾದ ಬಳಿಕ ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈ ಬಗ್ಗೆ ಜಗತ್‍ಸಿಂಗ್‍ಪುರ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಪಿಆರ್ ಮಾತನಾಡಿ, ಪಶುವೈದ್ಯರು ಪಾರಿವಾಳವನ್ನು ಪರೀಕ್ಷಿಸುತ್ತಿದ್ದಾರೆ. ಅದರ ಕಾಲುಗಳಿಗೆ ಜೋಡಿಸಲಾದ ಸಾಧನಗಳನ್ನು ಪರೀಕ್ಷಿಸಲು ರಾಜ್ಯ ವಿಧಿವಿಜ್ಞಾನ ಪ್ರಯೋಗಾಯಲಯದ ಸಹಾಯವನ್ನು ಪಡೆಯುತ್ತೇವೆ ಎಂದು ತಿಳಿಸಿದರು.
ಪಾರಿವಾಳದ ರೆಕ್ಕೆಗೆಳ ಮೇಲೆ ಏನೋ ಬರೆಯಲಾಗಿದ್ದು, ಬೇರೆ ಭಾಷೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಏನು ಬರೆಯಲಾಗಿದೆ ಎಂಬುದನ್ನು ಪತ್ತೆ ಹಚ್ಚಲು ತಜ್ಞರ ಸಹಾಯವನ್ನು ಪಡೆಯಲಾಗುವುದು ಎಂದು ಎಸ್ಪಿ ತಿಳಿಸಿದರು. ಇದನ್ನೂ ಓದಿ: ಪೋಷಕರೇ ಎಚ್ಚರ- ಮಕ್ಕಳಲ್ಲಿ ಹೆಚ್ಚಾಗ್ತಿದೆ ಆಡಿನೋ ವೈರಸ್..!
ಈ ಪಾರಿವಾಳವನ್ನು ಹಿಡಿದ ಮೀನುಗಾರ ಸಾರಥಿ ಎಂಬಾತ ಮಾತನಾಡಿ, ಪಾರಿವಾಳ ದೋಣಿಯ ಮೇಲೆ ಕುಳಿತಿರುವುದನ್ನು ನೋಡಿದೆ. ಈ ವೇಳೆ ಆ ಪಾರಿವಾಳದ ಕಾಲುಗಳಿಗೆ ಕೆಲವು ಸಾಧನಗಳನ್ನು ಕಟ್ಟಿರುವುದನ್ನು ಗಮನಿಸಿದೆ. ಅಷ್ಟೇ ಅಲ್ಲದೇ ಅದರ ರೆಕ್ಕೆ ಮೇಲೆ ಏನೋ ಬರೆಯಲಾಗಿತ್ತು. ಆದರೆ ಅದು ಓಡಿಶಾ ಅಲ್ಲದ್ದರಿಂದ ಅರ್ಥವಾಗಿರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಮಾರ್ಚ್ 11ಕ್ಕೆ ಇಡಿ ಮುಂದೆ ಹಾಜರಾಗಲಿದ್ದಾರೆ KCR ಪುತ್ರಿ ಕವಿತಾ