Bengaluru CityDistrictsKarnatakaLatestMain Post

ವಿದೇಶ ಪ್ರಯಾಣದ ಹೆಸರಿನಲ್ಲಿ ಶಂಕಿತ PFI ನಾಯಕರು ಪರಾರಿ?

ಬೆಂಗಳೂರು: ರಾಷ್ಟ್ರೀಯ ತನಿಖಾ ದಳ(NIA) ದಾಳಿಯಿಂದ ಎಚ್ಚೆತ್ತ ನೂರಕ್ಕೂ ಹೆಚ್ಚಿನ ಶಂಕಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(PFI) ನಾಯಕರು ವಿದೇಶಿ ಪ್ರಯಾಣದ ಹೆಸರಿನಲ್ಲಿ ಪರಾರಿಯಾಗಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

ದಾಳಿಗೂ ಮೊದಲು ಒಂದು ವಾರ, ಹದಿನೈದು ದಿನಕ್ಕೆ ಪ್ರವಾಸ ಹೋಗಿದ್ದ ನಾಯಕರು ಮತ್ತಷ್ಟು ದಿನ ಟ್ರಿಪ್ ಮುಂದುವರಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಬಂಧನಕ್ಕೆ ಒಳಗಾದ 15 ಆರೋಪಿಗಳಿಗೆ ನವೆಂಬರ್ 3ರವರೆಗೆ ಎನ್‍ಐಎ ವಿಶೇಷ ನ್ಯಾಯಾಲಯದ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಮೆಟಲ್‌ ಡಿಟೆಕ್ಟರ್‌ ಪತ್ತೆ:
ಉಗ್ರ ಸಂಘಟನೆಗಳಿಗೆ ಕುಮ್ಮಕ್ಕಿನ ಮೇಲೆ ಪಿಎಫ್‍ಐ ಸಂಘಟನೆಗಳ ಮೇಲೆ ರೇಡ್ ಮಾಡಿದ್ದ ಎನ್‍ಐಎಗೆ ದಿನಕ್ಕೊಂದು ಸ್ಫೋಟಕ ಮಾಹಿತಿ ಸಿಗುತ್ತಿದೆ. ಬೆಂಗಳೂರಿನ ಎಸ್‍ಕೆ ಗಾರ್ಡನ್ ಬಳಿಯ ಪಿಎಫ್‍ಐ ಕಚೇರಿಯಲ್ಲಿ 2 ಹ್ಯಾಂಡ್ ಮೆಟಲ್ ಡಿಟೆಕ್ಟರ್(Metal Detector) ಪತ್ತೆಯಾಗಿತ್ತು. ಈ ಬಗ್ಗೆ ಬಂಧಿತರ ಬಾಯಿಬಿಡಿಸಿದಾಗ ಎನ್‍ಐಎಗೆ ಆಘಾತಕಾರಿ ಸತ್ಯ ತಿಳಿದು ಬಂದಿದೆ. ಇದನ್ನೂ ಓದಿ: PFI ಮೊಬೈಲ್‌ ರಿಟ್ರೀವ್‌ – ಹತ್ಯೆಯಾದವರು, ಹತ್ಯೆ ಮಾಡಿದವರ ವಿವರಕ್ಕೆ ಬಳಕೆಯಾಗ್ತಿತ್ತು ಒಂದು ವಿಶೇಷ ಆ್ಯಪ್‍

ಯಾವ ವಸ್ತುವನ್ನು ತೆಗೆದುಕೊಂಡು ಹೋದರೆ ಡಿಟೆಕ್ಟರ್ ಪತ್ತೆ ಮಾಡುತ್ತದೆ? ಯಾವ ವಸ್ತುಗಳನ್ನು ತೆಗೆದುಕೊಂಡು ಹೋದರೆ ಪತ್ತೆ ಮಾಡುವುದಿಲ್ಲ ಎಂಬುದರ ಬಗ್ಗೆ ಪ್ರಯೋಗಗಳು ನಡೆಯುತ್ತಿದ್ದವು ಎಂಬುದರ ಬಗ್ಗೆ ಬಂಧಿತರು ಬಾಯ್ಬಿಟ್ಟಿದ್ದಾರೆ. ಹೀಗಾಗಿ ಈ ಪ್ರಯೋಗ ನಡೆಸುತ್ತಿದ್ದ ಉದ್ದೇಶವೇನು? ಮತ್ತೆ ಯಾರೆಲ್ಲಾ ಈ ಟ್ರೈನಿಂಗ್ ಮಾಡುತ್ತಿದ್ದರು ಎಂಬ ವಿಷಯದ ಬಗ್ಗೆ ತನಿಖೆ ಮುಂದುವರಿದಿದೆ.

Live Tv

Leave a Reply

Your email address will not be published. Required fields are marked *

Back to top button