ಬೆಂಗಳೂರು: ದೆಹಲಿಯಲ್ಲಿ ಲಷ್ಕರ್ ಎ ತೈಬಾ (LeT) ಉಗ್ರ ಸಂಘಟನೆಯ ಶಂಕಿತರು ಬಂಧನವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ( G Parameshwar) ತಿಳಿಸಿದ್ರು.
ನಾವೂ ಕೂಡಾ ರಾಜ್ಯದಲ್ಲಿ ಆಂತರಿಕವಾಗಿ ಅಲರ್ಟ್ ಮಾಡಿದ್ದೇವೆ. ನಮ್ಮ ಐಎಸ್‌ಡಿ ವಿಭಾಗಕ್ಕೆ ಅಲರ್ಟ್ ಮಾಡಿದ್ದೇವೆ. ಅಲ್ಲಿ ಬಂಧಿತ ಶಂಕಿತರಲ್ಲಿ ಬಾಂಗ್ಲಾದವ್ರೂ ಇದ್ದಾರೆ. ನಮ್ಮಲ್ಲಿ ಬಾಂಗ್ಲಾವಾಸಿಗಳ (Bangladeshis) ಪತ್ತೆ ಮಾಡುವ ಕಾರ್ಯಾಚರಣೆ ನಡೀತಿದೆ. ಕಳೆದ ಒಂದು ತಿಂಗಳಿಂದ ಪ್ರತೀ ಸ್ಟೇಷನ್ ವ್ಯಾಪ್ತಿಯಲ್ಲಿ ಅಭಿಯಾನ ನಡೀತಿದೆ ಅಂತ ಪರಮೇಶ್ವರ್ ಹೇಳಿದ್ರು. ಇದನ್ನೂ ಓದಿ: ಸಿದ್ದರಾಮಯ್ಯರ ರಾಜಕೀಯ ಅಡಿಪಾಯವೇ ಸಾಮಾಜಿಕ ನ್ಯಾಯ: ಪರಮೇಶ್ವರ್ ಬ್ಯಾಟಿಂಗ್

ಶಾಂತಿಯುತ ರಂಜಾನ್ ಆಚರಣೆಗೆ ಕರೆ
ಇನ್ನೂ ರಂಜಾನ್ ಹಬ್ಬ ಹಾಗೂ ಹೋಳಿ ಹಬ್ಬ ಆಚರಣೆ ವೇಳೆ ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಕೊಡಬಾರದು. ಸಂತೋಷದಿಂದ ಹಬ್ಬ ಆಚರಿಸಬೇಕು. ಅದನ್ನು ಬಿಟ್ಟು ಬೇರೆ ರೀತಿಯಲ್ಲಿ ನಡೆಸಲು ಆವಕಾಶವಿಲ್ಲ. ಅದಕ್ಕೆ ಅವಕಾಶ ಕೊಡುವುದೂ ಇಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮೊಬೈಲ್ ಬ್ಯಾನ್ ವಿಚಾರದ ಕುರಿತು ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್ ಮಾಡುವ ಬಗ್ಗೆ ಚಿಂತನೆ ನಡೆದಿದೆ. 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಕೊಟ್ಟರೆ ವಿದ್ಯಾಭ್ಯಾಸದ ಮೇಲೆ ಬೇರೆ ರೀತಿಯ ಪರಿಣಾಮ ಬೀರುತ್ತಿದೆ. ಬಹಳಷ್ಟು ದೇಶಗಳಲ್ಲಿ ಅಧ್ಯಯನ ನಡೆಸಿ ಮೊಬೈಲ್ ಬ್ಯಾನ್ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಕೂಡ ಚಿಂತನೆ ಹರಿಸಿದ್ದಾರೆ. ಇದರ ಸಾಧಕ ಬಾಧಕಗಳನ್ನು ಅಧ್ಯಯನ ನಡೆಸಿ ತೀರ್ಮಾನ ಮಾಡುತ್ತಾರೆ ಎಂದರು.

ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸುವ ವಿಚಾರದ ಕುರಿತು ಮಾತನಾಡಿ, ಚುನಾವಣೆ ತಂದರೆ ವಿದ್ಯಾರ್ಥಿಗಳ ನಡುವೆ ಗುಂಪುಗಳಾಗಿ ಹೊಡೆದಾಡಿಕೊಳ್ಳುತ್ತಾರೆ ಎಂಬ ಕಾರಣದಿಂದ ಈ ಹಿಂದೆ ನಿಷೇಧಿಸಲಾಗಿತ್ತು. ನಾನು ಉನ್ನತ ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿ ಸಿಂಡಿಕೇಟ್ ಚುನಾವಣೆಯನ್ನು ಬ್ಯಾನ್ ಮಾಡಲಾಯಿತು. ಈಗ ವಿದ್ಯಾರ್ಥಿ ಚುನಾವಣೆ ನಡೆಸುವ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕೆಂಬ ಒತ್ತಡ ಬರುತ್ತಿದೆ. ಈ ಬಗ್ಗೆ ಕ್ಯಾಬಿನೆಟ್ ಏನು ನಿರ್ಧಾರ ಮಾಡುತ್ತದೆ ನೋಡಬೇಕು ಎಂದು ಪರಮೇಶ್ವರ್ ಹೇಳಿದರು. ಇದನ್ನೂ ಓದಿ: ಒಳ ಮೀಸಲಾತಿಯಲ್ಲಿರೋ ಗೊಂದಲ ನಿವಾರಣೆ ಮಾಡಿ – ರಾಜ್ಯಪಾಲರಿಗೆ ಬಿಜೆಪಿ ನಿಯೋಗ ದೂರು

