ಮಂಡ್ಯ: ಪತಿಗೆ ಅನೈತಿಕ ಸಂಬಂಧವಿರುವುದಾಗಿ ಶಂಕಿಸಿ, ಪತಿಯ ಜಿಮ್‌ನಲ್ಲೇ ಪತ್ನಿ ನೇಣಿ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ (Mandya) ಜಿಲ್ಲೆ ಮದ್ದೂರು (Maddur) ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನಡೆದಿದೆ.
ಮೃತಳನ್ನು ದಿವ್ಯ (27) ಎಂದು ಗುರುತಿಸಲಾಗಿದೆ. ದಿವ್ಯ ಹಾಗೂ ಗಿರೀಶ್ 7 ವರ್ಷಗಳ ಹಿಂದೆ ವಿವಾಹವಾಗಿದ್ದರು. ಎರಡು ಮಕ್ಕಳಿದ್ದವು. ಗಿರೀಶ್ ಕೆಸ್ತೂರು ಗ್ರಾಮದಲ್ಲಿ ವೈಭವ್ ಎಂಬ ಜಿಮ್ ಆರಂಭಿಸುವಾಗ ದಿವ್ಯ ಮನೆಯವರು 10 ಲಕ್ಷ ರೂ.ಯನ್ನು ನೀಡಿದ್ದರು. ಆದರೆ ಇತ್ತೀಚಿಗೆ ಗಿರೀಶ್ ಬೇರೊಬ್ಬರ ಜೊತೆ ಅನೈತಿಕ ಸಂಬಂಧವಿರುವುದಾಗಿ ದಿವ್ಯ ಶಂಕಿಸಿದ್ದರು. ಈ ವಿಚಾರವನ್ನ ಕುಟುಂಬಸ್ಥರ ಬಳಿ ದಿವ್ಯ ಹೇಳಿಕೊಂಡಿದ್ದರು.ಇದನ್ನೂ ಓದಿ: ಸದ್ಯ ಯಾವುದೇ ನೋಟಿಸ್ ಬಂದಿಲ್ಲ, ಬಂದ್ರೆ ಉತ್ತರಿಸುತ್ತೇನೆ – ಯತ್ನಾಳ್
Advertisement
Advertisement
ರಾಜಿಯಾಗಿದ್ದರೂ ಗಿರೀಶ್ ಕಳೆದ ಮೂರು ತಿಂಗಳಿಂದ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದು ಪತಿ ನಡೆಸುತ್ತಿದ್ದ ಜಿಮ್‌ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಳಿಕ ಪತಿ ಗಿರೀಶ್ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕೆಸ್ತೂರು ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.
Advertisement
ಗೃಹಣಿಯ ಸಂಬಂಧಿಕರು ಜಿಮ್‌ನಲ್ಲಿದ್ದ ಎಲ್ಲಾ ಪೀಠೋಪಕರಣಗಳು ಧ್ವಂಸಗೊಳಿಸಿದ್ದು, ಪತಿ ಗಿರೀಶ್ ಹಾಗೂ ಆತನ ತಾಯಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಜೊತೆಗೆ ಇಬ್ಬರನ್ನು ಬಂಧಿಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ. ಸದ್ಯ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಸಿದ್ದರಾಮಯ್ಯ 660 ಕೆವಿ ಕರೆಂಟ್, ಮುಟ್ಟಿದ್ರೆ ಸುಟ್ಟು ಹೋಗ್ತಾರೆ: ಮುನಿರತ್ನ