ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್ ಇಟ್ಟು ಪರಾರಿಯಾಗಿರುವ ಬಾಂಬರ್ ಬಿಎಂಟಿಸಿ ವೋಲ್ವೋ ಬಸ್ಸಿನಲ್ಲಿ (BMTC Volvo Bus) ಪ್ರಯಾಣಿಸಿದ ದೃಶ್ಯ ಈಗ ಸೆರೆಯಾಗಿದೆ.
ಬೆಳಗ್ಗೆ 11:32ಕ್ಕೆ ರಾಮೇಶ್ವರಂ ಕೆಫೆಯನ್ನು ಪ್ರವೇಶಿಸಿ ರವೆ ಇಡ್ಲಿಯನ್ನು ಖರೀದಿಸುತ್ತಾನೆ. ಕೇವಲ 9 ನಿಮಿಷದಲ್ಲಿ ರವೆ ಇಡ್ಲಿ ತಿಂದ ಬಾಂಬರ್ ಬಂಬ್ ಇಟ್ಟು 11:41ಕ್ಕೆ ಕೆಫೆಯಿಂದ ತೆರಳುತ್ತಾನೆ. ನಂತರ ಈತ ಕುಂದಲಹಳ್ಳಿಯಿಂದ ಕಾಡುಗೋಡಿಗೆ ಹೋಗುವ ವೋಲ್ವೋ ಬಸ್ಸು ಹತ್ತಿದ್ದಾನೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕೊನೆಗೂ ಬೆಂಗಳೂರಲ್ಲಿ ವಾಟರ್ ಟ್ಯಾಂಕರ್‌ಗೆ ದರ ಫಿಕ್ಸ್ – ಎಷ್ಟು ಕಿ.ಮೀಗೆ ಎಷ್ಟು ದರ?
Advertisement
Advertisement
KA 01 F 4517 ನಂಬರಿನ ಬಸ್ ಹತ್ತಿ ನಂತರ ಮಧ್ಯ ಭಾಗಕ್ಕೆ ಬಂದಿದ್ದಾನೆ. ಮಧ್ಯ ಭಾಗಕ್ಕೆ ಬಂದ ನಂತರ ಬಸ್ಸಿನಲ್ಲಿ ಸಿಸಿಟಿವಿ (CCTV) ಇರುವುನ್ನು ನೋಡುತ್ತಾನೆ. ಮಧ್ಯ ಭಾಗದಲ್ಲಿ ಕುಳಿತುಕೊಂಡರೆ ನಾನು ಸೆರೆಯಾಗುತ್ತೇನೆ ಎಂಬುದನ್ನು ಅರಿತ ಆರೋಪಿ ಮುಂದುಗಡೆ ಡ್ರೈವರ್ (Driver) ಬಳಿ ಇರುವ ಸೀಟಿನಲ್ಲಿ ಕುಳಿತುಕೊಂಡಿದ್ದಾನೆ. ಸಾಧ್ಯವಾದಷ್ಟು ಆತುರ ಆತುರವಾಗಿಯೇ ಬಸ್ಸಿನಲ್ಲಿ ಬಾಂಬರ್ ಓಡಾಡಿದ್ದಾನೆ.
Advertisement
ಐಟಿಪಿಎಲ್‌ನಿಂದ (ITPL) ಬಸ್‌ನಲ್ಲಿ ಆಗಮಿಸಿದ ಈತ ಬೆಳಗ್ಗೆ 10:45ಕ್ಕೆ ಕುಂದಲಹಳ್ಳಿ ಬಸ್ ನಿಲ್ದಾಣದಲ್ಲಿ (Bus Stand) ಇಳಿದಿದ್ದ. ಅಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಕಾಲ ಕಳೆದು ಟೈಮರ್ ಫಿಕ್ಸ್ ಮಾಡಿ ನಂತರ ನಡೆದುಕೊಂಡು ಬಂದಿದ್ದ.
Advertisement
ಮಾಸ್ಕ್ ಮತ್ತು ಹ್ಯಾಟ್ ಧರಿಸಿದ್ದ ಆರೋಪಿ ನಡೆದುಕೊಂಡು ಬರುವಾಗ ಎಲ್ಲಿಯೂ ಪಾದಚಾರಿ ಮಾರ್ಗದಲ್ಲಿ ಆಗಮಿಸದೇ ರಸ್ತೆಯಲ್ಲೇ ಹೆಜ್ಜೆ ಹಾಕಿದ್ದ. ಪಾದಚಾರಿ ಮಾರ್ಗದಲ್ಲಿ ನಡೆದರೆ ತನ್ನ ಚಹರೆ ಸುಲಭವಾಗಿ ಸಿಗಬಹುದು ಎಂಬ ಕಾರಣಕ್ಕೆ ರಸ್ತೆಯಲ್ಲೇ ನಡೆದುಕೊಂಡು ಕೆಫೆಯತ್ತ ಹೆಜ್ಜೆ ಹಾಕಿದ್ದ. ಇದನ್ನೂ ಓದಿ: ದಕ್ಷಿಣ ಗೆಲ್ಲಲು AI ಮೊರೆ ಹೋದ ಮೋದಿ – ವಿಶ್ವದಲ್ಲೇ ಮೊದಲು ಎಂದ ಬಿಜೆಪಿ
ಪಾದಚಾರಿ ಮಾರ್ಗ ಬಿಟ್ಟು ರಸ್ತೆಯಲ್ಲಿ ನಡೆದಿರುವುದು, ಡಮ್ಮಿ ಫೋನ್ ಬಳಸಿರುವುದು, ತಲೆಯನ್ನು ಕೆಳಗಡೆ ಹಾಕಿ ಹೆಜ್ಜೆ ಹಾಕಿರುವುದು, ಪರಿಚಯ ಸಿಗದೇ ಇರಲು ಮಾಸ್ಕ್ ಮತ್ತು ಹ್ಯಾಟ್ ಧರಿಸಿರುವುದನ್ನು ನೋಡಿದಾಗ ಆರೋಪಿ ಮೊದಲೇ ಬಹಳ ಸಿದ್ಧತೆ ನಡೆಸಿ ಕೃತ್ಯ ಎಸಗಿರುವುದು ಸ್ಪಷ್ಟವಾಗುತ್ತಿದೆ.