ಬೆಳಗಾವಿ: ಎನ್‍ಡಿಪಿಎಸ್ (NDPS) ಪ್ರಕರಣದಲ್ಲಿ ಪೊಲೀಸ್ (Police) ವಶದಲ್ಲಿದ್ದ ಆರೋಪಿಯೊಬ್ಬ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ಪ್ರಕರಣವನ್ನು ಕಮಿಷನರ್ ಡಾ.ಎಂ.ಬಿ.ಬೋರಲಿಂಗಯ್ಯ ಸಿಐಡಿ (CID) ತನಿಖೆಗೆ ಶಿಫಾರಸು ಮಾಡಿದ್ದಾರೆ.
Advertisement
ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಬಸನಗೌಡ ಈರನಗೌಡ ಪಾಟೀಲ್ (45) ಸಾವನ್ನಪ್ಪಿದ ಆರೋಪಿ. ನಿನ್ನೆ ಸಂಜೆ ಗಾಂಜಾ ಪ್ರಕರಣದಲ್ಲಿ ಬೆಳಗಾವಿ ಗ್ರಾಮೀಣ ಪೊಲೀಸರು ಬಸನಗೌಡ ಈರನಗೌಡ ಪಾಟೀಲ್‍ನನ್ನು ಬಂಧಿಸಿ ಕರೆತರುವಾಗ ಕಾಕತಿ ಗ್ರಾಮದ ಮಾರ್ಗಮಧ್ಯೆಯೇ ಆತನ ಆರೋಗ್ಯ ಹದಗೆಟ್ಟಿದೆ. ಈ ವೇಳೆ ಪೊಲೀಸರು ಪ್ರಾಥಮಿಕ ಚಿಕಿತ್ಸೆ ನೀಡಿ ಆತನ ಆರೋಗ್ಯ ಸುಧಾರಿಸಿದ ನಂತರ ಠಾಣೆಗೆ ಕರೆತಂದು ಮತ್ತೆ ವಿಚಾರಣೆಗೆ ಒಳಪಡಿಸುವ ಸಮಯದಲ್ಲಿ ಆರೋಪಿ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಇದನ್ನೂ ಓದಿ: ಬೆಳಗಾವಿ ಲಾಕಪ್‌ಡೆತ್ ಕೇಸ್: ಪೊಲೀಸರಿಂದ್ಲೇ ಚಿತ್ರಹಿಂಸೆ – ಮೃತನ ಪುತ್ರಿ ಆರೋಪ
Advertisement
Advertisement
ಬಳಿಕ ಆರೋಪಿಯನ್ನು ಬೀಮ್ಸ್‌ಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಆರೋಪಿ ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದ್ದಾನೆ. ಸದ್ಯ ಪ್ರಕರಣವನ್ನು ಸಿಐಡಿ ತನಿಖೆ ನಡೆಸುವಂತೆ ಶಿಫಾರಸು ಮಾಡಲಾಗಿದೆ ಎಂದು ಡಿಸಿಪಿ ರವೀಂದ್ರ ಗಡಾದಿ ತಿಳಿಸಿದ್ದಾರೆ. ಇದನ್ನೂ ಓದಿ: ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಅರೆಬರೆ ವಸ್ತ್ರ ಧರಿಸಿದವರ ಸಂಚಾರಕ್ಕೆ ನಿಷೇಧ!