– ನನ್ನ ಕುಗ್ಗಿಸಲು ಹಲವು ಪ್ರಯತ್ನ ನಡೆದಿದೆ ಎಂದ ಸಾಮಾಜಿಕ ಕಾರ್ಯಕರ್ತ
– ಪ್ರಸಾದ್ ಅತ್ತಾವರ ವಿರುದ್ಧ ಮತ್ತೊಂದು ಎಫ್ಐಆರ್
ಮೈಸೂರು: ಮುಡಾ ಹಗರಣ (MUDA Case) ಬಯಲಿಗೆಳೆದ ಸಾಮಾಜಿಕ ಕಾರ್ಯಕರ್ತ ಸ್ನೇಹಿಮಯಿ ಕೃಷ್ಣ (Snehamayi Krishna) ಅವರನ್ನು ಬಲಪಡಿಸಲು ಪ್ರಾಣಿಬಲಿ ಕೊಟ್ಟಿರುವ ಶಂಕೆ ವ್ಯಕ್ತವಾಗಿದೆ.
Advertisement
ಮಂಗಳೂರಿನಲ್ಲಿ (Mangaluru) ಸ್ನೇಹಮಯಿ ಕೃಷ್ಣ ಅವರ ಹೆಸರಿನಲ್ಲಿ ವಾಮಾಚಾರ ನಡೆದಿದೆ ಎನ್ನಲಾಗಿದೆ. ದೇವಿ ಮುಂದೆ ಸ್ನೇಹಮಯಿ ಕೃಷ್ಣ ಅವರ ಭಾವಚಿತ್ರ ಇಡಲಾಗಿದೆ. ಜೊತೆಗೆ ದೇವಿಗೆ ರಕ್ತಾಭಿಷೇಕ ಮಾಡಿರುವ ಫೋಟೋ ರಿವೀಲ್ ಆಗಿದೆ. ಇದನ್ನೂ ಓದಿ: ಮುಡಾ ಹಗರಣದಲ್ಲಿ ಅಕ್ರಮ ಹಣದ ವರ್ಗಾವಣೆಯಾಗಿದೆ – ಇಡಿಯಿಂದ ಸಬ್ ರಿಜಿಸ್ಟ್ರಾರ್ಗಳಿಗೆ 104 ಪುಟಗಳ ಪತ್ರ
Advertisement
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ನೇಹಮಯಿ ಕೃಷ್ಣ, ಯಾವ ಕಾರಣಕ್ಕೆ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ನನ್ನ ಪರವಾಗಿ ಅಥವಾ ನನಗೆ ಶಕ್ತಿ ತುಂಬಲು ಈ ರೀತಿ ಮಾಡಿಲ್ಲ. ಹರ್ಷ ಮತ್ತು ಶ್ರೀನಿಧಿ ನನ್ನ ಬಳಿಗೆ ಪಾರ್ವತಿ ಸಿದ್ದರಾಮಯ್ಯ ಪರವಾಗಿ ಬಂದಿದ್ದರು. ಅವರ ಪರವಾಗಿ ಬಂದು ಆಮಿಷವೊಡ್ಡಿದ್ದರು. ಇದರಿಂದ ನನ್ನ ಪರ ಹೇಗೆ ಅನ್ನುವುದು ಗೊತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.
Advertisement
ಬ್ಲಾಕ್ ಟೀ ಶರ್ಟ್ ಹಾಕಿರುವ ವ್ಯಕ್ತಿ ನಮ್ಮ ಬಾಸ್ ಅಂತ ಶ್ರೀನಿಧಿ ಮತ್ತು ಹರ್ಷ ನನ್ನ ಮಗನಿಗೆ ಪೋಟೋ ತೋರಿಸಿದ್ದಾರೆ. ಇವರು ಮಂಗಳೂರಿನಲ್ಲಿ ಇದ್ದಾರೆ. ಇವರು ಹೇಳಿದ್ದಂತೆ ಮಾಡುತ್ತೇವೆ ಎಂದಿದ್ದರು. ನನ್ನ ಪರವಾಗಿ ಅಲ್ಲ, ನನ್ನ ವಶಪಡಿಸಿಕೊಳ್ಳಲು ಈ ರೀತಿ ಮಾಡಿರಬಹುದು. ಹಲವು ರೀತಿ ನನ್ನ ಕುಗ್ಗಿಸುವ ಹಲವು ಪ್ರಯತ್ನ ನಡೆದಿದೆ. ಅದರಲ್ಲಿ ಇದು ಒಂದಾಗಿದೆ ಎಂದರು. ಇದನ್ನೂ ಓದಿ: ಮುಡಾ ಕೇಸ್ನಲ್ಲಿ ಸಿಎಂ ಪರ ನಾವೆಲ್ಲ ನಿಂತುಕೊಳ್ತೀವಿ – ಪರಮೇಶ್ವರ್
ಅವರು ಏನೇ ಪ್ರಯತ್ನ ಪಟ್ಟರೂ, ನನ್ನ ಹೋರಾಟ ನಿಲ್ಲಿಸಲ್ಲ ಎಂದು ಸ್ಪಷ್ಟಪಡಿಸಿದರು.
ಸಲೂನ್ವೊಂದರ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ವಿಚಾರಣೆ ವೇಳೆ ಪ್ರಸಾದ್ ಅತ್ತಾವರ ಮೊಬೈಲ್ನಲ್ಲಿ ಪ್ರಾಣಿ ಬಲಿ ಕೊಟ್ಟಿರುವ ಫೋಟೋ ಬಯಲಾಗಿದೆ. ಹಣ ತುಂಬಿದ ಬ್ಯಾಗ್ನ ಫೋಟೋವನ್ನು ಹೆಂಡತಿಗೆ ಪ್ರಸಾದ್ ಕಳುಹಿಸಿದ್ದ. ಇದನ್ನೂ ಓದಿ: ಮುಡಾ 50:50 ಸೈಟು ಹಗರಣ – ಜೆಡಿಎಸ್ ಶಾಸಕ ಜಿಟಿಡಿ, ಪುತ್ರ ಹರೀಶ್ ಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು
ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಎಲ್ಲವನ್ನೂ ಉಲ್ಲೇಖಿಸಿದ್ದಾರೆ. ಪೂಜೆಯ ಮಧ್ಯವರ್ತಿಯಾಗಿ ಪ್ರಸಾದ್ ಅತ್ತಾವರ ಭಾಗವಹಿಸಿರುವ ಶಂಕೆ ವ್ಯಕ್ತವಾಗಿದೆ.