ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಹಾಯದಿಂದಾಗಿ ಪಾಕಿಸ್ತಾನದ ಮೂಲದ ಕುಟುಂಬವೊಂದು ಮಗನ ಚಿಕಿತ್ಸೆಗೆ ಭಾರತಕ್ಕೆ ಆಗಮಿಸಿದೆ.
ನಾಲ್ಕು ತಿಂಗಳ ಬಾಲಕ ರೋಹನ್ ಹೃದಯದಲ್ಲಿ ರಂಧ್ರ ಇರುವ ಹಿನ್ನೆಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು ಎಂದು ವೈದ್ಯರು ಹೇಳಿದ್ದರು. ಹಾಗೆ ದೆಹಲಿಯಲ್ಲಿರುವ ನೋಯ್ಡಾದ ಜೆಪಿ ಆಸ್ಪತ್ರೆಯಲ್ಲಿ ರೋಹನ್‍ಗೆ ಚಿಕಿತ್ಸೆ ನೀಡುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದರು.
Advertisement
ಭಾರತ ಮತ್ತು ಪಾಕ್ ಸಂಬಂಧ ಸರಿ ಇಲ್ಲದಿರುವುದರಿಂದ ರೋಹನ್ ಪೋಷಕರಿಗೆ ವೈದ್ಯಕೀಯ ವೀಸಾ ಸಿಕ್ಕರಲಿಲ್ಲ. ಹಾಗಾಗಿ ರೋಹನ್ ತಂದೆ ಕನ್ವಾಲ್ ಸಾಧಿಕ್ ಭಾರತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಸಂಪರ್ಕಿಸಿ, ವೈದ್ಯಕೀಯ ವೀಸಾ ಕೊಡಿಸುವಂತೆ ಮನವಿ ಮಾಡಿಕೊಂಡರು. ಸಾಧಿಕ್ ಮನವಿಗೆ ಸ್ವಂದಿಸಿ ರೋಹನ್ ಪೋಷಕರಿಗೆ ವೀಸಾ ದೊರಕಿಸುವಂತೆ ಮಾಡಿದ್ದರು.
Advertisement
ಪೋಷಕರು ಮತ್ತು ರೋಹನ್ ಸೇರಿ ಸೋಮವಾರ ಸಂಜೆ ನೋಯ್ಡಾ ಜೆಪಿ ಆಸ್ಪತ್ರೆಗೆ ಬಂದಿದ್ದಾರೆ. ಈ ಆಸ್ಪತ್ರೆ ರೋಹನ್‍ಗೆ ಚಿಕಿತ್ಸೆ ಕೊಡಿಸಲು ಮುಂದಾಗಿದೆ.