ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಮಾನ 14 ನಿಮಿಷ ರಾಡಾರ್ ಸಂಪರ್ಕ ಕಳೆದುಕೊಂಡಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.
ಶನಿವಾರ ಮಧ್ಯಾಹ್ನ 2.08ಕ್ಕೆ ಸುಷ್ಮಾ ಸ್ವರಾಜ್ ಭಾರತೀಯ ವಾಯುಪಡೆಯ ಎಂಬ್ರೆಯರ್ 135 ವಿಮಾನದಲ್ಲಿ ಪ್ರಯಾಣ ಆರಂಭಿಸಿದ್ದರು. ತಿರುವನಂತಪುರದಿಂದ ಪ್ರಯಾಣ ಆರಂಭಿಸಿದ ಸುಷ್ಮಾ ಅವರು ಮಾರಿಷಸ್‍ಗೆ ತರಳುತ್ತಿತ್ತು. ವಿಮಾನ ಸಂಜೆ 4.44ಕ್ಕೆ ಮಾಲೆಯ ಎಟಿಸಿ(ವಿಮಾನ ಸಂಚಾರ ನಿಯಂತ್ರಣ)ಯೊಂದಿಗೆ ಸಂಪರ್ಕ ಪಡೆದುಕೊಂಡಿತ್ತು. ನಂತರ ಮಾಲೆ ಎಟಿಸಿಯನ್ನು ಮಾರಿಷಸ್‍ಗೆ ವರ್ಗಾಯಿಸಿತ್ತು.
Advertisement
Advertisement
ಮಾಲೆಯಿಂದ ಮಾರಿಷಸ್‍ಗೆ ಎಟಿಸಿ ವರ್ಗಾಯಿಸುತ್ತಿದ್ದಂತೆ ವಿಮಾನ ಸಂಪರ್ಕ ಕಳೆದುಕೊಂಡಿತ್ತು. ಒಂದು ವೇಳೆ ಎಟಿಸಿ ಸಂಪರ್ಕ ಕಳೆದುಕೊಂಡಾಗ ಅಧಿಕಾರಿಗಳು 30 ನಿಮಿಷಗಳವರೆಗೆ ಕಾಯುತ್ತಾರೆ. ಆದ್ರೆ ವಿಮಾನದಲ್ಲಿ ಗಣ್ಯ ವ್ಯಕ್ತಿ ಪ್ರಯಾಣಿಸುತ್ತಿದ್ದ ಕಾರಣದಿಂದ ಭಯಗೊಂಡ ಮಾರಿಷಸ್‍ನ ಸಿಬ್ಬಂದಿ ಅಲಾರಂ ಒತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
Advertisement
ಸಂಪರ್ಕ ಕಳೆದುಕೊಂಡ ಬರೋಬ್ಬರಿ 14 ನಿಮಿಷಗಳ ಬಳಿಕ ವಿಮಾನ ಮಾರಿಷಸ್ ಎಟಿಸಿಯೊಂದಿಗೆ ಸಂಪರ್ಕ ಸಾಧಿಸಿದೆ ಎಂದು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.