ಸಕ್ರಿಯ ರಾಜಕಾರಣಕ್ಕೆ ಸುಷ್ಮಾ ಸ್ವರಾಜ್ ಪುತ್ರಿ

Public TV
2 Min Read
Sushma Swaraj Bansuri Swaraj

ನವದೆಹಲಿ: ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ (Sushma Swaraj) ಅವರ ಪುತ್ರಿ ಬಾನ್ಸುರಿ ಸ್ವರಾಜ್ ಸಕ್ರಿಯ ರಾಜಕಾರಣಕ್ಕೆ ಬಂದಿದ್ದು, ಬಿಜೆಪಿ (BJP) ಅವರನ್ನು ದೆಹಲಿಯ ಕಾನೂನು ಘಟಕದ ಸಹ ಸಂಚಾಲಕರನ್ನಾಗಿ ನೇಮಕ ಮಾಡಿದೆ.

ಬನ್ಸುರಿ ಸ್ವರಾಜ್ (Bansuri Swaraj) ಅವರು ಕಾನೂನು ಪ್ರಕ್ರಿಯೆಗಳಲ್ಲಿ ಅನುಭವ ಹೊಂದಿರುವ ವಕೀಲರಾಗಿದ್ದಾರೆ. ಈಗಾಗಲೇ ಅವರು ಸುಪ್ರೀಂ ಕೋರ್ಟ್‍ನಲ್ಲಿ (Supreme Court) ಕೆಲಸ ಮಾಡುತ್ತಿದ್ದಾರೆ.

bjp flag

ಬನ್ಸುರಿ ಸ್ವರಾಜ್‍ರ ವಿದ್ಯಾರ್ಹತೆಯೇನು?: ಇಂಗ್ಲೆಂಡ್‍ನ ವಾರ್ವಿಕ್ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿಯನ್ನು ಪಡೆದಿದ್ದಾರೆ. ನಂತರ ಲಂಡನ್‍ನ ಬಿಪಿಪಿ ಕಾನೂನು ಶಾಲೆಯಿಂದ ಪದವಿಯನ್ನು ಪಡೆದರು. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು. ಇದನ್ನೂ ಓದಿ: ಬಿಜೆಪಿ ಮಾಜಿ ಸಂಸದ ಮಂಜುನಾಥ್ ಕುನ್ನೂರು, ಪುತ್ರ ಶೀಘ್ರವೇ ಕಾಂಗ್ರೆಸ್‌ಗೆ ಸೇರ್ಪಡೆ

ಅಷ್ಟೇ ಅಲ್ಲದೇ ಕಾನೂನು ವೃತ್ತಿಯಲ್ಲಿ ಅವರಿಗೆ 16 ವರ್ಷಗಳ ಅನುಭವವಿದ್ದು, ದೆಹಲಿಯ ಬಾರ್ ಕೌನ್ಸಿಲ್‍ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್‍ನಲ್ಲಿ ಹಲವು ಹೈಪ್ರೋಫೈಲ್ ಕೇಸ್‍ಗಳಿಗೂ ವಾದಿಸಿದ್ದರು. ರಿಯಲ್ ಎಸ್ಟೇಟ್, ತೆರಿಗೆ, ಅಂತಾರಾಷ್ಟ್ರೀಯ ವಾಣಿಜ್ಯ ಮಧ್ಯಸ್ಥಿಕೆಗಳು ಮತ್ತು ಹಲವಾರು ಕ್ರಿಮಿನಲ್ ಕೇಸ್‍ಗಳನ್ನೊಳಗೊಂಡ ವಿವಾದಗಳನ್ನು ನಿಭಾಯಿಸಿದ್ದಾರೆ.

ಈ ಹಿಂದೆಯೂ ಕಾನೂನು ವಿಚಾರದಲ್ಲಿ ಬಿಜೆಪಿಗೆ ಕೆಲವು ಸಲಹೆಯನ್ನು ನೀಡುತ್ತಿದ್ದರು. ಇದೀಗ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ದೆಹಲಿ ಬಿಜೆಪಿಯ ಕಾನೂನು ವಿಭಾಗದ ಸಹ ಸಂಚಾಲಕನಾಗಿ ಪಕ್ಷಕ್ಕೆ ಹೆಚ್ಚು ಸಕ್ರಿಯವಾಗಿ ಸೇವೆ ಸಲ್ಲಿಸಲು ನನಗೆ ಔಪಚಾರಿಕವಾಗಿ ಅವಕಾಶ ನೀಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಜಾತಿ ಬಲ ಇಲ್ಲದಿದ್ದರೂ, ಅಭಿವೃದ್ಧಿ ನಂಬಿ ಗೆದ್ದು ಸಚಿವರಾದ ಬಿ.ಸಿ. ನಾಗೇಶ್

Share This Article