ನವದೆಹಲಿ: ಭಾರತಕ್ಕೆ ಪ್ರವಾಸಕ್ಕೆ ಆಗಮಿಸಿ ಹಣ ಇಲ್ಲದೆ ಭಿಕ್ಷೆ ಬೇಡುತ್ತಿದ್ದ ರಷ್ಯಾದ ಪ್ರವಾಸಿಗೆ ಸುಷ್ಮಾ ಸ್ವರಾಜ್ ನೆರವಿನ ಹಸ್ತ ಚಾಚಿದ್ದಾರೆ.
ತಮಿಳುನಾಡಿನ ಕಾಂಚೀಪುರಂನಲ್ಲಿರುವ ಶ್ರೀ ಕುಮಾರಕೊಟ್ಟಂ ದೇವಾಲಯದ ಬಳಿ ರಷ್ಯಾದ ಇವಾಂಗೆಲಿನ್ ಭಿಕ್ಷೆ ಬೇಡುತ್ತಿದ್ದರು. ಈ ವಿಚಾರ ತಿಳಿದು ಮಾಧ್ಯಮವೊಂದು ಸುದ್ದಿ ಪ್ರಕಟಿಸಿತ್ತು. ಈ ಸುದ್ದಿಯನ್ನು ತಿಳಿದು ಸುಷ್ಮಾ ಸ್ವರಾಜ್ ರಷ್ಯಾ ಪ್ರವಾಸಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.
Advertisement
ನಿಮ್ಮ ದೇಶ ರಷ್ಯಾ ನಮಗೆ ಒಳ್ಳೆಯ ಸ್ನೇಹಿತ. ಹೀಗಾಗಿ ನಿಮಗೆ ಸಹಾಯ ಮಾಡುವಂತೆ ಚೆನ್ನೈನಲ್ಲಿರುವ ನನ್ನ ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
Advertisement
ಆಗಿದ್ದು ಏನು?
ರಷ್ಯಾ ಮೂಲದ 24 ವರ್ಷದ ಇವಾಂಗೆಲಿನ್ ಸೆಪ್ಟಂಬರ್ 24 ರಂದು ಪ್ರವಾಸಕ್ಕಾಗಿ ಭಾರತಕ್ಕೆ ಬಂದಿದ್ದಾರೆ. ನಂತರ ಚೆನ್ನೈನ ಕಾಂಚಿಪುರಂನಲ್ಲಿ ಉಳಿದುಕೊಂಡು ಕೆಲವು ದೇವಾಲಯಗಳನ್ನು ಸುತ್ತಾಡಿದ್ದಾರೆ. ಹಣಕ್ಕಾಗಿ ಖಾಲಿಯಾದ ನಂತರ ಎಟಿಎಂಗೆ ಹಣ ಡ್ರಾ ಮಾಡಲು ಹೋಗಿದ್ದಾರೆ. ಆದರೆ ತಾಂತ್ರಿಕ ಸಮಸ್ಯೆಯಿಂದ ಅವರ ಎಟಿಎಂ ಕಾರ್ಡ್ನ ಪಿನ್ ಲಾಕ್ ಆಗಿದೆ.
Advertisement
ಇವಾಂಗೆಲಿನ್ ಬಳಿ ಇದ್ದ ಸ್ವಲ್ಪ ಹಣವು ಖಾಲಿ ಆಗಿ ಕೊನೆಗೆ ನಿರಾಶರಾಗಿ ಬೇರೆ ದಾರಿ ಇಲ್ಲದೆ ದೇವಾಲಯದ ಮುಂದೆ ಕೂತು ಭಿಕ್ಷೆ ಬೇಡುತ್ತಿದ್ದರು.
Advertisement
Evangelin – Your country Russia is our time tested friend. My officials in Chennai will provide you all help. https://t.co/6bPv7MFomI
— Sushma Swaraj (@SushmaSwaraj) October 10, 2017