ನವದೆಹಲಿ: ‘ಸುಷ್ಮಾ ಜೀ ನಮ್ಮ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನು ನೆನಪಿಸಿ ನಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಕೊನೆಗೂ ಒಪ್ಪಿಕೊಂಡಿದ್ದಕ್ಕೆ ತಮಗೆ ಧನ್ಯವಾದಗಳು’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಶನಿವಾರ ನಡೆದ 72 ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಯೋತ್ಪಾದನೆ ಬಗ್ಗೆ ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಮಾತನಾಡಿದರು. ಈ ವೇಳೆ ಭಾರತ ಬಡತನ ನಿರ್ಮೂಲನೆಗೆ ಗಮನ ಹರಿಸಿದರೆ ಪಾಕಿಸ್ತಾನ ಉಗ್ರಸಂಘಟನೆಗಳ ಹುಟ್ಟುವಿಕೆಗೆ ಗಮನ ಹರಿಸುತ್ತಿದೆ. ನಾವು ಐಐಟಿ, ಐಐಎಂ, ಎಐಐಎಂಎಸ್ ಮತ್ತು ಇಸ್ರೋ ಸಂಸ್ಥೆಗಳನ್ನು ಸ್ಥಾಪಿಸಿ ಅಭಿವೃದ್ಧಿ ನೋಡುತ್ತಿದ್ದೇವೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದರು.
Advertisement
ಈ ಹೇಳಿಕೆಯನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಸ್ವಾಗಸಿದ್ದಾರೆ. 70 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಐಐಟಿ, ಐಐಎಂ, ಏಮ್ಸ್ ಮತ್ತು ಇಸ್ರೋ ಸಂಸ್ಥೆಗಳನ್ನು ಸ್ಥಾಪಿಸಿ ಅಭಿವೃದ್ಧಿ ನೋಡುವಂತೆ ಮಾಡಿದ್ದು ನಾವು. ನಮ್ಮ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನೆನಪಿಸಿದ್ದಕ್ಕೆ ತಮಗೆ ಧನ್ಯವಾದಗಳು ಸುಷ್ಮಾ ಜೀ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದು ಬಿಜೆಪಿ ಕಾಲೇಳೆದಿದ್ದಾರೆ.
Advertisement
ರಾಹುಲ್ ಗಾಂಧಿ ಟ್ವೀಟ್ ಬೆನ್ನಲ್ಲೆ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಸರ್ಕಾರ 70 ವರ್ಷಗಳ ಕಾಲ ಆಡಳಿತ ನಡೆಸಿತ್ತು. ಅಂದು ಮಾಡಿದ ಕಾರ್ಯಗಳನ್ನು ಇಂದು ಬಹಿರಂಗಪಡಿಸಿ ನಮ್ಮ ದಕ್ಷ ಆಡಳಿತವನ್ನು ಮೆಲುಕು ಹಾಕಲು ಸುಷ್ಮಾ ಸ್ವರಾಜ್ ಕನ್ನಡಿಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಭಾರತದ ಅಭಿವೃಧ್ದಿ ಬಯಸಿತ್ತು.
ಹೀಗಾಗಿ ಮತ್ತೆ ನಮ್ಮ ಕಾರ್ಯಗಳನ್ನು ಎನ್‍ಡಿಎ ಸರ್ಕಾರ ಒಪ್ಪಿಕೊಂಡಿದೆ ಎಂದು ವ್ಯಂಗ್ಯವಾಡಿದ್ದಾರೆ.
Advertisement
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ಥಾನದ ಭಯೋತ್ಪಾದನೆ ಕುರಿತು ನಿನ್ನೆ ಮಾತನಾಡಿದ್ದರು. ನಾವು ಐಐಟಿ, ಐಐಎಂ, ಏಮ್ಸ್ ಮತ್ತು ಇಸ್ರೋ ಸಂಸ್ಥೆಗಳನ್ನು ಕಟ್ಟಿದರೆ, ಪಾಕಿಸ್ತಾನ ಲಷ್ಕರ್ ಎ ತೋಯ್ಬಾ, ಜೈಷ್ ಎ ಮಹಮ್ಮದ್, ಹಖ್ಖಾನಿ ನೆಟ್‍ವರ್ಕ್, ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಸಂಘಟನೆಗಳನ್ನು ಕಟ್ಟಿ ಹೆಸರು ಮಾಡುತ್ತಿದೆ ಎಂದು ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದರು.
Advertisement
Sushma ji, thank you for finally recognising Congress governments' great vision and legacy of setting up IITs and IIMs
— Rahul Gandhi (@RahulGandhi) September 24, 2017
Thank @SushmaSwaraj ji for stating hard facts about INDIA ???????? & Pak at UN.Befitting reply to those who ask what happaned in last 70 years.1/2
— Randeep Singh Surjewala (@rssurjewala) September 23, 2017
Thank @SushmaSwaraj ji for stating hard facts about INDIA ???????? & Pak at UN.Befitting reply to those who ask what happaned in last 70 years.1/2
— Randeep Singh Surjewala (@rssurjewala) September 23, 2017
2/3 @SushmaSwaraj mirrored the yeoman's progress made by India under Congress rule, making 'inclusive growth & progress' as India's mantra.
— Randeep Singh Surjewala (@rssurjewala) September 23, 2017