– ಭಾರತದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಓದಿದ್ದ ಘಿಸಿಂಗ್‌ಗೆ ಹೆಚ್ಚಿನ ಒಲವು
ಕಠ್ಮಂಡು: ನೇಪಾಳದಲ್ಲಿ (Nepal) ಭುಗಿಲೆದ್ದ ಯುಜನರ ದಂಗೆ ಇಂದು ಹೊಸ ತಿರುವು ಪಡೆದುಕೊಂಡಿದೆ. ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ನೇಪಾಳದ ಮಧ್ಯಂತರ ಪ್ರಧಾನಿಯಾಗಿ (Interim PrimeMinister) ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಝೆನ್ ಝಡ್ ಪ್ರತಿಭಟನಾ ಗುಂಪು ಇಂದು ಅಧಿಕೃತವಾಗಿ ಘೋಷಿಸಿದೆ. ಪ್ರತಿಭಟನಾಕಾರರ ಇನ್ನೊಂದು ವರ್ಗ ಸುಶೀಲಾ ಕರ್ಕಿ (Sushila Karki) ಅವರ ವಿರುದ್ಧ ತಿರುಗಿಬಿದ್ದಿದೆ.
ಸಂವಿಧಾನವು ಅವರನ್ನ ಪ್ರಧಾನಿಯಾಗಲು ಅನುಮತಿಸಲ್ಲ ಎಂದು ಅಸಮಾಧಾನ ಹೊರಹಾಕಿದೆ. ಅಲ್ಲದೇ ನೇಪಾಳ ವಿದ್ಯುತ್ ಪ್ರಾಧಿಕಾರದ (NIA) ಮಾಜಿ ಸಿಇಓ ಕುಲ್ಮನ್ ಘಿಸಿಂಗ್ ಅವರ ಹೆಸರನ್ನು ಮಧ್ಯಂತರ ಪ್ರಧಾನಿ ಹುದ್ದೆಗೆ ಸೂಚಿಸಿದೆ. ಹೀಗಾಗಿ ಜೆನ್-ಝಡ್ ಚಳವಳಿಯ ನಾಯಕರ ನಡುವೆ ಬಿರುಕು ಉಂಟಾಗಿದೆ. ಈ ನಡುವೆ ಧರಣ್ ನಗರಪಾಲಿಕೆ ಮೇಯರ್ ಹಾರ್ಕ್ ಸಂಪಂಗ್ ಅವರ ಹೆಸರು ಕೂಡ ಮುನ್ನೆಲೆಗೆ ಬಂದಿದೆ. ಇದರ ಹೊರತಾಗಿ ಕಠ್ಮಂಡು ಮೇಯರ್ ಬಾಲೆನ್ ಶಾ ಈ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧನಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನೇಪಾಳದ 18 ಜಿಲ್ಲೆಗಳ ಜೈಲಿನಿಂದ 6 ಸಾವಿರಕ್ಕೂ ಹೆಚ್ಚು ಕೈದಿಗಳು ಪರಾರಿ
ಕುಲ್ಮನ್ ಘಿಸಿಂಗ್‌ಗೆ ಹೆಚ್ಚಿನ ಒಲವು
ಪ್ರತಿಭಟನಾ (Gen Z Protesters) ನಿರತ ಯುವಕರ ಒಂದು ಬಣವು, ಬಾಲೆನ್ ಶಾ ಪ್ರಧಾನಿ ಹುದ್ದೆಗೆ ಆಸಕ್ತಿ ಹೊಂದಿಲ್ಲ, ಹಾರ್ಕ್ ಸಂಪಂಗ್ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಲು ಸಾಧ್ಯವಿಲ್ಲ. ಇನ್ನೂ ಸುಶೀಲಾ ಕರ್ಕಿ 70 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಅನರ್ಹರೂ ಆಗಿದ್ದಾರೆ. ಆದ್ದರಿಂದ ಕುಲ್ಮನ್ ಅವರನ್ನೇ ಆಯ್ಕೆ ಮಾಡುವುದು ಸೂಕ್ತ ಎಂದು ಹೇಳಿದೆ. ಹೀಗಾಗಿ ಘಿಸಿಂಗ್ ಆಯ್ಕೆ ಬಗ್ಗೆ ಆಸಕ್ತಿ ತೋರಿದೆ. ಇದನ್ನೂ ಓದಿ: ನೇಪಾಳ ಹಿಂಸಾಚಾರಕ್ಕೆ ಸ್ಥಗಿತಗೊಂಡಿದ್ದ ಕಠ್ಮಂಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಓಪನ್
ಪ್ರಧಾನಿ ಹುದ್ದೆಗೆ ಕುಲ್ಮನ್ ಹೆಸರು ಬರಲು ಕಾರಣ ಏನು?
54 ವರ್ಷದ ಘಿಸಿಂಗ್ ನೇಪಾಳದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದ್ದ ʻಲೋಡ್ ಶೇಡ್ಡಿಂಗ್ ಸಮಸ್ಯೆಗೆ ಅಂತ್ಯ ಹಾಡಿದ್ದರು. ಅಂದು ದೇಶದಲ್ಲಿ ದಿನಕ್ಕೆ 18 ಗಂಟೆಗಳ ಕಾಲ ವಿದ್ಯುತ್ ಸಮಸ್ಯೆ ಎದುರಿಸಬೇಕಿತ್ತು. ಈ ಸಮಸ್ಯೆ ಬಗೆಹರಿಸಿದ್ದರಿಂದ ದೇಶಕ್ಕೆ ಹೆಚ್ಚಿನ ಲಾಭವಾಯಿತು. ಕುಲ್ಮನ್ ಭಾರತದ ಜಾರ್ಖಂಡ್‌ನ ಜಮ್ಶೆದ್‌ಪುರದ ಪ್ರಾದೇಶಿಕ ತಂತ್ರಜ್ಞಾನ ಸಂಸ್ಥೆಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದರು ಎಂಬುದು ಗಮನಾರ್ಹ.
ಇನ್ನೂ ನೇಪಾಳದಲ್ಲಿ ನಡೆಯುತ್ತಿರುವ ಯುವಜನರ ದಂಗೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 31ಕ್ಕೆ ಏರಿದೆ. ಶವಗಳನ್ನು ಇರಿಸಲಾಗಿರುವ ತ್ರಿಭುವನ್ ವಿಶ್ವವಿದ್ಯಾಲಯ ಬೋಧನಾ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಪ್ರಕಾರ ಮೃತಪಟ್ಟ 5 ಪುರುಷರು ಮತ್ತು ಒಬ್ಬ ಮಹಿಳೆಯ ಗುರುತುಗಳು ಇನ್ನೂ ಪತ್ತೆಯಾಗಿಲ್ಲ. ಇದಲ್ಲದೇ ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಂಗಳವಾರ ಮುಚ್ಚಲಾಗಿತ್ತು. ಇದನ್ನೂ ಓದಿ: ʻತುಂಬಾ ಅಪಾಯಕಾರಿʼ ದೂರವಿರಿ – ರಷ್ಯಾ ಸೇನೆ ಸೇರುತ್ತಿರುವ ಭಾರತೀಯರಿಗೆ MEA ವಾರ್ನಿಂಗ್
ನೇಪಾಳದಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವ ಕಾರಣ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ನೇಪಾಳದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಸಿಕ್ಕಿಕೊಳ್ಳುವಂತಾಗಿತ್ತು. ಸದ್ಯ ತ್ರಿಭುವನ್ ವಿಮಾನ ನಿಲ್ದಾಣ ಪನರಾರಂಭಗೊಂಡಿದ್ದು, ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಕಂಪನಿಗಳು ನೇಪಾಳದಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಕರೆತರಲು ಹೆಚ್ಚುವರಿ ವಿಮಾನಗಳನ್ನ ವ್ಯವಸ್ಥೆ ಮಾಡಿವೆ.