ಪಾಟ್ನಾ: ಎಲ್ಲಾ ಕಳ್ಳರು ಮೋದಿಗಳೇ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಹೇಳಿದ್ದಾರೆ.
ಬಿಹಾರದ ಪಾಟ್ನಾದಲ್ಲಿ ಮಾತನಾಡಿದ ಅವರು, ಮೋದಿ ಉಪನಾಮ (ಅಡ್ಡ ಹೆಸರು) ಹೊಂದುವುದು ತಪ್ಪೇ? ರಾಹುಲ್ ಗಾಂಧಿ ಅವರು ಕೋಟ್ಯಂತರ ಜನರಿಗೆ ಚೋರ್ ಎಂದು ಕರೆದಿದ್ದಾರೆ ಹಾಗೂ ಅವರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಅವರ ವಿರುದ್ಧ ಪಾಟ್ನಾ ಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ತಿಳಿಸಿದರು.
Bihar Deputy CM Sushil Modi on Rahul Gandhi's statement 'All thieves have Modi in their surnames': I will file a defamation case against Rahul Gandhi in a Patna court. Is it a crime to have 'Modi' surname? He has referred to crores of people as 'chor' and hurt their sentiments. pic.twitter.com/ijc7io38MK
— ANI (@ANI) April 16, 2019
ರಾಹುಲ್ ಗಾಂಧಿ ಹೇಳಿದ್ದೇನು?:
ಮಹಾರಾಷ್ಟ್ರದ ನಾಂದೇಡ್‍ನಲ್ಲಿ ನಡೆದಿದ್ದ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು, ವಜ್ರ ವ್ಯಾಪಾರಿ ನೀರವ್ ಮೋದಿ, ಉದ್ಯಮಿ ಲಲಿತ್ ಮೋದಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಎಲ್ಲರ ಕೊನೆಯಲ್ಲಿ ಮೋದಿ ಅಂತ ಇದೆ. ಎಲ್ಲ ಕಳ್ಳರ ಹೆಸರಿನಲ್ಲಿ ಮೋದಿ ಸಾಮಾನ್ಯ ಹೆಸರಾಗಿರುವುದು ಹೇಗೆ? ನನಗೆ ಒಂದು ಸಂಗತಿಯ ಬಗ್ಗೆ ಪ್ರತಿಕ್ರಿಯೆ ನೀಡಿ ಎಂದು ರಾಹುಲ್ ಗಾಂಧಿ ಹೇಳಿದ್ದರು.