ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಸುಶಾಂತ್ ಸಿಂಗ್ ಮ್ಯಾನೇಜರ್ ದಿಶಾ ಸಾನಿಯಾನ್ ಸಾವಿನ ಬೆನ್ನಲ್ಲೇ ಸುಶಾಂತ್ ಕೂಡ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸಿಕ್ಕಿದ್ದರು. ಹಾಗಾಗಿ ಮ್ಯಾನೇಜರ್ ಸಾವಿಗೆ ಸುಶಾಂತ್ ಸಾವನ್ನು ತಳುಕು ಹಾಕಲಾಗಿತ್ತು. ದಿಶಾ ಸಾವಿನಿಂದಾಗಿಯೇ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.
Advertisement
ದಿಶಾ ಸಾವಿಗೆ ಸಂಬಂಧಿಸಿದಂತೆ ದೂರು ದಾಖಲಾಗದೇ ಇದ್ದರೂ, ಸಿಬಿಐ ಸ್ವತಂತ್ರವಾಗಿ ತನಿಖೆ ಆರಂಭಿಸಿತ್ತು. ಎರಡು ಸಾವುಗಳಿಗೆ ಏನಾದರೂ ಸಂಬಂಧ ಇದೆಯಾ ಎಂದು ಪರಿಶೀಲನೆ ನಡೆಸಿತ್ತು. ಕೇವಲ ಸಿಬಿಐ ಮಾತ್ರವಲ್ಲ, ಇಡಿ ಮತ್ತು ಎನ್.ಸಿ.ಬಿ ಕೂಡ ಈ ವಿಚಾರಣೆಗೆ ಕೈ ಜೋಡಿಸಿದ್ದವು. ಈ ಎಲ್ಲ ವಿಚಾರಣೆಗಳು ಮುಗಿದಿದ್ದು, ಕೊನೆಗೂ ದಿಶಾ ಅವರ ಸಾವಿನ ರಹಸ್ಯ ಬಯಲಾಗಿದೆ. ಇದನ್ನೂ ಓದಿ: ಗುರೂಜಿ ಮಾಡಿದ ಆ ಒಂದು ತಪ್ಪಿನಿಂದ, ಮನೆ ಮಂದಿಗೆ ಬಿಗ್ ಬಾಸ್ ಗುನ್ನ
Advertisement
Advertisement
ಜೂನ್ ಎರಡನೇ ವಾರದಲ್ಲಿ ದಿಶಾ ಅವರ ಮೃತದೇಹ ಮುಂಬೈನ ಅಪಾರ್ಟಮೆಂಟ್ ವೊಂದರಲ್ಲಿ 14ನೇ ಮಹಡಿಯ ಕೋಣೆಯಲ್ಲಿ ಪತ್ತೆಯಾದ ಕೇವಲ 5 ದಿನಗಳ ನಂತರ ಸುಶಾಂತ್ ಶವವಾಗಿ ಪತ್ತೆಯಾಗಿದ್ದ. ಹಾಗಾಗಿ ಎರಡೂ ಸಾವುಗಳ ಕುರಿತು ತನಿಖೆಗೆ ಅನೇಕರು ಆಗ್ರಹಿಸಿದ್ದರು. ಸಿಬಿಐ ಸಲ್ಲಿಸಿರುವ ವರದಿಗಳ ಪ್ರಕಾರ ದಿಶಾ ಅತಿಯಾದ ಮದ್ಯಪಾನ ಸೇವಿಸಿ, ನಿಯಂತ್ರಣ ಸಿಗದೇ ಬಿದ್ದಿರುವುದು ಬೆಳಕಿಗೆ ಬಂದಿದೆ. ಈ ಎರಡೂ ಸಾವಿಗೆ ಒಂದಕ್ಕೊಂದು ಸಂಬಂಧವಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
Advertisement
ತನಿಖೆಯನ್ನು ಕೈಗೆತ್ತಿಕೊಂಡ ನಂತರ ದಿಶಾ ಪ್ರಿಯತಮ ರೋಹನ್ ರೈ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿತ್ತು. ಕೆಲ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡಲಾಗಿತ್ತು. ಸಮಗ್ರ ಕೋನದಿಂದ ತನಿಖೆ ಮಾಡಿರುವ ಅಧಿಕಾರಿಗಳು ಸುಶಾಂತ್ ಸಾವಿಗೆ ದಿಶಾ ಸಾವು ಕಾರಣವಲ್ಲ ಎಂದು ಹೇಳಲಾಗಿದೆ.