ಮತ್ತೆ ಬರಲಿದೆ ಎಂ.ಎಸ್ ಧೋನಿ ಬಯೋಪಿಕ್ – ರಿಲೀಸ್ ಡೇಟ್ ಫಿಕ್ಸ್

Public TV
1 Min Read
m s dhoni

ಬಾಲಿವುಡ್‌ನಲ್ಲಿ (Bollywood) ಸಂಚಲನ ಮೂಡಿಸಿದ್ದ ಎಂ.ಎಸ್ ಧೋನಿ (M s Dhoni) ಬಯೋಪಿಕ್ ಸಿನಿಮಾ ಮತ್ತೆ ತೆರೆಗೆ ಬರಲು ಮುಹೂರ್ತ ಫಿಕ್ಸ್ ಆಗಿದೆ. ಸುಶಾಂತ್ ಸಿಂಗ್ ರಜಪೂತ್  (Sushant Singh Rajput) ಈ ಸಿನಿಮಾದಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದರು. ಇದೀಗ ಮತ್ತೆ ಈ ಸಿನಿಮಾ ಚಿತ್ರಮಂದಿರದಲ್ಲಿ ಸಿನಿಪ್ರೇಕ್ಷಕರು ಕಣ್ತುಂಬಿಕೊಳ್ಳಲು ದಿನಾಂಕ ನಿಗದಿಯಾಗಿದೆ.  ಇದನ್ನೂ ಓದಿ:ಮೂಗಿನ ಶಸ್ತ್ರಚಿಕಿತ್ಸೆ ಬಳಿಕ ಖಿನ್ನತೆಗೆ ಒಳಗಾಗಿದ್ಯಾಕೆ? ಅಸಲಿ ವಿಚಾರ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ

sushanth singh

ಸಿನಿಮಾರಂಗದಲ್ಲಿ ಈಗಾಗಲೇ ಅನೇಕ ಕ್ರಿಕೆಟರ್‌ಗಳ ಬದುಕಿನ ಕುರಿತು ಸಿನಿಮಾಗಳು ಮೂಡಿಬಂದಿವೆ. ಆದರೆ ಯಶಸ್ಸು ಕಂಡಿರುವುದು ಕೆಲವೇ ಕೆಲವು ಚಿತ್ರಗಳು ಮಾತ್ರ. ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಜೀವನದ ಕುರಿತು ‘ಎಂ.ಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ’ ಚಿತ್ರ 2016ರಲ್ಲಿ ಮೂಡಿ ಬಂದಿತ್ತು. ಧೋನಿ ಬಯೋಪಿಕ್‌ನಲ್ಲಿ ನಟ ಸುಶಾಂತ್ ಸಿಂಗ್ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದರು. ಧೋನಿ ಪಾತ್ರಕ್ಕೆ ಅವರು ಜೀವ ತುಂಬಿದ್ದರು. ಈಗ ಮೇ 12ರಂದು ಈ ಸಿನಿಮಾ ಮತ್ತೆ ಮರು ಬಿಡುಗಡೆ ಆಗುತ್ತಿದೆ. ಈ ಮೂಲಕ ದೊಡ್ಡ ಪರದೆಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರನ್ನು ನೋಡಿ ಖುಷಿಪಡಲು ಅಭಿಮಾನಿಗಳಿಗೆ ಅವಕಾಶ ಸಿಗುತ್ತಿದೆ.

sushanth singh rajaput

ಎಂ.ಎಸ್. ಧೋನಿ (M.s Dhoni) ಅವರು ಕ್ರಿಕೆಟ್ (Cricket) ಲೋಕದಲ್ಲಿ ಮಾಡಿದ ಸಾಧನೆ ಅಪಾರ. ಟೀಮ್ ಇಂಡಿಯಾವನ್ನು ಅವರು ಮುನ್ನಡೆಸಿದ ರೀತಿಗೆ ಫ್ಯಾನ್ಸ್ ಸಲಾಂ ಹೊಡೆದಿದ್ದರು. ಅದರ ಜೊತೆಗೆ ಅವರ ರಿಯಲ್ ಲೈಫ್ ಘಟನೆಗಳು ಕೂಡ ಅಷ್ಟೇ ಇಂಟರೆಸ್ಟಿಂಗ್ ಆಗಿತ್ತು. ಹಾಗಾಗಿ ಆ ಎಲ್ಲಾ ವಿಚಾರಗಳನ್ನ ಇಟ್ಟುಕೊಂಡು ಬಯೋಪಿಕ್ ಮಾಡಲಾಯಿತು. ಈ ಸಿನಿಮಾಗೆ ಅಂದು ವ್ಯಾಪಕ ಮೆಚ್ಚುಗೆ ಸಿಕ್ಕಿತ್ತು.

sushanth singh rajaput 1

ಎಂ.ಎಸ್ ಧೋನಿ ಬಯೋಪಿಕ್‌ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಜೊತೆ ಕಿಯಾರಾ ಅಡ್ವಾಣಿ (Kiara Advani), ದಿಶಾ ಪಟಾನಿ (Disha Patani) ನಟಿಸಿದ್ದರು. ಆನ್‌ಸ್ಕ್ರೀನ್‌ನಲ್ಲಿ ಧೋನಿ ಲವ್ ಕಹಾನಿ ಫ್ಯಾನ್ಸ್‌ಗೆ ಮೋಡಿ ಮಾಡಿತ್ತು. ಈಗ ಇದೇ ಮೇ 12ಕ್ಕೆ ತೆರೆಗೆ ಅಬ್ಬರಿಸಲು ಸಿದ್ಧವಾಗಿದೆ.

Share This Article