ದುಬೈ: ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಟೀಂ ಇಂಡಿಯಾ (Team India) ನಾಯಕ ಸೂರ್ಯಕುಮಾರ್ ಯಾದವ್‌ಗೆ (Suryakumar Yadav) ಐಸಿಸಿ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.
ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನೀಡಿದ ದೂರನ್ನು ಸ್ವೀಕರಿಸಿದ ಐಸಿಸಿ (ICC) ಸೂರ್ಯಕುಮಾರ್ ಯಾದವ್ ಅವರ ವಿಚಾರಣೆ ನಡೆಸಿದೆ.
ಪಿಸಿಬಿ ಸಲ್ಲಿಸಿದ ಎಲ್ಲಾ ಪುರಾವೆಗಳು ಮತ್ತು ಹೇಳಿಕೆಗಳನ್ನು ಪರಿಶೀಲಿಸಿದ ನಂತರ ಸೂರ್ಯಕುಮಾರ್ ಅವರ ಹೇಳಿಕೆಗಳು ಕ್ರೀಡಾ ಸ್ಪೂರ್ತಿಗೆ ವಿರುದ್ಧವಾಗಿದೆ. ಹೀಗಾಗಿ ಸೂರ್ಯಕುಮಾರ್ ವಿರುದ್ಧ ಆರೋಪ ಹೊರಿಸುವಂತೆ ಮ್ಯಾಚ್ ರೆಫ್ರೀ ರಿಚಿ ರಿಚರ್ಡ್ಸನ್ ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಫಿಫ್ಟಿ ಬಾರಿಸಿ ಫರ್ಹಾನ್ ಗನ್ ಸೆಲೆಬ್ರೇಷನ್ – ಪೆಹಲ್ಗಾಮ್ ದಾಳಿಯ ಉಗ್ರರಿಗೆ ಹೋಲಿಸಿದ ನೆಟ್ಟಿಗರು
Surya Kumar Yadav speaks about the Pahalgam victims and the Indian Armed Forces. This is after the Indian team refused to shake hands with Pakistan.
Please note that BCCI orders all its players to be STRICTLY APOLITICAL, so possibly, this came from the top.
📽️: SonyLiv pic.twitter.com/OSmez1JELk
— Tushar Gupta (@Tushar15_) September 14, 2025
ಪಾಕಿಸ್ತಾನದ ಬ್ಯಾಟರ್ ಫರ್ಹಾನ್ ಸಾಹಿಬ್‌ಜಾದಾ ಮತ್ತು ಹ್ಯಾರಿಸ್ ರೌಫ್ ಮೈದಾನದಲ್ಲಿ ತೋರಿದ ವರ್ತನೆಗೆ ಸಂಬಂಧಿಸಿಂತೆ ಬಿಸಿಸಿಐ ನೀಡಿದ ದೂರಿನ ಬಗ್ಗೆ ನಾಳೆ ಇಬ್ಬರ ವಿಚಾರಣೆ ನಡೆಯಲಿದೆ. ಎರಡೂ ತಂಡಗಳ ಆಟಗಾರರ ವಿರುದ್ಧ ಐಸಿಸಿ ಶಿಸ್ತುಕ್ರಮವನ್ನು ಕೈಗೊಂಡು ದಂಡ ವಿಧಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ವಿಮಾನ ಕ್ರ್ಯಾಶ್ ರೀತಿ ಸನ್ನೆ ಮಾಡಿದ ರೌಫ್‌ಗೆ ರುಬ್ಬಿದ ನೆಟ್ಟಿಗರು – ಆಪರೇಷನ್ ಸಿಂಧೂರಕ್ಕೆ ಹೋಲಿಸಿ ಕಿಡಿ
ಸೂರ್ಯ ಹೇಳಿದ್ದೇನು?
ಸೆಪ್ಟೆಂಬರ್ 14 ರಂದು ಪಾಕಿಸ್ತಾನದ ವಿರುದ್ಧ ಭಾರತ ಜಯಗಳಿಸಿದ ನಂತರ ಮಾತನಾಡಿದ ಸೂರ್ಯ, ಪಹಲ್ಗಾಮ್ ಸಂತ್ರಸ್ತರ ಕುಟುಂಬಗಳೊಂದಿಗೆ ನಾವು ನಿಲ್ಲುತ್ತೇವೆ, ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುತ್ತೇವೆ. ಶೌರ್ಯವನ್ನು ಪ್ರದರ್ಶಿಸಿದ ನಮ್ಮ ಎಲ್ಲಾ ಸಶಸ್ತ್ರ ಪಡೆಗಳಿಗೆ ಈ ಗೆಲುವನ್ನು ಅರ್ಪಿಸಲು ಬಯಸುತ್ತೇವೆ. ಅವರು ನಮಗೆಲ್ಲರಿಗೂ ಸ್ಫೂರ್ತಿ ಎಂದು ಹೇಳಿದ್ದರು.