ಮುಂಬೈ: ಟೀಂ ಇಂಡಿಯಾದ (Team India) ಪವರ್‌ಫುಲ್ ಹಿಟ್ಟರ್ ಸೂರ್ಯ ಕುಮಾರ್ ಯಾದವ್ (Suryakumar Yadav) ಟಿ20 (T20) ಕ್ರಿಕೆಟ್‍ನಲ್ಲಿ ಅಬ್ಬರದಾಟ ಮುಂದುವರಿಸಿ ದಾಖಲೆಯೊಂದನ್ನು ಬರೆದಿದ್ದು, ನೂತನ ಮೈಲಿಗಲ್ಲಿನತ್ತ ಕಣ್ಣಿಟ್ಟಿದ್ದಾರೆ.
Advertisement
ಸೂರ್ಯ ಕುಮಾರ್ ಯಾದವ್ ಕ್ಯಾಲೆಂಡರ್ ವರ್ಷವೊಂದರಲ್ಲಿ ಟಿ20 ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಟೀಂ ಇಂಡಿಯಾದ ಅಟಗಾರನಾಗಿ ದಾಖಲೆ ಬರೆದಿದ್ದಾರೆ. 2022ರಲ್ಲಿ ಒಟ್ಟು 21 ಟಿ20 ಪಂದ್ಯದಿಂದ ಸೂರ್ಯಕುಮಾರ್ ಯಾದವ್ 40.66ರ ಸರಾಸರಿಯಲ್ಲಿ ಈಗಾಗಲೇ 732 ರನ್ ಬಾರಿಸಿದ್ದಾರೆ. ಇದರಲ್ಲಿ 1 ಶತಕ, 5 ಅರ್ಧಶತಕ ಕೂಡ ಕೂಡಿದೆ. ಈ ಹಿಂದೆ 2018ರಲ್ಲಿ ಶಿಖರ್ ಧವನ್ ಕ್ಯಾಲೆಂಡರ್ ವರ್ಷದಲ್ಲಿ 689 ರನ್ ಸಿಡಿಸಿ ದಾಖಲೆ ಬರೆದಿದ್ದರು. ಇದೀಗ ದಾಖಲೆಯನ್ನು ಸೂರ್ಯಕುಮಾರ್ ಯಾದವ್ ಪುಡಿಗಟ್ಟಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್‍ನಿಂದ ಬುಮ್ರಾ ಔಟ್
Advertisement
Advertisement
ಇದರೊಂದಿಗೆ ಸೂರ್ಯಕುಮಾರ್ ಯಾದವ್ ಇನ್ನೂ 24 ರನ್ ಬಾರಿಸಿದರೆ ಟಿ20 ಕ್ರಿಕೆಟ್‍ನಲ್ಲಿ ಸಾವಿರಕ್ಕೂ ಹೆಚ್ಚು ರನ್ ಬಾರಿಸಿದ ಭಾರತದ 9ನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗುವ ಅವಕಾಶವಿದೆ. ಈಗಾಗಲೇ ಸಾವಿರಕ್ಕೂ ಅಧಿಕ ರನ್ ಬಾರಿಸಿದ ಅಟಗಾರರ ಪಟ್ಟಿಯಲ್ಲಿ ಧೋನಿ (MS Dhoni), ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit Sharma) ಇದ್ದು ಅವರೊಂದಿಗೆ ಸೂರ್ಯಕುಮಾರ್ ಕಾಣಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಇದನ್ನೂ ಓದಿ: T20ಯಲ್ಲಿ 11 ದೇಶಗಳ ವಿರುದ್ಧ ಅರ್ಧಶತಕದಾಟ – ವಿಶೇಷ ದಾಖಲೆ ಬರೆದ ಕನ್ನಡಿಗ
Advertisement
ಈಗಾಗಲೇ ಟಿ20 ಕ್ರಿಕೆಟ್‍ನಲ್ಲಿ ರನ್ ಮಳೆ ಸುರಿಸುತ್ತಿರುವ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್ ಐಸಿಸಿ (ICC) ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ 2 ನೇ ಸ್ಥಾನದಲ್ಲಿದ್ದಾರೆ. ನಂಬರ್ 1 ಆಗಲೂ ಇನ್ನೊಂದು ಮೆಟ್ಟಿಲು ಬಾಕಿ ಇದೆ.