ನವದೆಹಲಿ: ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ (Team India) ಆಟಗಾರರು ತವರಿಗೆ ಮರಳಿದ್ದಾರೆ. ಗುರುವಾರ (ಜು.4) ಬೆಳಗ್ಗೆ ನವದೆಹಲಿ ತಲುಪಿದ ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಅಧಿಕಾರಿಗಳು ಮತ್ತು ಅಭಿಮಾನಿಗಳು ಭವ್ಯ ಸ್ವಾಗತ ನೀಡಿದ್ದಾರೆ. ಈ ವೇಳೆ ಸ್ಟಾರ್ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ (Suryakumar Yadav) ಡ್ರಮ್ ಬಾರಿಸಿ, ಸಕತ್ ಸ್ಟೆಪ್ ಹಾಕಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Suryakumar Yadav erupts in joy after landing in India. ????❤️pic.twitter.com/onaJ0zrdFg
— Mufaddal Vohra (@mufaddal_vohra) July 4, 2024
ಸೂರ್ಯಕುಮಾರ್ ಡ್ರಮ್ ಬಾರಿಸಿ ಕಲಾವಿದರ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಸಹ ಸಾಥ್ ನೀಡಿದರು. ಈ ವೇಳೆ ನಾಯಕ ರೋಹಿತ್ ಶರ್ಮಾ ಕಪ್ ಪ್ರದರ್ಶಿಸಿದರು ಮತ್ತು ವಿರಾಟ್ ಕೊಹ್ಲಿ ಅಭಿಮಾನಿಗಳತ್ತ ಕೈಬೀಸಿ ಸಂಭ್ರಮಿಸಿದ್ದಾರೆ.
ವಿಮಾನ ನಿಲ್ದಾಣದಿಂದ ಟೀಮ್ ಇಂಡಿಯಾ ಆಟಗಾರರು ಐಟಿಸಿ ಮೌರ್ಯ ಹೋಟೆಲ್‍ಗೆ ತಲುಪಿದರು. ಹೋಟೆಲ್ ಬಳಿ ಬಂದಿಳಿದ ಆಟಗಾರರಿಗೆ ಚಪ್ಪಾಳೆ ತಟ್ಟುವ ಮೂಲಕ ಭವ್ಯ ಸ್ವಾಗತ ದೊರೆಯಿತು.
ಜೂನ್ 29ರಂದು ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು ಡೇವಿಡ್ ಮಿಲ್ಲರ್ ಬಾರಿಸಿದ್ದ ಚೆಂಡನ್ನು ಅದ್ಭುತವಾಗಿ ಹಿಡಿದು ಪಂದ್ಯಕ್ಕೆ ರೋಚಕ ತಿರುವು ನೀಡಿದ್ದರು. ಈ ಮೂಲಕ ಸೋಲಿನ ದವಡೆಯಲ್ಲಿ ಸಿಲುಕಿದ್ದ ಪಂದ್ಯವನ್ನು ಅವರು ಗೆಲುವಿನೆಡೆಗೆ ತಿರುಗಿಸಿದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ 7 ರನ್‍ಗಳ ಜಯ ಸಾಧಿಸಿತ್ತು.