ಬೀದರ್: ಬೀದರ್ (Bidar) ಜಿಲ್ಲಾಡಳಿತ ಹಾಗೂ ಸ್ಥಳೀಯ ಏರ್‌ಫೋರ್ಸ್ ಸ್ಟೇಷನ್‌ದಿಂದ ಶುಕ್ರವಾರ ಮತ್ತು ಶನಿವಾರ ಬಹಮನಿ ಸುಲ್ತಾನರ ಐತಿಹಾಸಿಕ ಕೋಟೆ ಮೇಲೆ ಏರ್ ಶೋ (Air Show) ಹಮ್ಮಿಕೊಳ್ಳಲಾಗಿದೆ.
ಎರಡು ದಿನಗಳ ಕಾಲ ಏರ್ ಶೋ ಕಾರ್ಯಕ್ರಮ ನಡೆಯಲಿದ್ದು, ಮೊದಲ ದಿನ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಎರಡನೇ ದಿನದಂದು ಸಾರ್ವಜನಿಕ ವೀಕ್ಷಣೆಗೆ ಏರ್ ಶೋ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: Aditya L1: ತೆಗೆದ ಭೂಮಿ, ಚಂದ್ರನ ಚಿತ್ರವನ್ನು ಹಂಚಿಕೊಂಡ ಇಸ್ರೋ
Advertisement
Advertisement
ಸೂರ್ಯಕಿರಣ ಏರೋಬ್ಯಾಟಿಕ್ ಟೀಮ್ (Surya Kirana Aerobatic Team) ಆಕರ್ಷಕ ವೈಮಾನಿಕ ಪ್ರದರ್ಶನವನ್ನು ನಡೆಸಿಕೊಡಲಿದ್ದಾರೆ. ಕಳೆದ ವರ್ಷ 20,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಹೀಗಾಗಿ ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬಹುದೆಂದು ಹೆಚ್ಚಿನ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆ. ಇದನ್ನೂ ಓದಿ: ವಜ್ರಕವಚ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ಕೊಟ್ಟ ಉಡುಪಿ ಕೃಷ್ಣ
Advertisement
Advertisement
ಬೀದರ್ ಜಿಲ್ಲೆಯಲ್ಲೇ ಏರ್ ಫೋರ್ಸ್ (Air Force) ಇರುವುದರಿಂದ ಏರ್ ಶೋ ಹಮ್ಮಿಕೊಳ್ಳಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮ ವೀಕ್ಷಿಸಿ ಆನಂದ ಪಡಲಿದ್ದಾರೆ. ಆಗಸದಲ್ಲಿನ ವೈಮಾನಿಕ ಪ್ರದರ್ಶನ ನೋಡುಗರಿಗೆ ರೋಮಾಂಚನ ಹಾಗೂ ಮೈನವಿರೇಳಿಸುವಂತೆ ಆಕರ್ಷಿಸಲಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಅಪಮಾನ ಮಾಡಿಲ್ಲ, ಧರ್ಮದ ಬಗ್ಗೆ ಗೌರವವಿದೆ: ಪರಮೇಶ್ವರ್
Web Stories