– 15 ದಿನಗಳ ಅಂತರದಲ್ಲಿ 2 ಗ್ರಹಣ.. ಕಂಟಕನಾ? ಶ್ರಾದ್ಧ ಕಾರ್ಯ ಮಾಡಬಹುದಾ?
ಬೆಂಗಳೂರು: ನಾಳೆ ಮಹಾಲಯ ಅಮಾವಾಸ್ಯೆ ಸೂರ್ಯಗ್ರಹಣ ಘಟಿಸಲಿದೆ. 15 ದಿನಗಳ ಅಂತರದಲ್ಲಿ ಇದು 2ನೇ ಗ್ರಹಣವಾಗಿದ್ದು, ಇದರ ಪ್ರಭಾವ ಹೇಗಿರಲಿದೆ ಎಂಬ ಪ್ರಶ್ನೆ ಮೂಡಿದೆ.
ಭಾನುವಾರ ಅಮಾವಾಸ್ಯೆ ಪಿತೃಪಕ್ಷವಿದೆ. ಗ್ರಹಣ ದಿನ ಶ್ರಾದ್ಧ ಕಾರ್ಯ ಮಾಡಬಹುದಾ? ಗ್ರಹಣ ಸೂರ್ಯನಿಂದ ಜಗತ್ತಿನಲ್ಲಿ ಸಂಘರ್ಷ ಹೆಚ್ಚಾಗಲಿದೆಯೇ ಎಂಬ ಬಗ್ಗೆಯೂ ಜನರಲ್ಲಿ ಗೊಂದಲ ಇದೆ.
ಮೂರು ತಿಂಗಳ ಕಾಲ ಗ್ರಹಣ ಪ್ರಭಾವ ಇರಲಿದೆ. ಗ್ರಹಣ ನಂತರ 18 ದಿನ ಸಾಕಷ್ಟು ಜಾಗೃತಿ ಅವಶ್ಯಕ. ಗ್ರಹಗತಿಗಳ ಮೇಲೂ ಗ್ರಹಣ ಸೂರ್ಯನ ಪ್ರಭಾವ ಇರಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.
ಗ್ರಹಣದಿಂದ ಯಾವರಾಶಿಗೆ ಶುಭ-ಅಶುಭ?
ಮೇಷ: ಗ್ರಹಣದಿಂದ ದುಷ್ಪರಿಣಾಮ ಇಲ್ಲ. ಗ್ರಹಣದಿಂದ ಶುಭಫಲ.
ವೃಷಭ: ಗ್ರಹಣದಿಂದ ಅಶುಭ ಫಲ, ವ್ಯಾಪಾರ-ವ್ಯವಹಾರದಲ್ಲಿ ಸಮಸ್ಯೆ, ಆರೋಗ್ಯದ ಕಡೆಗೆ ಗಮನ ಕೊಡಿ.
ಮಿಥುನ: ಗ್ರಹಣದಿಂದ ಮಿಶ್ರಫಲ.
ಕಟಕ: ಆರ್ಥಿಕ ಸ್ಥಿತಿ ಏರುಪೇರು, ಕೌಂಟುಬಿಕ ಕಲಹ.
ಸಿಂಹ: ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ, ಉದ್ಯೋಗ ನಷ್ಟ ಸಾಧ್ಯತೆ.
ಕನ್ಯಾ: ನಿದ್ರಾಭಂಗ ಸಾಧ್ಯತೆ, ಹೂಡಿಕೆಯಲ್ಲಿ ನಷ್ಟ ಸಾಧ್ಯತೆ, ನಂಬಿ ಹಣ ಕಳೆದುಕೊಳ್ಳುವ ಸ್ಥಿತಿ.
ತುಲಾ: ವ್ಯವಹಾರದಲ್ಲಿ ಜಾಗೃತಿ ವಹಿಸಿ, ಮಿತ್ರರು ದೂರವಾಗುವ ಸ್ಥಿತಿ, ಮಾಟ-ಮಂತ್ರದ ಆತಂಕ, ವಾಹನ ಚಾಲನೆಯಲ್ಲಿ ಎಚ್ಚರ.
ವೃಶ್ಚಿಕ: ಅಧಿಕಾರಿಗಳಿಂದ ಒತ್ತಡದ ಸ್ಥಿತಿ ನಿರ್ಮಾಣ, ಆರೋಗ್ಯದ ವಿಚಾರದಲ್ಲಿ ಜಾಗೃತಿ, ಗ್ರಹಣದಿಂದ ಮಿಶ್ರ ಫಲ.
ಧನಸ್ಸು: ತಂದೆ ಆರೋಗ್ಯದ ಕಡೆ ಗಮನ ಕೊಡಿ, ಕೆಲಸ ಕಾರ್ಯಗಳಲ್ಲಿ ಪೂರ್ವತಯಾರಿ ಅಗತ್ಯ.
ಮಕರ: ವೃತ್ತಿ ದೋಷ ಕಾಡುವ ಸಾಧ್ಯತೆ, ಅನಿರೀಕ್ಷಿತ ಅಪವಾದ.. ನಿಂದನೆ.
ಕುಂಭ: ಸಂಗಾತಿ ಆರೋಗ್ಯದ ಕಡೆ ಗಮನ ಕೊಡಿ, ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರ.
ಮೀನ: ಆರೋಗ್ಯದ ವಿಚಾರದಲ್ಲಿ ಎಚ್ಚರ.
ಶ್ರಾದ್ಧ ಕಾರ್ಯ ಮಾಡಬಹುದಾ?
ಸೂರ್ಯಗ್ರಹಣ ಮಹಾಲಯ ಅಮಾವಸ್ಯೆ ಬಂದಿರುವ ಕಾರಣ, ಶ್ರಾದ್ಧ ಕಾರ್ಯ ಮಾಡಬಹುದು. ಭಾರತ ದೇಶದಲ್ಲಿ ಸೂರ್ಯಗ್ರಹಣ ಗೋಚರ ಆಗದೆ ಇರುವ ಕಾರಣ, ಯಾವುದೇ ಅಭ್ಯಂತರವಿಲ್ಲ. ಆಚರಣೆಗಳಿಗೆ ಯಾವುದೇ ಅಭ್ಯಂತರವಿಲ್ಲ. ಆದರೆ, ಸೂರ್ಯಗ್ರಹಣದ ಪ್ರಭಾವವನ್ನ ಆಚರಣೆ ಮಾಡಬಾಹುದಾ? ಗ್ರಹಣದ ಸ್ಥಿತಿಗತಿ, ಆಗುಹೋಗುಗಳನ್ನ ಆಚರಣೆ ಮಾಡುವಂತಿಲ್ಲ. ಪಿತೃಪಕ್ಷ, ಮಹಾಲಯ ಅಮಾವಸ್ಯೆಯನ್ನ ಮಾಡಬಹುದಾಗಿದೆ. ಸೂರ್ಯಗ್ರಹಣ ರಾತ್ರಿ ಬರುವುದರಿಂದ ಯಾವುದೇ ಅಡ್ಡಿಆತಂಕಗಳಿಲ್ಲ ಎಂದು ಜ್ಯೋತಿಷಿ ರೇಣುಕಾರಾಧ್ಯ ಗುರೂಜಿ ತಿಳಿಸಿದ್ದಾರೆ.
ಸೂರ್ಯಗ್ರಹಣ ಗೋಚರ ಇಲ್ಲದಿದ್ದರೂ ಭಾರತಕ್ಕೆ ಗ್ರಹಗತಿಯ ಪ್ರಭಾವ ಇದೆ. ಕೇತು-ರವಿಗೆ ದೂರ ಇದ್ರು ಸಹ ಇದರ ಪರಿಣಾಮ ಗ್ರಹಗತಿಗಳ ಮೂಲಕ ಆಗಲೇಬೇಕು. ರಾಶಿಗಳ ಮೇಲೆ ಪ್ರಭಾವ ಬೀರುವುದರಿಂದ ಎಲ್ಲರೂ ಜಾಗೃತರಾಗಿ ಇರಲೇಬೇಕು. ಜನ್ಮ ಜಾತಕ ಬಲವಿದ್ದರೆ ಆತಂಕ, ಗಾಬರಿ ಬೀಳಬೇಡಿ. ಜನ್ಮ ಜಾತಕದಲ್ಲೂ ದುಷ್ಪರಿಣಾಮಗಳಿದೆ, ದಶಾಭಕ್ತಿಗಳು ಸರಿಯಿಲ್ಲ ಅಂದಾಗ ಆತಂಕ ಬೀಳಲೇ ಬೇಕು. ಸ್ವಲ್ಪ ಜಾಗೃತರಾಗಿ ಇರಲೇಬೇಕು. ಆರೋಗ್ಯದಲ್ಲಿ ಏರುಪೇರು, ವಾಹನ ಚಾಲನೆ ವೇಳೆ ಎಚ್ಚರದಿಂದರಬೇಕು. ಸೂರ್ಯಗ್ರಹಣ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಅನಾರೋಗ್ಯ, ಜ್ವರ, ಸೋಂಕುಗಳು ಹೆಚ್ಚಾಗುವ ಪರಿಣಾಮ ಇರುತ್ತೆ ಎಂದು ಗುರೂಜಿ ಎಚ್ಚರಿಸಿದ್ದಾರೆ.