ಬೆಂಗಳೂರು: ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ಲಿಸ್ಟ್‍ನಲ್ಲಿ ಮೂರನೇ ಸ್ಥಾನದಲ್ಲಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ವಿರುದ್ಧ ಸಾರ್ವಜನಿಕರು ರೋಸಿ ಹೋಗಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಕಾವೇರಿ ತಂತ್ರಾಂಶ ಸರ್ವರ್ ಡೌನ್ ಆಗಿದೆ. ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಅಡ್ಡಿಯುಂಟಾಗಿ ಸಾರ್ವಜನಿಕರು ಪರದಾಡ್ತಿದ್ದಾರೆ. ರಾಜ್ಯವ್ಯಾಪಿ ಉಪ ನೋಂದಣಿ ಕಚೇರಿಗಳಲ್ಲಿ ಕ್ರಯ, ದಾನ, ಹಕ್ಕುಪತ್ರ ಬಿಡುಗಡೆ, ಮದ್ವೆ ನೋಂದಣಿ, ಇಸಿ, ಇತರೆ ದಾಖಲೆಗಳನ್ನ ಪಡೆಯಲು ಸಾರ್ವಜನಿಕರು ದಿನಪೂರ್ತಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
Advertisement
Advertisement
ಬೆಂಗಳೂರಿನ ಗಾಂಧಿನಗರ, ರಾಜಾಜಿನಗರ, ಯಲಹಂಕ ಸೇರಿದಂತೆ ಹಲವು ಸಬ್ ರಿಜಿಸ್ಟರ್ ಆಫೀಸ್‍ಗಳಲ್ಲಿ ಸರ್ವರ್ ಡೌನ್‍ನಿಂದ ಜನ ಬೇಸತ್ತಿದ್ದು, 2004ರ ಹಳೆಯ ತಂತ್ರಾಂಶವನ್ನೇ ಇಲಾಖೆ ಮುನ್ನಡೆಸ್ತಿದೆ. ಅಪ್ ಗ್ರೇಡ್ ಮಾಡದ ಹಿನ್ನಲೆ, ಸರ್ವರ್ ಪ್ರಾಬ್ಲಂ ಆಗ್ತಿದೆ. ಸರ್ಕಾರ ಕೂಡ್ಲೇ ಈ ಬಗ್ಗೆ ಗಮನಹರಿಸಿ, ಸರಿಪಡಿಸಬೇಕು ಅಂತ ಜನರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಅನಿವಾಸಿ ಭಾರತೀಯರಿಗೆ ಪಂಜಾಬ್ ಸರ್ಕಾರ ಹೊಸ ನೀತಿಯನ್ನು ತರಲಿದೆ: ಕುಲದೀಪ್ ಸಿಂಗ್
Advertisement
Advertisement
ಸದ್ಯ ಉಪನೊಂದಣಿ ಕಛೇರಿಗಳಲ್ಲಿರುವ ಕಂಪ್ಯೂಟರ್‍ಗಳನ್ನೇ ಬದಲಾಯಿಸಿ, ಕಾವೇರಿ ಸಾಫ್ಟ್‍ವೇರ್ ನ್ಯೂ ವರ್ಶನ್ ಕಾವೇರಿ 2.1 ಸಾಫ್ಟ್‍ವೇರ್ ಅಳವಡಿಸಲು ಇಲಾಖೆ ನಿರ್ಧಾರ ಮಾಡಿದೆ. ಈ ಹಿಂದೆಯೂ ಕಂದಾಯ ಇಲಾಖೆಯ ಸಚಿವ ಆರ್ ಅಶೋಕ್, ಕಾವೇರಿ ಸಾಫ್ಟ್‍ವೇರ್ ಅನ್ನು ನವೀಕರಿಸುವ ಭರವಸೆಯನ್ನ ನೀಡಿದ್ರು. 2014ರಲ್ಲೇ ಸಾಫ್ಟವೇರ್ ಮತ್ತು ಹಾರ್ಡ್‍ವೇರ್ ಬದಲಾವಣೆ ಮಾಡಬೇಕಿತ್ತು.
ಕಾವೇರಿ ತಂತ್ರಾಂಶದಲ್ಲಿ ಸಮಸ್ಯೆಗಳಾಗುತ್ತಿವೆ. ಹೊಸ ಸಾಫ್ಟವೇರ್‍ಗೆ 12 ಕೋಟಿ ಬಿಡುಗಡೆ ಮಾಡಲಾಗಿದೆ. ಐಟಿ ಬಿಟಿ ಇಲಾಖೆ ಡಿಸೆಂಬರ್ ವೇಳೆಗೆ ಹೊಸ ಸಾಫ್ಟ್‍ವೇರ್ ಒದಗಿಸಲಿದೆ. ಇಲಾಖೆಯ ಸಿಬ್ಬಂದಿಗೆ ಹಾರ್ಡ್‍ವೇರ್ ಮತ್ತು ಸಾಫ್ಟವೇರ್ ತರಬೇತಿ ನೀಡಲಾಗಿದೆ. ಡಿಸೆಂಬರ್ ನಂತರ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂದಿದ್ರು. ಆದ್ರೆ ಸಚಿವರ ಭರವಸೆ ಇವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.