ವಿಜಯಪುರ: ಕಳೆದ ಎರಡು ದಿನಗಳಿಂದ ಜಿಲ್ಲೆಯ ಮುದ್ದೇಬಿಹಾಳ ಮತ್ತು ಸಿಂದಗಿ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದೆ. ನೀರಿನಲ್ಲಿ ಕೊಚ್ಚಿ ಹೋಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿಯಲಾಗಿತ್ತು. ಆದರೆ ಆ ವ್ಯಕ್ತಿ ಅದೃಷ್ಟಾವಷತ್ ಬದುಕಿ ಬಂದಿದ್ದಾರೆ.
ತಾಳಿಕೋಟಿ ಪಟ್ಟಣದ ನಿವಾಸಿಗಳಾದ ಶಿವು ಹೊಸಳ್ಳಿ ಹಾಗೂ ಪ್ರಕಾಶ್ ಎಂಬವರು ಬೈಕ್ ಸಮೇತ್ ಡೋಣಿ ನದಿಯಲ್ಲಿ ಕೊಚ್ಚಿ ಹೋಗಿದ್ದರು. ಇಂದು ಅಗ್ನಿಶಾಮಕದಳದ ಸಿಬ್ಬಂದಿ ಶಿವು ಎಂಬಾತರ ಮೃತದೇಹವನ್ನು ಪತ್ತೆ ಮಾಡಿದ್ದಾರೆ.
ಬೈಕ್ ನೀರಿನ ರಭಸಕ್ಕೆ ಕೊಚ್ಚಿ ಹೋಯಿತು. ಇಬ್ಬರೂ ಸಹ ನೀರಿನಲ್ಲಿ ಬಿದ್ದ ನಂತರ ನಾನು ಒಂದು ಸಾರಿ ಮುಳುಗಿ ಮೇಲ್ಗಡೆ ನೋಡಿದೆ. ಆದರೆ ಶಿವು ಮಾತ್ರ ಎಲ್ಲಿಯೂ ಕಾಣಲಿಲ್ಲ. ನಾನು ಹಾಗೆಯೇ ನಾನು ಈಜುತ್ತಾ ಮುಂದೆ ಸಾಗಿ ಮುಳ್ಳಿನ ಕಂಟಿಯ ಸಹಾಯದಿಂದ ದಡಕ್ಕೆ ಬಂದೆನು. ನೇರವಾಗಿ ಮನಗೆ ಹೋದೆ ಅಷ್ಟರಲ್ಲೇ ಎಲ್ಲರೂ ಅಳಲಾರಂಭಿಸಿದ್ದರು. ನನ್ನನ್ನು ನೋಡಿದ ಕುಟುಂಬಸ್ಥರು ಖುಷಿಪಟ್ಟರು ಎಂದು ಪ್ರಕಾಶ್ ಹೇಳಿದ್ದಾರೆ.
ಈ ಸಂಬಂಧ ತಾಳಿಕೋಟೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.