ಇಂದು ಸುರ್ಜೇವಾಲ ಜೊತೆ ಒನ್ ಟು ಒನ್ ಮೀಟಿಂಗ್‌ – 8 ಶಾಸಕರಿಗೆ ಬುಲಾವ್‌

Public TV
1 Min Read
congress rift

ಬೆಂಗಳೂರು: ಸೆಪ್ಟೆಂಬರ್ ಕ್ಷಿಪ್ರಕ್ರಾಂತಿಯ ಸದ್ದು ಜೋರಾಗುತ್ತಿರುವ ಹೊತ್ತಿನಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್  ಸುರ್ಜೇವಾಲ (Randeep Surjewala) ಇಂದು ಅಸಮಾಧಾನಗೊಂಡಿರುವ ಶಾಸಕರ ಜೊತೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ.

ಬಿ.ಆರ್ ಪಾಟೀಲ್, ರಾಜು ಕಾಗೆ ಬಹಿರಂಗ ಹೇಳಿಕೆಯಿಂದ ಸರ್ಕಾರಕ್ಕೆ ಡ್ಯಾಮೇಜ್ ಉಂಟಾಗಿದ್ದು, ಇದಕ್ಕೆ ತೇಪೆ ಹಚ್ಚಲು ಹೈಕಮಾಂಡ್ (Congress High Command) ಮುಂದಾಗಿದೆ. ಇಂದು ಮಧ್ಯಾಹ್ನ ಶಾಸಕರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಒನ್ ಟು ಒನ್ ಭೇಟಿಗೆ ಸಮಯ ಮೀಸಲಿಟ್ಟಿದ್ದಾರೆ.

ಒಟ್ಟು 40 ಶಾಸಕರ ಶಾರ್ಟ್ ಲಿಸ್ಟ್ ಮಾಡಿದ್ದು ಇಂದು 8 ಶಾಸಕರಿಗೆ ಬುಲಾವ್ ನೀಡಲಾಗಿದೆ. ಇಂದು ಮಧ್ಯಾಹ್ನ 1:30ಕ್ಕೆ ಬಿ.ಆರ್ ಪಾಟೀಲ್, 2 ಗಂಟೆಗೆ ರಾಜು ಕಾಗೆಗೂ ಭೇಟಿಗೆ ಟೈಂ ಫಿಕ್ಸ್ ಮಾಡಲಾಗಿದೆ. ಶಾಸಕರನ್ನು ಕರೆಸಿ ಸುರ್ಜೇವಾಲಾ ಎಚ್ಚರಿಕೆ ನೀಡುವ ಸಾಧ್ಯತೆ ಇದೆ. ಇದನ್ನೂ ಓದಿ: ಮೊದಲ ಬಾರಿಗೆ ಜೂನ್ ತಿಂಗಳಲ್ಲಿ KRS ಭರ್ತಿ – ಇಂದು ಬಾಗಿನ ಅರ್ಪಿಸಿ ಹೊಸ ದಾಖಲೆ ಬರೆಯಲಿದ್ದಾರೆ ಸಿಎಂ

 

ಮೂರು ದಿನ ಠಿಕಾಣಿ ಹೂಡಲಿರುವ ಸುರ್ಜೇವಾಲಾ ಪಕ್ಷದಲ್ಲಿನ ಅಸಮಾಧಾನ ಶಮನಗೊಳಿಸುವ ಯತ್ನ ಮಾಡಲಿದ್ದಾರೆ. ಆದರೆ ಕೆಲ ಕಾಂಗ್ರೆಸ್ ನಾಯಕರು ಸುರ್ಜೇವಾಲ ವಿರುದ್ಧವೇ ಸಿಡಿದಿದ್ದಾರೆ. ಅದರಲ್ಲೂ ಕೆ.ಎನ್ ರಾಜಣ್ಣ, ಸುರ್ಜೇವಾಲಾ ನನಗೇನೂ ತಾಕೀತು ಮಾಡಲು ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ.  ಇದನ್ನೂ ಓದಿ: ಮೊದಲ ಬಾರಿಗೆ ಜೂನ್ ತಿಂಗಳಲ್ಲಿ KRS ಭರ್ತಿ ಇಂದು ಬಾಗಿನ ಅರ್ಪಿಸಿ ಹೊಸ ದಾಖಲೆ ಬರೆಯಲಿದ್ದಾರೆ ಸಿಎಂ

8 ಶಾಸಕರಿಗೆ ಬುಲಾವ್
ಬಿ.ಆರ್. ಪಾಟೀಲ್, ಆಳಂದ ಶಾಸಕ
ರಾಜು ಕಾಗೆ, ಕಾಗವಾಡ ಶಾಸಕ
ನಂಜೇಗೌಡ, ಮಾಲೂರು ಶಾಸಕ
ಪ್ರದೀಪ್ ಈಶ್ವರ್, ಚಿಕ್ಕಬಳ್ಳಾಪುರ, ಶಾಸಕ
ರೂಪಕಲಾ, ಕೆಜಿಎಫ್ ಶಾಸಕಿ
ಸುಬ್ಬಾರೆಡ್ಡಿ, ಬಾಗೇಪಲ್ಲಿ ಶಾಸಕ
ನಾರಾಯಣಸ್ವಾಮಿ, ಬಂಗಾರಪೇಟೆ ಶಾಸಕ
ಕೊತ್ತೂರು ಮಂಜುನಾಥ್, ಕೋಲಾರ ಶಾಸಕ

Share This Article