ಪೂಜಾ ಹೆಗ್ಡೆ ಜೊತೆ ‘ರೆಟ್ರೋ’ ಕಥೆ ಹೇಳಲು ಹೊರಟ ಸೂರ್ಯ

Public TV
1 Min Read
pooja hegde

‘ಕಂಗುವ’ (Kanguva) ಸಿನಿಮಾ ಬೆನ್ನಲ್ಲೇ ಸೂರ್ಯ ರೆಟ್ರೋ ಸಿನಿಮಾದ ಕಥೆ ಹೇಳಲು ರೆಡಿಯಾಗಿದ್ದಾರೆ. ಗ್ಯಾಂಗ್‌ಸ್ಟರ್ ಆಗಿ ಮತ್ತೆ ಪ್ರೀತಿಗಾಗಿ ಬದಲಾಗೋ ನವಿರಾದ ಪ್ರೇಮಕಥೆಯನ್ನು ಪೂಜಾ ಹೆಗ್ಡೆ (Pooja Hegde) ಜೊತೆ ಹೇಳಲು ಸಿದ್ಧರಾಗಿದ್ದಾರೆ. ಸದ್ಯ ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಆಗಿ ಸದ್ದು ಮಾಡುತ್ತಿದೆ.

suriya‘ಸೂರ್ಯ 44’ ಸಿನಿಮಾಗೆ ‘ರೆಟ್ರೋ’ (Retro)  ಎಂದು ಟೈಟಲ್ ಇಡಲಾಗಿದೆ. ಗ್ಯಾಂಗ್‌ಸ್ಟರ್ ಆಗಿ ಅಬ್ಬರಿಸೋ ಸೂರ್ಯ ಅದು ಹೇಗೆ ತಮ್ಮನ್ನು ತಾವು ಬದಲಾಗಿಸಿಕೊಳ್ತಾರೆ ಎಂಬುದನ್ನು ಟೀಸರ್‌ನಲ್ಲಿ ಸುಳಿವು ನೀಡಲಾಗಿದೆ. ನಾಯಕಿಯಾಗಿ ಪೂಜಾ ಹೆಗ್ಡೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿನ ಸೂರ್ಯ (Suriya)  ಮತ್ತು ಪೂಜಾ ಕೆಮಿಸ್ಟ್ರಿ ಮಸ್ತ್ ಆಗಿದೆ. ಹಾಗಾಗಿ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

ಈ ಚಿತ್ರವು 2025ರಲ್ಲಿ ತೆರೆಗೆ ಬರಲಿದ್ದು, ಕಾರ್ತಿಕ್ ಸುಬ್ಬರಾಜ್ (Karthik Subbaraj) ನಿರ್ದೇಶನ ಮಾಡಿದ್ದಾರೆ. ಸೂರ್ಯ ಮತ್ತು ಜ್ಯೋತಿಕಾ (Jyothika) ದಂಪತಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಒಟ್ನಲ್ಲಿ ‘ರೆಟ್ರೋ’ (Retro)  ಮೂಲಕ ವಿಭಿನ್ನವಾಗಿರೋ ಕಥೆಯನ್ನೇ ಹೇಳಲು ಹೊರಟಿದ್ದಾರೆ.

Share This Article