‘ಸೂರ್ಯ 46’ ಅದ್ಧೂರಿ ಚಾಲನೆ- ‘ರೆಟ್ರೋ’ ಹೀರೋಗೆ ‘ಪ್ರೇಮಲು’ ನಟಿ ಜೋಡಿ

Public TV
1 Min Read
SURIYA

‘ರೆಟ್ರೋ’ ಸಿನಿಮಾ ಬಳಿಕ ಸೂರ್ಯ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇಂದು (ಮೇ 19) ಹೈದರಾಬಾದ್‌ನಲ್ಲಿ ಸಿನಿಮಾಗೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಸೂರ್ಯ (Suriya) ನಟನೆಯ ಈ ಸಿನಿಮಾಗೆ ‘ಪ್ರೇಮಲು’ (Premalu) ನಟಿ ಮಮಿತಾ ಬೈಜು (Mamitha Baiju) ಜೋಡಿಯಾಗಿದ್ದಾರೆ. ಇದನ್ನೂ ಓದಿ:ದರ್ಶನ್ ದಾಂಪತ್ಯಕ್ಕೆ 22 ವರ್ಷ- ಹೊಸ ಪೋಸ್ಟ್ ಹಂಚಿಕೊಂಡ ವಿಜಯಲಕ್ಷ್ಮಿ

SURIYA‘ಲಕ್ಕಿ ಭಾಸ್ಕರ್’ ನಿರ್ದೇಶಕ ವೆಂಕಿ ಅವರು ‘ಸೂರ್ಯ 46’ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಸೂರ್ಯಗೆ ನಾಯಕಿಯಾಗಿ ಮಮಿತಾ ಬೈಜು ನಟಿಸಲಿದ್ದಾರೆ. ಇಂದು ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಜರುಗಿದೆ. ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರು ಸೂರ್ಯ ಸಿನಿಮಾಗೆ ಕ್ಲ್ಯಾಪ್ ಮಾಡಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಕಾನ್ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಕಂಗೊಳಿಸಿದ KGF ನಟಿ ಮೌನಿ

mamitha baiju 1

ಸಿತಾರಾ ಸಂಸ್ಥೆಯಡಿ ಈ ಚಿತ್ರ ನಿರ್ಮಾಣವಾಗಲಿದ್ದು, ‘ಕೆಜಿಎಫ್ 2’ ನಟಿ ರವೀನಾ ಟಂಡನ್, ರಾಧಿಕಾ ಶರತ್ ಕುಮಾರ್ ಕೂಡ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.

ಕಂಗುವ, ರೆಟ್ರೋ ಸಿನಿಮಾಗಳಿಗೆ ನಿರೀಕ್ಷಿಸಿದ ಯಶಸ್ಸು ಸಿಗಲಿಲ್ಲ. ಹೀಗಾಗಿ ಯುವ ನಟಿ ಮಮಿತಾ ಮತ್ತು ಲಕ್ಕಿ ಭಾಸ್ಕರ್ ಮೂಲಕ ಯಶಸ್ಸು ಕಂಡಿರುವ ನಿರ್ದೇಶಕ ವೆಂಕಿ ಜೊತೆ ಸೂರ್ಯ ಕೈಜೋಡಿಸಿದ್ದಾರೆ.

Share This Article