ಸೂರರೈ ಪೊಟ್ರು, ಜೈ ಭೀಮ್ ಸಿನಿಮಾಗಳ ಮೂಲಕ ಮೋಡಿ ಮಾಡಿರುವ ತಮಿಳಿನ ಸ್ಟಾರ್ ನಟ ಸೂರ್ಯ (Suriya) ಇದೀಗ ಹೊಸ ಸಿನಿಮಾವೊಂದನ್ನ ಒಪ್ಪಿಕೊಂಡಿದ್ದಾರೆ. ‘ಸೂರರೈ ಪೊಟ್ರು’ ನಿರ್ದೇಶಿಸಿದ್ದ ಸುಧಾ ಕೊಂಗರಾ(Sudha Kongara) ಜೊತೆ ಮತ್ತೆ ಸೂರ್ಯ ಸಿನಿಮಾ ಮಾಡಲು ಮುಂದಾಗಿದ್ದಾರೆ.
ಸುಧಾರ ಈ ಹಿಂದಿನ ಸಿನಿಮಾದಂತೆ ಬಯೋಪಿಕ್ ಸಿನಿಮಾ ಆಗಿರದೆ ಕಾಲ್ಪನಿಕ ಕತೆಯನ್ನ ಸುಧಾ ಕೊಂಗರ ನಿರ್ದೇಶನ ಮಾಡಲು ಹೊರಟಿದ್ದಾರೆ. ಚಿತ್ರಕ್ಕೆ ಮಲಯಾಳಂ ನಟಿ ನಜರಿಯಾ (Nazriya Fahadh) ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. ಸೂರ್ಯ 43ನೇ ಚಿತ್ರಕ್ಕೆ ಟ್ರಾನ್ಸ್ ನಟಿ ಹೀರೋಯಿನ್ ಆಗುವ ಮೂಲಕ ವರ್ಷಗಳ ಬಳಿಕ ತಮಿಳಿಗೆ ಮತ್ತೆ ಎಂಟ್ರಿ ಕೊಡುತ್ತಿದ್ದಾರೆ.

ಸುಧಾ ಕೊಂಗರಾ ನಿರ್ದೇಶನದ ಈ ಸಿನಿಮಾವನ್ನು ಹೊಂಬಾಳೆ ಸಂಸ್ಥೆ (Hombale Films) ನಿರ್ಮಾಣ ಮಾಡಲು ಮುಂದಾಗಿದ್ದಾರೆ.


