ಮಾರಿಗುಡ್ಡದ ಗಡ್ಡಧಾರಿಗಳು ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ಸಲಗ ಖ್ಯಾತಿಯ ಸೂರಿ ಅಣ್ಣ(ದಿನೇಶ್) ಇದೀಗ ಮತ್ತೊಂದು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆ ಚಿತ್ರದ ಹೆಸರೂ ಸಹ ಸೂರಿ ಅಣ್ಣ. ನಾಯಕನಾಗಿ ನಟಿಸುವ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ.
ಬಿಡುಗಡೆಗೆ ಸಿದ್ದವಾಗಿರುವ ಸೂರಿ ಅಣ್ಣ (Suri Anna) ಚಿತ್ರದ ಹಾಡೊಂದರ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ನೀ ನನ್ನ ದೇವತೆ ಎಂಬ ಸುಂದರ ಸಾಹಿತ್ಯ ಒಳಗೊಂಡ ಈ ಗೀತೆಗೆ ಕೆ.ಎಂ.ಇಂದ್ರ ಸಂಗೀತ ಸಂಯೋಜನೆ ಮಾಡಿದ್ದಾರೆ. ವೇದಿಕೆಯಲ್ಲಿ ನಾಯಕ, ನಿರ್ದೇಶಕ ಸೂರಿ ಅಣ್ಣ, ನಾಯಕಿ ಸಂಭ್ರಮಶ್ರೀ, ಪ್ರಸಾದ್, ಜಾಕ್ ಜಾಲಿ, ಜಾನಿ ಮಾಸ್ಟರ್, ಬೇಬಿ ಮರೀಷಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ದಿನೇಶ್ (Dinesh) ಜೂನಿಯರ್ ಆರ್ಟಿಸ್ಟ್ ಆಗಿ ರಾಣಾ, ದೇವ್ರು, ದ್ರೋಣ, ಕೋಟಿಗೊಬ್ಬ-3, ಚಕ್ರವರ್ತಿ ಚಿತ್ರಗಳಲ್ಲಿ ನಟಿಸಿದೆ. ಈಗಾಗಲೇ ಚಿತ್ರದ ಟೀಸರ್, ಮಾದಪ್ಪ ಹಾಡು ಚೆನ್ನಾಗಿ ಹೋಗುತ್ತಿದೆ. ಇದೀಗ ನೀನನ್ನ ದೇವತೆ ಲವ್ ಸಾಂಗ್ ರಿಲೀಸ್ ಮಾಡಿದ್ದೇವೆ. ಈ ಸಿಮಾಗಾಗಿ ಸಿಕ್ಸ್ ಪ್ಯಾಕ್ ಮಾಡಿರುವ ಸೂರಿ ಅಣ್ಣ ಕಾರ್ಯಕ್ರಮ ದ ಕೊನೆಯಲ್ಲಿ ತಮ್ಮ ಸಿಕ್ಸ್ ಪ್ಯಾಕ್ ತೋರಿಸಿದರು, ಕಾಕ್ರೋಚ್ ಸುಧಿ, ಜಾಕ್ ಜಾಲಿ, ಪ್ರಸಾದ್ ಮೇನ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.
ಒಬ್ಬ ಅಮಾಯಕ ತನ್ನ ಇಡೀ ಫ್ಯಾಮಿಲಿ ಕಳೆದುಕೊಂಡಾಗ ಆತ ಯಾವ ಮಟ್ಟಕ್ಕೆ ಹೋಗ್ತಾನೆ ಅಂತ ಈ ಚಿತ್ರದಲ್ಲಿ ಹೇಳಿದ್ದೇವೆ. 5 ನಿಮಿಷದ ಸುಖಕ್ಕೋಸ್ಕರ ಏನೆಲ್ಲ ಮಾಡ್ತಾರೆ. ದುಡುಕಬೇಡಿ, ಯಾರಿಗೂ ತಿರುಗಿ ಬೀಳಬೇಡಿ. ನಮ್ಮನ್ನೇ ನಂಬಿಕೊಂಡು ಕುಟುಂಬ ಇರುತ್ತದೆ ಎಂದು ಹೇಳಿದ್ದೇವೆ. ನಾಯಕಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರ ಸೆನ್ಸಾರ್ ಆಗಿದೆ. ರಿಯಲ್ ಭೂಗತ ದೊರೆಗಳ ಮೂಲಕ ನಮ್ಮ ಚಿತ್ರದಲ್ಲಿ ಸಂದೇಶ ಹೇಳಿಸಿದ್ದೇನೆ. ಎಲ್ಲರೂ ಮೆಸೇಜ್ ಕೊಟ್ಟಿದ್ದಾರೆ ಎಂದರು.
ಈ ಚಿತ್ರದಲ್ಲಿ ನಿಜವಾದ ಭೂಗತ ಜಗತ್ತಿನ ಗ್ಯಾಂಗ್ ಸ್ಟಾರ್ ಗಳು ಅಭಿನಯಿಸಿರುವುದು ವಿಶೇಷ. ಕಾಕ್ರೋಚ್ ಸುಧಿ ಮಾತನಾಡಿ ಈ ಚಿತ್ರಕ್ಕಾಗಿ ಸೂರಿ ತುಂಬಾ ಕಷ್ಟಪಟ್ಟಿದ್ದಾರೆ. ಸಲಗ ಚಿತ್ರದಿಂದ ನಮ್ಮಿಬ್ಬರ ಸ್ನೇಹ ಬೆಳೆದಿದೆ. ಇದರಲ್ಲಿ ಜಪಾನ್ ಎಂಬ ಪಾತ್ರ ಮಾಡಿದ್ದೇನೆ ಎಂದರು. ನಾಯಕಿ ಸಂಭ್ರಮಶ್ರೀ, ಜಾಕ್ ಜಾಲಿ, ಹಿನ್ನೆಲೆ ಸಂಗೀತ ನೀಡಿದ ಶ್ರೀಧರ್ ಕಶ್ಯಪ್, ಎಡಿಟರ್ ವಿಶ್ವ ಎಲ್ಕರೂ ಸೂರಿ ಅಣ್ಣಾ ಚಿತ್ರದ ಕುರಿತಂತೆ ಮಾತನಾಡಿದರು. ಅಂದಹಾಗೆ ಈ ಚಿತ್ರದ ಟ್ರೇಲರ್ ಜನವರಿ 24 ರಂದು ಸೂರಿ ಅಣ್ಣ ಹುಟ್ಟುಹಬ್ಬದಂದ್ದು ಬಿಡುಗಡೆ ಮಾಡಲಿದ್ದಾರೆ.


