#Surgicalstrike2 ವಿಶ್ವದಲ್ಲೇ ನಂಬರ್ ಒನ್ ಟ್ರೆಂಡಿಂಗ್

Public TV
2 Min Read
STRIKE

ಬೆಂಗಳೂರು: ಟ್ವಿಟ್ಟರ್‌ನಲ್ಲಿ ಸರ್ಜಿಕಲ್‍ಸ್ಟ್ರೈಕ್ 2 ವಿಶ್ವದಲ್ಲೇ ನಂಬರ್ ಒನ್ ಟ್ರೆಂಡಿಂಗ್ ಸ್ಥಾನದಲ್ಲಿದ್ದು, ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಪುಲ್ವಾಮಾ ದಾಳಿಯ ಪ್ರತಿಕಾರವಾಗಿ ಇಂದು ಬೆಳಗ್ಗೆ 3 ಗಂಟೆ ಸುಮಾರಿಗೆ ಭಾರತೀಯ ವಾಯುಪಡೆ ಜೈಸ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮೂರು ನೆಲೆಗಳ ಮೇಲೆ ದಾಳಿ ಮಾಡಿದೆ. ಈ ದಾಳಿಯು ಪಾಕಿಸ್ತಾನ ಹಾಗೂ ಉಗ್ರರಲ್ಲಿ ನಡುಕ ಹುಟ್ಟಿಸಿದೆ. ಉಗ್ರರಿಗೆ ಬಿಸಿ ಮುಟ್ಟಿಸಿದ ಭಾರತೀಯ ವಾಯುಪಡೆಗೆ ಅನೇಕ ರಾಜಕೀಯ ನಾಯಕರು, ಜನರು ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ.

#Surgicalstrike2, #IndianAirForce, #IndiaStrikesBack ಹ್ಯಾಷ್ ಟ್ಯಾಗ್‍ಗಳನ್ನು ಬಳಸಿ ನೆಟ್ಟಿಗರು ಟ್ವೀಟ್ ಮಾಡುತ್ತಿದ್ದಾರೆ. ಈ ಮೂಲಕ #ಸರ್ಜಿಕಲ್ ಸ್ಟ್ರೈಕ್ 2 ವಿಶ್ವಮಟ್ಟದಲ್ಲಿ ನಂಬರ್ ಒನ್ ಟ್ರೆಂಡಿಂಗ್ ಸ್ಥಾನ ಪಡೆದಿದ್ದು, ಪುಲ್ವಾಮಾ ದಾಳಿಯ ಪ್ರತಿಕಾರದ ದಾಳಿಯ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

surgical strike Ok

ಕೆಲ ಪಾಕಿಸ್ತಾನದ ನಾಯಕರು, ರಾಜಕಾರಣಿಗಳು ಸರ್ಜಿಕಲ್ ಸ್ಟ್ರೈಕ್ 2 ವಿರುದ್ಧ ಧ್ವನಿ ಎತ್ತಿದ್ದು, ಭಾರತದ ವಿರುದ್ಧ ಯುದ್ಧ ಘೋಷಿಸಬೇಕು ಎಂದು ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಒತ್ತಾಯಿಸುತ್ತಿದ್ದಾರೆ.

ಜನ ಏನು ಹೇಳುತ್ತಿದ್ದಾರೆ?:
ಬೆಂಗಳೂರಿನಲ್ಲಿ ಆರಂಭವಾದ ಏರ್ ಶೋ ಪಾಕಿಸ್ತಾನದ ಉಗ್ರರ ನೆಲೆಯ ಮೇಲೆ ದಾಳಿ ಮಾಡುವ ಮೂಲಕ ಮುಕ್ತಾಯವಾಗಿದೆ ಎಂದು ನೆಟ್ಟಿಗರೊಬ್ಬರು ಫೇಸ್‍ಬುಕ್‍ನಲ್ಲಿ ಪಾಕಿಸ್ತಾನದ ವಿರುದ್ಧ ವ್ಯಂಗ್ಯವಾಡಿದ್ದಾರೆ.

AIR SHOW d

ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಕರ್ನಾಟಕಕ್ಕೆ ಮೋಸ ಮಾಡುತ್ತಿದ್ದಾರೆ. ಏರ್ ಶೋ ಬೆಂಗಳೂರಿನಲ್ಲಿ ಎಂದು ಹೇಳಿ, ಇವಾಗ ಏರ್ ಶೋವನ್ನು ಪಾಕಿಸ್ತಾನದಲ್ಲಿ ನಡೆಸುತ್ತಿದ್ದಾರೆ ಎಂದು ರಾಮಚಂದ್ರ ಗೌಡ ಕಮೆಂಟ್ ಮಾಡಿದ್ದಾರೆ.

ಇದೇನ್ ಗುರು ಏರ್ ಶೋ ಬೆಂಗಳೂರಿನಲ್ಲಿ ಅಂತ ಹೇಳಿ ಪಾಕಿಸ್ತಾನದತ್ತ ಹೊರಟವರೇ ಎಂದು ನಾಗರಾಜ್ ಆರ್ ರಾವ್ ಫೇಸ್‍ಬುಕ್‍ನಲ್ಲಿ ಕಮೆಂಟ್ ಮಾಡಿದ್ದಾರೆ.

ಮೂಲಗಳ ಪ್ರಕಾರ ಮೊದಲು 20 ಕೆಜಿ ಟೊಮೆಟೊ ಎಸೆಯಲಾಯಿತಂತೆ. ಹೆಕ್ಕಲು ಮುಗಿಬಿದ್ದ ಉಗ್ರರ ಮೇಲೆ ಸಾವಿರ ಕೆಜೆ ಬಾಂಬ್ ಹಾಕಲಾಯಿತು ಎಂದು ವ್ಯಂಗ್ಯವಾಗಿ  ಕಮೆಂಟ್ ಮಾಡಿದ್ದಾರೆ.

air show 21

ಪ್ರಧಾನಿ ಮೋದಿ: ವಾಯು ದಾಳಿ ನಡೆಸಿದ್ದೇವೆ!,
ಪಾಕ್ ಪ್ರಧಾನಿ ಇಮ್ರಾನ್ ಖಾನ್: ಸಮಾಧಾನ ಆಯ್ತಾ? ಈಗಲಾದರೂ ಟೊಮೆಟೋ, ನೀರು ಬಿಡಿ ಪ್ಲೀಸ್! ಎಂದು ವ್ಯಂಗ್ಯವಾಗಿ ಗೊರಾ ನರಸಿಂಹ ಮೂರ್ತಿ ಫೆಸ್‍ಬುಕ್‍ನಲ್ಲಿ ಕಮೆಂಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article