ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರ, ಭಾರತೀಯ ಯೋಧರ ಮೇಲೆ ಆತ್ಮಾಹುತಿ ದಾಳಿ ನಡೆಸಿ 40 ಮಂದಿ ಸೈನಿಕರನ್ನು ಬಲಿ ಪಡೆದ ಮರುದಿನವೇ ಭಾರತ, ಪಾಕ್ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ಲಾನ್ ಮಾಡಿತ್ತು.
ಯೋಧರನ್ನು ಕಳೆದುಕೊಂಡ ಬಳಿಕ ಇಡೀ ಭಾರತ ದುಃಖಿಸುತ್ತಿದ್ದು, ಪಾಕ್ ವಿರುದ್ಧ ಪ್ರತಿಕಾರ ತೀರಿಸಲೇಬೇಕು ಎಂದು ಜನ ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದರು. ಆದರೆ ಇದೇ ಸಂದರ್ಭದಲ್ಲಿ ಪಾಕ್ ವಿರುದ್ಧ ಯಾವ ರೀತಿ ಸೇಡು ತೀರಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಭಾರತ ಸೈನ್ಯದ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದರು.
Advertisement
Advertisement
ಭಾರತ ರೂಪಿಸಿದ್ದ ಪ್ಲಾನ್ ಹೀಗಿತ್ತು:
ಫೆಬ್ರವರಿ 15:
ಫೇಬ್ರವರಿ 14 ಪ್ರೇಮಿಗಳ ದಿನಂದೇ ಉಗ್ರರು ಯೋಧರ ಮೇಲೆ ದಾಳಿ ನಡೆಸಿದ್ದು, ಅದರ ಮರುದಿನವೇ ವಾಯು ಸೇನಾ ಮುಖ್ಯಸ್ಥ ಬೀರೇಂದರ್ ಸಿಂಗ್ ಧನೋವಾ ಏರ್ ಸ್ಟ್ರೈಕ್ ಮೂಲಕ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಇದಕ್ಕೆ ಮೋದಿ ಸರ್ಕಾರ ಒಪ್ಪಿಗೆಯನ್ನೂ ಸೂಚಿಸಿತ್ತು. ಇದನ್ನೂ ಓದಿ: ಭಾರತದ ಬಾಂಬ್ ದಾಳಿಗೆ ಜೈಷ್ ಉಗ್ರರ ಅತಿ ದೊಡ್ಡ ಕ್ಯಾಂಪ್ ಧ್ವಂಸ
Advertisement
ಫೆ. 16ರಿಂದ 20:
ಉಗ್ರರ ಕೇಂದ್ರ ಸ್ಥಳಗಳನ್ನು ಪತ್ತೆ ಹಚ್ಚಲು ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಭೂಸೇನೆ ಮತ್ತು ವಾಯುಸೇನೆ 4 ದಿನ ವೈಮಾನಿಕ ಸಮೀಕ್ಷೆ ನಡೆಸಿತ್ತು. ಇಸ್ರೇಲ್ ನಿರ್ಮಿತ ಹೆರಾನ್ ಹೆಸರಿನ ಮಾನವರಹಿತ ವೈಮಾನಿಕ ಸರ್ವೇಕ್ಷಣಾ ವಾಹನ ಬಳಸಿ ಈ ಸರ್ವೆ ಮಾಡಲಾಗಿತ್ತು.
Advertisement
ಫೆ. 20-22:
ಎಲ್ಲಿ ದಾಳಿ ನಡೆಯಬೇಕೆಂಬ ಬಗ್ಗೆ 2 ದಿನ ಚರ್ಚೆ ನಡೆಸಲಾಗಿತ್ತು. ಗುಪ್ತಚರ ದಳ, ವಾಯುಸೇನೆ ಅಧಿಕಾರಿಗಳ ಮಧ್ಯೆ ಮಹತ್ವದ ಚರ್ಚೆ ನಡೆಸಲಾಯಿತು. ಈ ವೇಳೆ ಅಧಿಕಾರಿಗಳು ದಾಳಿ ನಡೆಸುವ ಸ್ಥಳಗಳನ್ನು ಗುರುತು ಹಾಕೊಂಡಿದ್ದರು. ಇದನ್ನೂ ಓದಿ: ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತ ಸೇನೆ!
ಫೆ. 21:
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಏರ್ ಸ್ಟ್ರೈಕ್ ನಡೆಸುವ ಬಗ್ಗೆ ವಿವರಗಳನ್ನು ನೀಡಿದ್ರು. ಈ ಸಂದರ್ಭದಲ್ಲಿ ಅವರು ಕೆಲ ಸಲಹೆಗಳನ್ನುಕೂಡ ನೀಡಿದರು.
ಫೆ.22:
ವಾಯುಸೇನೆಯ `ಟೈಗರ್’ ಮತ್ತು `ಬ್ಯಾಟಲ್ ಆ್ಯಕ್ಸೆಸ್’ ಸ್ಕ್ವಾಡರ್ನ್ ನ 12 ಗೆ ದಾಳಿಯ ಹೊಣೆ ಹೊರಿಸಲಾಗಿತ್ತು. ಇದನ್ನೂ ಓದಿ: ಯಾವುದೇ ಹಾನಿಯಾಗಿಲ್ಲ, ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದ್ರು: ಪಾಕಿಸ್ತಾನ ಮೊಂಡುವಾದ
ಫೆ.24
ಪಂಜಾಬ್ ನ ಭಟಿಂಡಾದಲ್ಲಿ ಮಿರಾಜ್ ಯುದ್ಧ ವಿಮಾನದ ಮೂಲಕ ವಾಯು ಸೇನೆ ಟ್ರಯಲ್ ನೋಡಿತ್ತು. ಬಳಿಕ ಮಿರಾಜ್ ಯುದ್ಧ ವಿಮಾನಗಳು ಆಗ್ರಾದಲ್ಲಿ ಇಂಧನ ತುಂಬಿಸಿಕೊಂಡಿದ್ದವು.
ಫೆ.25-26
ಕಾರ್ಯಾಚರಣೆ ಆರಂಭ ಮಾಡಲಾಗಿತ್ತು. ಮಿರಾಜ್-2000 ವಿಮಾನವು ಗ್ವಾಲಿಯಾರ್ ನಿಂದ ಟೇಕಾಫ್ ಆಗಿತ್ತು. ಈ ಯುದ್ಧ ವಿಮಾನಗಳು 1000 ಕೆ.ಜಿ ತೂಕದ 10 ಲೇಸರ್ ಗೈಡೆಡ್ ಬಾಂಬ್‍ಗಳಿಂದ ತುಂಬಿದ್ದವು. ಇದನ್ನೂ ಓದಿ: `How is The Josh Sir’- ಭಾರತೀಯ ವೀರಯೋಧರಿಗೆ ಬಿಗ್ ಸೆಲ್ಯೂಟ್
ಮಿರಾಜ್ ಪೈಲಟ್ ಕೊನೆಯದಾಗಿ ಟಾರ್ಗೆಟ್ ಮಾಡಿದ ಸ್ಥಳಗಳನ್ನು ಮತ್ತೊಮ್ಮೆ ಪರಿಶೀಲಿಸಿದ್ದಾರೆ. ನಂತರ ಮುಜಾಫರ್ ಬಾದ್ ನಲ್ಲಿರುವ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿಗೆ ಮುಂದಾಗಿದ್ದಾರೆ. ಈ ಕಾರ್ಯಾಚರಣೆ ನಸುಕಿನ ಜಾವ 3.20, 3.30ರ ಸುಮಾರಿಗೆ ನಡೆದಿದ್ದು, ಉಗ್ರರ 3 ಕೇಂದ್ರಗಳನ್ನು ಧ್ವಂಸ ಮಾಡಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv