Advertisements

ಬೆಂಗಳೂರು: ನಗರದ ಮಾಗಡಿ ರಸ್ತೆಯಲ್ಲಿ ಬಿಎಂಟಿಸಿ ಬಸ್ ಮೂಲಕ ಸಂಚರಿಸಿ ಸರಳತೆಯನ್ನು ಮೆರೆದ ಮಾಜಿ ಸಚಿವ ಸುರೇಶ್ ಕುಮಾರ್ ಅವರ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
Advertisements
ಇಂದು ಮುಂಜಾನೆ ಬಸವೇಶ್ವರ ನಗರದ ತಮ್ಮ ಮನೆಯಿಂದ ಮಾಗಡಿ ರಸ್ತೆಯ ಸುಮನಹಳ್ಳಿ ಬಸ್ ನಿಲ್ದಾಣದವರೆಗೂ ಒಬ್ಬರೇ ನಡೆದು ಬಂದು ಅಲ್ಲಿಂದ ತಮ್ಮೊಬ್ಬ ಸ್ನೇಹಿತರೊಂದಿಗೆ ಬಿಎಂಟಿಸಿ ಬಸ್ ಹತ್ತಿದ ಸುರೇಶ್ ಕುಮಾರ್ ತಾವರೆಕೆರೆಯವರೆಗೂ ಬಸ್ನಲ್ಲಿ ಸಂಚರಿಸಿ ಬಸ್ ಪ್ರಯಾಣಿಕರ ಕುಶಲೋಪರಿ ವಿಚಾರಿಸಿದ್ದಾರೆ. ಇದನ್ನೂ ಓದಿ: ಮಾಜಿ ಸೈನಿಕರನ್ನು ಹತ್ಯೆಗೈದ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ
Advertisements
ನಿರ್ವಾಹಕರು ಬೇಡವೆಂದರೂ ಕೇಳದೇ ತಮ್ಮ ಜೊತೆಗಿದ್ದ ಒಬ್ಬರೇ ಸ್ನೇಹಿತರದ್ದು ಸೇರಿದಂತೆ ತಲಾ ಇಪ್ಪತ್ತು ರೂಪಾಯಿ ಕೊಟ್ಟು ಟಿಕೇಟು ಪಡೆದು ಮಾದರಿಯಾಗಿದ್ದಾರೆ. ತಮ್ಮೊಂದಿಗೆ ಅಂಗರಕ್ಷಕರನ್ನು ಸಹ ಕರೆದೊಯ್ಯದೇ ತಮ್ಮ ಎಂದಿನ ಸರಳ ನಡೆಯನ್ನು ಅನುಸರಿಸಿದ್ದಾರೆ. ಇದನ್ನೂ ಓದಿ: ಫುಲ್ ಹ್ಯಾಪಿ ಮೂಡ್ನಲ್ಲಿರುವ ವಿರುಷ್ಕಾ!
Advertisements