ಬೆಳಗಾವಿ: ದಿವಂಗತ ಸಂಸದ ಸುರೇಶ್ ಅಂಗಡಿ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು, ಬೆಳಗಾವಿ – ಬೆಂಗಳೂರು ಮಧ್ಯೆ ಓಡಾಡುವ ರೈಲಿಗೆ ಸುರೇಶ್ ಅಂಗಡಿ ಹೆಸರಿಡಲು ಶಿಫಾರಸ್ಸು ಮಾಡುತ್ತೇನೆ ಎಂದು ಹೇಳಿದ್ದಾರೆ.
Advertisement
ಬೆಳಗಾವಿ ಸಾವಗಾಂವನಲ್ಲಿರುವ ಸುರೇಶ್ ಅಂಗಡಿ ಕಾಲೇಜಿನಲ್ಲಿ ಇಡಲಾಗಿದ್ದ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುರೇಶ್ ಅಂಗಡಿಯವರು ಅಜಾತ ಶತ್ರು, ಎಲ್ಲರ ಪ್ರೀತಿ ಗಳಿಸುವ ವ್ಯಕ್ತಿತ್ವ ಅವರದ್ದಾಗಿದೆ. ಸುರೇಶ್ ಅಂಗಡಿ ಮನೆಯಲ್ಲಿ ಅವರ ತಾಯಿಮಾಡುತ್ತಿದ್ದ ಬಿಸಿ ರೊಟ್ಟಿ ಹಾಗೂ ಅವರ ತಾಯಿ ಆಶೀರ್ವಾದ ಕೂಡ ನಮಗೆ ಸಿಕ್ಕಿದೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಒಳ್ಳೆಯ ಕೆಲಸ ಮಾಡಿದ್ದರೆ ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಇಳಿಸುತ್ತಿರಲಿಲ್ಲ: ಡಿಕೆಶಿ
Advertisement
Advertisement
ಇದೇ ವೇಳೆ ಸುರೇಶ್‍ಗೆ ಹಿಂದೂತ್ವದ ಬಗ್ಗೆ ಬಹಳ ಅಭಿಮಾನ ಇತ್ತು. ಅಧಿಕಾರ ಕೊಟ್ಟರೆ ಅವರ ಸಾಮರ್ಥ್ಯ ಗೊತ್ತಾಗುತ್ತದೆ. ಸುರೇಶ್ ಅಂಗಡಿಗೆ ಅಧಿಕಾರ ಕೊಟ್ಟ ಕೆಲವೇ ದಿನಗಳಲ್ಲಿ ರೈಲ್ವೆ ಸುಧಾರಿಸಿದರು. ಯಡಿಯೂರಪ್ಪನವರು ಸಹ ಸುರೇಶ್ ಅಂಗಡಿಗೆ ಎಷ್ಟು ಕೆಪ್ಯಾಸಿಟಿ ಇದೆ ಎಂದು ಮಾತನಾಡಿದ್ದರು. ಅಲ್ಲದೇ ರೈಲ್ವೆ ಬೋರ್ಡ್‍ನಲ್ಲಿ ಕೂಡಾ ಪ್ರಭಾವ ಬೀರಿದ್ದರು ಎಂದು ಹೇಳಿದ್ದಾರೆ.
Advertisement
ಉತ್ತರ ಕರ್ನಾಟಕದ ಮೇಲೆ ಸುರೇಶ್ ಅವರಿಗೆ ಬಹಳ ಅಭಿಮಾನ ಇತ್ತು. ಅವರು ಸಿದ್ದಾರೂಢರ ಭಕ್ತರಾಗಿದ್ದರು. ಈ ಹಿಂದೆ ಖಂಡಿತವಾಗಿಯೂ ಧಾರವಾಡ ಬೆಳಗಾವಿ ರೈಲ್ವೆ ಯೋಜನೆಗೆ ಸಹಕಾರ ಕೊಡುತ್ತೇವೆ ಎಂದಿದ್ದರು. ಆದರೆ ಸುರೇಶ್ ಅಂಗಡಿಯವರು ಬಹಳ ಪ್ರೀತಿ ಕೊಟ್ಟು ಹೋಗಿದ್ದಾರೆ. ನಾವು ಅದನ್ನು ಉಳಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಕಿನಿ ತೊಟ್ಟು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ಹೆಬ್ಬುಲಿ ಬೆಡಗಿ