ಬಾಗಲಕೋಟೆ: ಬಾಗಲಕೋಟೆ ಜೊತೆಗೆ ಬಾದಾಮಿ ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧೆಗೆ ಇಳಿಯುವುದಾಗಿ ವಿಜಯಲಕ್ಷ್ಮಿ ಸರೂರ ಇಂಗಿತ ವ್ಯಕ್ತಪಡಿಸಿದರು.
ಈ ಹಿಂದೆ ಮಾಜಿ ಸಚಿವ ಮೇಟಿ ವಿರುದ್ಧ ಬಾಗಲಕೋಟೆ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು. ಆದರೆ, ಈಗ ಸಿಎಂ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗುತ್ತಿದ್ದಂತೆ ತಾವು ಕೂಡ ಅಲ್ಲಿಯೂ ಕೂಡ ಸ್ಪರ್ಧಿಸುವುದಾಗಿ ಹೇಳಿರುವ ಅವರು, ಸಿಎಂ ಹಾಗೂ ಮೇಟಿ ವಿರುದ್ಧ ಸ್ಪರ್ಧಿಸದಂತೆ ಕೆಲವರು ಬೆದರಿಕೆ ನೀಡಿದ್ದಾರೆ. ಯಾವುದೇ ಆಸೆ-ಆಮಿಷ ಹಾಗೂ ಬೆದರಿಕೆಗೆ ಒಳಗಾಗದೆ ಚುನಾವಣೆ ಎದುರಿಸುತ್ತೇನೆ ಎಂದು ವಿಜಯಲಕ್ಷ್ಮೀ ತಿಳಿಸಿದ್ದಾರೆ. ಇದನ್ನೂ ಓದಿ: ಮೇಟಿ ವರ್ಸಸ್ ವಿಜಯಲಕ್ಷ್ಮೀ-ರಂಗೇರುತ್ತಿದೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರ
ಸಿಎಂ ವಿರುದ್ಧ ಸ್ಪರ್ಧಿಸಲು ಯಾವುದೇ ಪಕ್ಷಗಳು ನನಗೆ ಪ್ರೇರೆಪಣೆ ನೀಡಿಲ್ಲ. ಬಾದಾಮಿ ಮತಕ್ಷೇತ್ರದ ಕುರುಬ ಸಮುದಾಯದ ಜನರ ಒತ್ತಾಯವಿದೆ ಎಂದು ಹೇಳಿಕೆ ನೀಡಿದ್ದಾರೆ.