ಮೋದಿ ಸೀರೆ ಆಯ್ತು, ಇದೀಗ ರಾಹುಲ್-ಪ್ರಿಯಾಂಕ ಸೀರೆ!

Public TV
1 Min Read
Rahul Priyanaka

ಗಾಂಧಿನಗರ: ಲೋಕಸಭಾ ಚುನಾವಣೆ ಕದನದ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಟ್ಟೆ ವ್ಯಾಪಾರಸ್ಥರು ರಾಜಕೀಯ ನಾಯಕರ ಫೋಟೋ, ಪಕ್ಷದ ಚಿಹ್ನೆಗಳುಳ್ಳ ಸೀರೆಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ ಭಾವಚಿತ್ರವುಳ್ಳ ಸೀರೆಗಳು ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿವೆ. ಇದೀಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮುಖ್ಯ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಫೋಟೋವುಳ್ಳ ಸೀರೆಗಳು ಮಹಿಳೆಯರನ್ನು ಸೆಳೆಯುತ್ತಿವೆ.

priyanka saree

ಗುಜರಾತಿನ ಸೂರತ್ ಮಾರುಕಟ್ಟೆಯ ವ್ಯಾಪಾರಿ ಗೌರವ್ ಶ್ರೀಮಾಲಿ ಕಾಂಗ್ರೆಸ್ ಸೀರೆಗಳನ್ನು ತಯಾರಿಸುತ್ತಿದ್ದಾರೆ. ಸೀರೆಗಳಲ್ಲಿ ಪ್ರಿಯಾಂಕ ಗಾಂಧಿ ಮತ್ತು ರಾಹುಲ್ ಗಾಂಧಿ ಫೋಟೋಗಳನ್ನು ಬಣ್ಣ ಬಣ್ಣಗಳೊಂದಿಗೆ ಡಿಜಿಟಲ್ ಪ್ರಿಂಟ್ ಮಾಡಲಾಗುತ್ತಿದೆ. ಗೌರವ್ ಶ್ರೀಮಾಲಿ ಸಹ ಓರ್ವ ಕಾಂಗ್ರೆಸ್ ಬೆಂಬಲಿಗರಾಗಿದ್ದಾರೆ.

2014ರಲ್ಲಿ ಮೊದಲ ಬಾರಿಗೆ ಮೋದಿಯವರ ಫೋಟೋಗಳುಳ್ಳ ಸೀರೆಗಳನ್ನು ಮುದ್ರಿಸಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂದಿತ್ತು. ಬಿಜೆಪಿ ಕಾರ್ಯಕರ್ತೆಯರು ಸೀರೆಗಳನ್ನು ಧರಿಸಿ ಪ್ರಚಾರದಲ್ಲಿ ಭಾಗಿಯಾಗಿದ್ದರು. ಇದೀಗ ಸೂರತ್ ವ್ಯಾಪಾರಿ ಗೌರವ್ 120 ಬಗೆಯ ರಾಹುಲ್ ಮತ್ತು ಪ್ರಿಯಾಂಕ ಗಾಂಧಿ ಚಿತ್ರವುಳ್ಳ ಸೀರೆಗಳನ್ನು ಸಿದ್ಧಗೊಳಿಸಿದ್ದು, ಮುಂಬೈ ಸೇರಿದಂತೆ ದೇಶದ ಹಲವೆಡೆ ಕಳುಹಿಸಿದ್ದಾರೆ.

ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಭಾವಚಿತ್ರಗಳನ್ನು ಒಳಗೊಂಡಿರುವ ಸೀರೆ ತೊಟ್ಟು ಬ್ಯೂಟಿಸ್ ಮಿಂಚುತ್ತಿದ್ದಾರೆ. ಇಷ್ಟು ದಿನ ಸಾಮಾಜಿಕ ಜಾಲತಾಣಗಳಲ್ಲಿ, ಗುಜರಾತಿನಲ್ಲಿ ಸದ್ದು ಮಾಡಿದ ಮೋದಿ ಸೀರೆಗಳು ಮಾಯಾನಗರಿ ಬೆಂಗಳೂರಿನ ಮಾರ್ಕೆಟ್ ಗಳಿಗೆ ಈಗ ಕಾಲಿಟ್ಟಿದ್ದು, ಸಖತ್ ಡಿಮ್ಯಾಂಡ್ ಆಂಡ್ ಟ್ರೆಂಡ್ ಕ್ರಿಯೆಟ್ ಮಾಡಿವೆ.

Share This Article
Leave a Comment

Leave a Reply

Your email address will not be published. Required fields are marked *