ಜೈಪುರ್: ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದಿದ್ದ ಆರೋಪಿಗೆ ವಿಧಿಸಿ ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬಿಹಾರದ ಬಕ್ಸರ್ ಜಿಲ್ಲೆಯ ಅನಿಲ್ ಯಾದವ್ ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿ. ಅನಿಲ್ ಯಾದವ್ ಕೆಲಸಕ್ಕಾಗಿ ರಾಜಸ್ಥಾನದ ಸೂರತ್‍ಗೆ ಬಂದಿದ್ದ. ಈ ವೇಳೆ ತಾನು ವಾಸವಾಗಿದ್ದ ಮನೆಯ ಪಕ್ಕದಲ್ಲಿದ್ದ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದಿದ್ದ.
Advertisement
Advertisement
ಅಪರಾಧಿ ಅನಿಲ್ ಯಾದವ್ ಬಾಲಕಿಯನ್ನು ಅಪಹರಣ ಮಾಡಿ ತನ್ನ ರೂಮ್‍ನಲ್ಲಿ ಕೂಡಿ ಹಾಕಿದ್ದ. ರಾತ್ರಿ ಇಡಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಅಷ್ಟೇ ಅಲ್ಲದೆ ಈ ವಿಚಾರ ಯಾರಿಗೂ ತಿಳಿಯಬಾರದು ಅಂತ ಬಾಲಕಿಯನ್ನು ಕೊಲೆ ಮಾಡಿ ಅಲ್ಲಿಯೇ ಮುಚ್ಚಿ ಹಾಕಿದ್ದ.
Advertisement
ಬಾಲಕಿ ನಾಪತ್ತೆಯಾಗಿದ್ದರಿಂದ ಗಾಬರಿಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಆರಂಭಿಸಿದ್ದರು. ಆದರೆ ಅಪರಾಧಿ ಅನಿಲ್ ಯಾದವ್ ತಲೆಮರೆಸಿಕೊಂಡಿದ್ದ. ಬಿಹಾರದಲ್ಲಿ ಆರೋಪಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಆತನಿಗೆ ಬಲೆ ಬೀಸಿದ ಪೊಲೀಸರು, ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಅನಿಲ್ ಯಾದವ್ ತನ್ನ ಕೃತ್ಯವನ್ನ ಒಪ್ಪಿಕೊಂಡಿದ್ದ.