Connect with us

Crime

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿದ್ದ ಆರೋಪಿಗೆ ಗಲ್ಲು ಶಿಕ್ಷೆ

Published

on

ಜೈಪುರ್: ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದಿದ್ದ ಆರೋಪಿಗೆ ವಿಧಿಸಿ ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಬಿಹಾರದ ಬಕ್ಸರ್ ಜಿಲ್ಲೆಯ ಅನಿಲ್ ಯಾದವ್ ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿ. ಅನಿಲ್ ಯಾದವ್ ಕೆಲಸಕ್ಕಾಗಿ ರಾಜಸ್ಥಾನದ ಸೂರತ್‍ಗೆ ಬಂದಿದ್ದ. ಈ ವೇಳೆ ತಾನು ವಾಸವಾಗಿದ್ದ ಮನೆಯ ಪಕ್ಕದಲ್ಲಿದ್ದ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದಿದ್ದ.

ಅಪರಾಧಿ ಅನಿಲ್ ಯಾದವ್ ಬಾಲಕಿಯನ್ನು ಅಪಹರಣ ಮಾಡಿ ತನ್ನ ರೂಮ್‍ನಲ್ಲಿ ಕೂಡಿ ಹಾಕಿದ್ದ. ರಾತ್ರಿ ಇಡಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಅಷ್ಟೇ ಅಲ್ಲದೆ ಈ ವಿಚಾರ ಯಾರಿಗೂ ತಿಳಿಯಬಾರದು ಅಂತ ಬಾಲಕಿಯನ್ನು ಕೊಲೆ ಮಾಡಿ ಅಲ್ಲಿಯೇ ಮುಚ್ಚಿ ಹಾಕಿದ್ದ.

ಬಾಲಕಿ ನಾಪತ್ತೆಯಾಗಿದ್ದರಿಂದ ಗಾಬರಿಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಆರಂಭಿಸಿದ್ದರು. ಆದರೆ ಅಪರಾಧಿ ಅನಿಲ್ ಯಾದವ್ ತಲೆಮರೆಸಿಕೊಂಡಿದ್ದ. ಬಿಹಾರದಲ್ಲಿ ಆರೋಪಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಆತನಿಗೆ ಬಲೆ ಬೀಸಿದ ಪೊಲೀಸರು, ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಅನಿಲ್ ಯಾದವ್ ತನ್ನ ಕೃತ್ಯವನ್ನ ಒಪ್ಪಿಕೊಂಡಿದ್ದ.

Click to comment

Leave a Reply

Your email address will not be published. Required fields are marked *