ಗಾಂಧಿನಗರ: ಸೂರತ್‌ನಲ್ಲಿ (Surat) ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾದ ಪ್ರಕರಣದ ಹಿಂದೆ ಭಾರೀ ಗೋಲ್ಮಾಲ್ ನಡೆದಿದೆ ಎಂದು ಕಾಂಗ್ರೆಸ್ (Congress) ಗಂಭೀರ ಆರೋಪ ಮಾಡಿದೆ.
ಸೂರತ್ ಲೋಕಸಭೆ ಚುನಾವಣಾ (Lok Sabha Election) ಪ್ರಕ್ರಿಯೆಯಲ್ಲಿ ಆಡಳಿತ ಪಕ್ಷ ಬಿಜೆಪಿ (BJP) ಪ್ರಭಾವ ಬೀರಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಸೂರತ್‌ನಲ್ಲಿ ಮತ್ತೊಮ್ಮೆ ಚುನಾವಣೆ ನಿರ್ವಹಿಸಲು ಕೋರಿ ಕಾಂಗ್ರೆಸ್ ಕೇಂದ್ರ ಚುನಾವಣಾ ಆಯೋಗದ ಮೊರೆ ಹೋಗಿದೆ. ಇದನ್ನೂ ಓದಿ: ಗುಜರಾತಿನಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಗೆದ್ದಿದ್ದು ಹೇಗೆ?
ಈ ಮಧ್ಯೆ ಸೋಮವಾರದಿಂದ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ (Nilesh Kumbhani) ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅವರ ಮನೆಗೂ ಬೀಗ ಹಾಕಿದ್ದು, ಫೋನ್ ಸ್ವಿಚ್ ಆಫ್ ಆಗಿದೆ. ಇದು ಭಾರೀ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಶೀಘ್ರವೇ ನೀಲೇಶ್ ಕುಂಭಾವಿ ಬಿಜೆಪಿ ಸೇರಬಹುದು ಎಂಬ ಸುದ್ದಿ ಹಬ್ಬಿದೆ. ಇದರಿಂದ ಸ್ಥಳೀಯ ಕಾಂಗ್ರೆಸ್ಸಿಗರು ಫುಲ್ ಗರಂ ಆಗಿದ್ದಾರೆ. ನೀಲೇಶ್ ದ್ರೋಹಿ ಎಂಬ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಕೇವಲ 5 ದಿನದ ಚುನಾವಣೆ; ಕಾಂಗ್ರೆಸ್ ಕುಸಿದರೂ ಗೆದ್ದ ಇಂದಿರಾ
ಬಿಜೆಪಿ ಅಭ್ಯರ್ಥಿ ಮುಕೇಶ್ ಗೆದ್ದಿದ್ದಾರೆ ಎಂದು ಈಗಾಗಲೇ ಜಿಲ್ಲಾ ಚುನಾವಣಾಧಿಕಾರಿಗಳು ಪ್ರಮಾಣ ಪತ್ರ ಕೂಡ ಕೊಟ್ಟುಬಿಟ್ಟಿದ್ದಾರೆ. ಕಾಂಗ್ರೆಸ್ ಈಗ ಚುನಾವಣಾ ಆಯೋಗದ ಮೊರೆ ಹೋಗಿರುವ ಕಾರಣ ಮುಂದಿನ ಏನಾಗಬಹುದು ಎಂಬ ಕುತೂಹಲ ಹೆಚ್ಚಾಗಿದೆ.
ಬಿಜೆಪಿ ಭದ್ರಕೋಟೆ:
1989ರ ಚುನಾವಣೆಯ ಬಳಿಕ ಈ ಕ್ಷೇತ್ರದಲ್ಲಿ ಬಿಜೆಪಿ ಸೋತಿಲ್ಲ. 2019ರ ಚುನಾವಣೆಯಲ್ಲಿ ಬಿಜೆಪಿ 5.48 ಲಕ್ಷ ಮತಗಳ ಅಂತರದಿಂದ ಗೆದ್ದಿತ್ತು. ಬಿಜೆಪಿ ದರ್ಶನ್ ವಿಕ್ರಂ ಅವರಿಗೆ 7,95,651 ಮತಗಳು ಬಿದ್ದಿದ್ದರೆ ಕಾಂಗ್ರೆಸ್‌ನ ಅಶೋಕ್ ಪಾಟೀಲ್‌ಗೆ 2,47,421 ಮತಗಳು ಬಿದ್ದಿದ್ದವು.