ಸೂರತ್: 21 ವರ್ಷದ ಗುಜರಾತ್‍ನ ಸೂರತ್ ನಿವಾಸಿ ಆದಿತ್ಯಾ ಜಾವರ್ ಚಾರ್ಟರ್ಡ್ ಅಕೌಂಟೆಂಟ್ (ಸಿಎ), ಕಂಪನಿ ಸೆಕ್ರೇಟರಿ(ಸಿಎಸ್), ಕಾಸ್ಟ್ ಮತ್ತು ಮ್ಯಾನೇಜ್‍ಮೆಂಟ್ ಅಕೌಂಟೆನ್ಸಿ (ಸಿಎಂಎ) ಪರೀಕ್ಷೆಯನ್ನು ಪಾಸ್ ಮಾಡುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.
ಈ ಮೊದಲು ದೆಹಲಿಯ ಸಾರ್ಥಕ್ ಅಹುಜ ಮತ್ತು ಪಲ್ಲವಿ ಸಚ್‍ದೇವ 23 ವರ್ಷದಲ್ಲಿ ಸಿಎ, ಸಿಎಸ್, ಸಿಎಂಎ ಮುಗಿಸಿದ್ದರು. ಆದರೆ ಈಗ ಸಿಎಂಎ ಅಂತಿಮ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಜಾವರ್ ತೇರ್ಗಡೆಯಾಗುವ ಮೂಲಕ ಹೊಸ ಮೈಲಿಗಲ್ಲನ್ನು ಬರೆದಿದ್ದಾರೆ.
Advertisement
12ನೇ ತರಗತಿ ಮುಗಿಸಿದ ನಂತರ ಜಾವರ್ ತನ್ನ ಓದಿನ ಜೊತೆಗೆ ಸಿಎ ಓದಲು ಆರಂಭಿಸಿದರು. 15ನೇ ವರ್ಷದಲ್ಲಿ ಸಿಎ ಎಲ್ಲ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ಸಿಎಎಸ್ ಪರೀಕ್ಷೆಯನ್ನು ಕಟ್ಟಿದರು. ನಂತರ ಸಿಎಂಎ ಪರೀಕ್ಷೆ ಬರೆದು ಈಗ ಉತ್ತೀರ್ಣರಾಗಿದ್ದಾರೆ.
Advertisement
ಜಾವರ್ ಸೂರತ್‍ನ ಚಾರ್ಟರ್ಡ್ ಅಕೌಂಟೆಟ್ ಆಗಿರುವ ರವಿ ಚಾವ್‍ಚರಿಯ ಹತ್ತಿರ ತರಬೇತಿ ಪಡೆದಿದ್ದಾರೆ. ಇಂದಿರಾ ಗಾಂಧಿ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿಯನ್ನು ಓದಿರುವ ಜಾವರ್ ಈಗ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
Advertisement
ಜಾವರ್‍ನ ತಂದೆ ಮಹೇಶ್ ಜಾವರ್ ಜವಳಿ ವ್ಯಾಪಾರಿ. ಅವರು ಸಹ ಸಿಎ ಎರಡನೇ ಹಂತವನ್ನು ಪೂರ್ಣಗೊಳಿಸಿದ್ದರೂ ಕುಟುಂಬ ವ್ಯವಹಾರದಲ್ಲಿ ತೊಡಗಿರುವುದರಿಂದ ಸಿಎ ಫೈನಲ್ ಪರೀಕ್ಷೆಯನ್ನು ಬರೆದಿರಲಿಲ್ಲ. ಜಾವರ್‍ನ ತಾಯಿ ಕಳೆದ 25 ವರ್ಷಗಳಿಂದ ಶಾಲಾ ಶಿಕ್ಷಕಿಯಾಗಿದ್ದಾರೆ.
Advertisement