– 1 ಸಾವಿರ ನಿರ್ಗತಿಕರಿಗೆ ಮೂರು ಹೊತ್ತು ಊಟ
ಯಾದಗಿರಿ: ಉಡುಪಿ, ಮಹದೇವಪುರ ಶಾಸಕರ ಬಳಿಕ ಇದೀಗ ಯಾದಗಿರಿಯ ಸುರಪುರ ಬಿಜೆಪಿ ಶಾಸಕ ರಾಜೂಗೌಡ ಅವರು ಪಬ್ಲಿಕ್ ಟಿವಿ ಚಾಲೆಂಜ್ ಸ್ವೀಕರಿಸಿದ್ದಾರೆ.
ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್ ರಂಗನಾಥ್ ಅವರು ಬಿಗ್ ಬುಲೆಟಿನ್ ನಲ್ಲಿ ನೀಡಿದ್ದ ಚಾಲೆಂಜ್ ಅನ್ನು ಶಾಸಕರು ಜವಾಬ್ದಾರಿಯುತವಾಗಿ ಸ್ವೀಕರಿಸಿ ಜನರ ಕಷ್ಟಕ್ಕೆ ಮರುಗಿದ್ದಾರೆ. ಈ ಮೂಲಕ ಭಾರತ್ ಬಂದ್ ಇರುವಷ್ಟು ದಿನ ತಮ್ಮ ವಿಧಾನಸಭಾ ಕ್ಷೇತ್ರದ 1000 ನಿರ್ಗತಿಕರಿಗೆ ದಿನದ 3 ಹೊತ್ತು ಉಚಿತ ಊಟ ನೀಡಲು ಶಾಸಕರು ಮುಂದಾಗಿದ್ದಾರೆ.
Advertisement
Advertisement
ಸ್ವತಃ ತಾವೇ ಮುಂದೆ ನಿಂತು ಆಹಾರ ಸಿದ್ಧತೆ ಕಾರ್ಯ ನೋಡಿಕೊಳ್ಳುತ್ತಿರುವ ಶಾಸಕ ರಾಜೂಗೌಡ, ಆಹಾರ ಸಿದ್ಧಗೊಂಡ ಬಳಿಕ ಕಾರ್ಯಕರ್ತರ ಸಹಾಯದಿಂದ ಆಹಾರ ಹಂಚಿಕೆ ಕಾರ್ಯವನ್ನು ನಡೆಸುತ್ತಿದ್ದಾರೆ. ಮುಂಜಾಗ್ರತೆಯಾಗಿ ಅಧಿಕಾರಿಗಳ ನೇತೃತ್ವದಲ್ಲಿ ಆಹಾರ ತಯಾರಿಕೆಯಾಗುತ್ತಿದ್ದು, ಅಧಿಕಾರಿಗಳು ಸಮ್ಮತಿ ನೀಡಿದ ಬಳಿಕವೇ ಆಹಾರವನ್ನು ಪೂರೈಸಲಾಗುತ್ತಿದೆ. ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಟ- ಹೆಚ್.ಆರ್ ರಂಗನಾಥ್ ಚಾಲೆಂಜ್ ಸ್ವೀಕರಿಸಿದ ಶಾಸಕ ರಘುಪತಿ ಭಟ್
Advertisement
ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಈ ಸಮಯದಲ್ಲಿ ನಿರ್ಗತಿಕರಿಗೆ ಮತ್ತು ಬಡ ಕೂಲಿ ಕಾರ್ಮಿಕರಿಗೆ ಒಂದು ಹೊತ್ತು ಊಟ ಸಹ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸ್ಥಿತಿವಂತರು ತಮ್ಮ ಕೈಲಾದ ಸಹಾಯವನ್ನು ಮಾಡುವಂತೆ ಮತ್ತು ಈ ಕೆಲಸವನ್ನು ಚಾಲೆಂಜ್ ಆಗಿ ಸ್ವೀಕರಿಸುವಂತೆ ಪಬ್ಲಿಕ್ ಟಿವಿ ರಾಜ್ಯದ ಜನತೆಯಲ್ಲಿ ಮನವಿ ಮಾಡಿತ್ತು. ಇದೀಗ ಈ ಚಾಲೆಂಜ್ ಅನ್ನು ಕೆಲವರು ಸ್ವೀಕರಿಸುತ್ತಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.