ಬೆಂಗಳೂರು: ಸೂರಜ್ ರೇವಣ್ಣ (Suraj Revanna) ಪ್ರಕರಣದ ಕುರಿತು ಗೃಹಸಚಿವ ಡಾ.ಜಿ.ಪರಮೇಶ್ವರ್ (G.Parameshwar) ಪ್ರತಿಕ್ರಿಯಿಸಿದ್ದು, ಶನಿವಾರ ದೂರು ಬಂದಿರಲಿಲ್ಲ. ದೂರು ಬಂದ ಬಳಿಕ ಕ್ರಮ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಐಡಿಗೆ ಈ ಕೇಸ್ ವಹಿಸಿದ್ದೇವೆ. ಈ ಗಂಭೀರ ಪ್ರಕರಣವನ್ನು ಸಿಐಡಿ ತನಿಖೆ ಮಾಡುತ್ತೆ. ದೂರಿಗೆ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಪೊಲೀಸರು ತೆಗದುಕೊಳ್ಳುತ್ತಾರೆ. ಪ್ರಕರಣ ರಾಜಕೀಯ ಪ್ರೇರಿತ ಅನ್ನೊ ಬಗ್ಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸೂರಜ್ ರೇವಣ್ಣ ಪ್ರಕರಣ ಸಿಐಡಿ ತನಿಖೆಗೆ – ರಾಜ್ಯ ಸರ್ಕಾರ ಆದೇಶ
ಇನ್ನು ಸರ್ಕಾರ ಯಾವಾಗ ಬಿಳುತ್ತೆ ಅನ್ನೋದನ್ನ ಕುಮಾರಸ್ವಾಮಿ ಹೇಳುತ್ತಾರೆ ಎಂಬ ಸೋಮಣ್ಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇವರೆಲ್ಲ ಶಾಸ್ತ್ರ ಹೇಳುವುದನ್ನು ಯಾವಾಗ ಕಲಿತರು ಗೊತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ತಪ್ಪು ಮಾಡಿದ್ದರೆ ಸೂರಜ್ ಯಾಕೆ ದೂರು ಕೊಡೋಕೆ ಹೋಗ್ತಿದ್ರು? – ಹೆಚ್.ಡಿ ರೇವಣ್ಣ ಪ್ರಶ್ನೆ
ಹೆಚ್ಚುವರಿ ಡಿಸಿಎಂ ಮಾಡಬೇಕು ಎಂಬ ರಾಜಣ್ಣ, ಜಮೀರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಹೆಚ್ಚುವರಿ ಡಿಸಿಎಂ ಮಾಡಿದರೆ ತಪ್ಪಿಲ್ಲ ಅಂತ ಅವರ ಅಭಿಪ್ರಾಯ ಹೇಳಿದ್ದಾರೆ. ನನ್ನ ಅಭಿಪ್ರಾಯವನ್ನು ಕೇಳಿ ಡಿಸಿಎಂ ಮಾಡಲ್ಲ ಎಂದು ಚರ್ಚೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದನ್ನೂ ಓದಿ: ಇಸ್ರೋ ಹ್ಯಾಟ್ರಿಕ್ ಸಾಧನೆ – `ಪುಷ್ಪಕ್ʼ ಸೇಫ್ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ!