ಮಂಡ್ಯ: ಸೂರಜ್ ರೇವಣ್ಣ (Suraj Revanna) ಕೇಸ್ ವಿಚಾರ ನಮಗೂ ಮುಜುಗರ ತಂದಿದೆ ಎಂದು ಸಚಿವ ಚಲುವರಾಯಸ್ವಾಮಿ (Chaluvarayaswamy) ಹೇಳಿದ್ದಾರೆ.
ಈ ಕುರಿತು ಮಂಡ್ಯದಲ್ಲಿ (Mandya) ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಇದೆ, ಕೋರ್ಟ್ ಇದೆ. ಇದು ಬಹಿರಂಗವಾಗಿ ಚರ್ಚೆ ಮಾಡುವ ವಿಚಾರವಲ್ಲ. ನಮಗೂ ಇದರ ಬಗ್ಗೆ ಮುಜುಗರ ಇದೆ ಎಂದರು. ಇದನ್ನೂ ಓದಿ: ಆಸ್ತಿಗಾಗಿ ಮಾಲೂರು ಶ್ರೀಗಳಿಂದ ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ ಹತ್ಯೆ – ಇಬ್ಬರು ಶ್ರೀಗಳು ಸೇರಿ ಮೂವರು ಅರೆಸ್ಟ್!
ಪ್ರಕರಣದ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂಬ ಸೂರಜ್ ಆರೋಪಕ್ಕೆ ಪ್ರತಿಕ್ರಿಯಿಸಿ, ನಾವು ಏನು ಮಾಡುವುದು. ಇದು ನಮ್ಮ ಕೈಯಲ್ಲಿ ಇದಿಯಾ? ಇದನ್ನ ಸರಿಪಡಿಸುವುದು ನಮ್ಮ ಕೈಯಲ್ಲಿ ಇಲ್ಲ. ಇಬ್ಬರು ದೂರು ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ಆಗುತ್ತೆ. ಕೇಸ್ ಅಂಡ್ ಕೌಂಟರ್ ಕೇಸ್ ಆಗಿದೆ. ಇದರಲ್ಲಿ ರಾಜಕೀಯ ಏನು ಬರುತ್ತದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸೂರಜ್ ರೇವಣ್ಣ ಬಂಧನ – ಸಿಎಂ ಪುತ್ರ ಯತೀಂದ್ರ ಹೇಳಿದ್ದೇನು?
ಅವರ ಮನೆತನವೇ ರಾಜಕಾಣದಲ್ಲಿ ಬೆಳೆದಿದೆ. ಈ ಪರಿಸ್ಥಿತಿ ನಿರ್ಮಾಣಕ್ಕೆ ಅವರೇ ಕಾರಣ. ನಾವು ಏನು ಮಾಡಲು ಸಾಧ್ಯ? ನಮ್ಮ ಬಳಿ ಪೆನ್‌ಡ್ರೈವ್ ಇದೆ ಅಂತಾ ನಾವು ಹೇಳಿದ್ದೇವಾ? ಬಡವರ ಮಕ್ಕಳು ಇರಬಾರದಾ? ಇವತ್ತು ದೇವೇಗೌಡರನ್ನು ನಮ್ಮ ನಾಯಕರು ಎನ್ನುತ್ತೇವೆ. ಯಾವುದೇ ಪಕ್ಷದಲ್ಲಿ ಇದ್ದರೂ ವೈಯಕ್ತಿಕ ಟೀಕೆ ಟಿಪ್ಪಣಿ ಕಡಿಮೆ ಮಾಡಿ ಅಭಿವೃದ್ಧಿ ಕಡೆಗೆ ಗಮನಹರಿಸಲಿ ಎಂದು ಹೇಳಿದರು. ಇದನ್ನೂ ಓದಿ: ಪ್ರೀತಿಗೆ ಕುಟುಂಬದಿಂದ ವಿರೋಧ; ವಿವಾಹಿತ ಪುರುಷನೊಂದಿಗೆ ವಿದ್ಯಾರ್ಥಿನಿ ಆತ್ಮಹತ್ಯೆ!