ಹಾಸನ: ಆಕಸ್ಮಿಕವಾಗಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದು ಅಚ್ಚರಿಯಾಗಿ ಎಂಎಲ್‍ಸಿ ಅಭ್ಯರ್ಥಿ ಆಗಿದ್ದೇನೆ. ನಾನು ಸ್ಪರ್ಧಿಸುವ ಭಾವನೆ ಇರಲಿಲ್ಲ ಎಂದು ಜೆಡಿಎಸ್ ಎಂಎಲ್‍ಸಿ ಅಭ್ಯರ್ಥಿ ಸೂರಜ್ ರೇವಣ್ಣ ತಿಳಿಸಿದರು.
Advertisement
ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಶೇಕಡ 70ರಷ್ಟು ಜೆಡಿಎಸ್ ಕಾರ್ಯಕರ್ತರು ನನ್ನ ತಾಯಿ ಭವಾನಿ ರೇವಣ್ಣ ಅವರನ್ನು ಅಭ್ಯರ್ಥಿ ಮಾಡುವ ನಿಟ್ಟಿನಲ್ಲಿ ಇದ್ದರು. ಆದರೆ ನನ್ನ ತಂದೆ ಸಮಾನರಾದ ಶಾಸಕರು ಮತ್ತು ನಮ್ಮ ತಂದೆ-ತಾತ ಎಲ್ಲ ದೃಢ ನಿರ್ಧಾರ ತೆಗೆದುಕೊಂಡು ನನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಹೋರಾಟದಿಂದ ಮೃತಪಟ್ಟ ರೈತರಿಗೆ 25 ಲಕ್ಷ ರೂಪಾಯಿ ಪರಿಹಾರ ಕೊಡಿ: ಸಿದ್ದರಾಮಯ್ಯ
Advertisement
Advertisement
ಪಕ್ಷ ಸಂಘಟನೆ ಮಾಡಲು ದೃಢವಾದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿಯನ್ನು ದೇವರು ನೀಡಲಿ. ಐದಾರು ವರ್ಷದಿಂದ ಸಕ್ರಿಯವಾಗಿ ಚುನಾವಣೆ ಮಾಡಿಕೊಂಡು ಬಂದ ಅನುಭವ ನನಗಿದೆ ಎಂದು ಹೇಳಿದರು. ಇದನ್ನೂ ಓದಿ: ಮೊದಲ ಬಾರಿಗೆ ಮಗುವಿನ ಮುದ್ದಾದ ಫೋಟೋ ಶೇರ್ ಮಾಡಿದ ನಟಿ
Advertisement
ಬಿಜೆಪಿ, ಕಾಂಗ್ರೆಸ್‍ನಿಂದ ಯಾರು ಅಭ್ಯರ್ಥಿಯಾಗಿದ್ದಾರೆ ಎಂದು ನನಗೆ ಇನ್ನು ತಿಳಿದಿಲ್ಲ. ವಿಶೇಷವಾಗಿ ನಮ್ಮ ತಾತ ಜವಾಬ್ದಾರಿ ಕೊಟ್ಟಿದ್ದಾರೆ. ಈಗ ಇಡೀ ಜಿಲ್ಲೆಯ ಜವಾಬ್ದಾರಿ ಬರಲಿದೆ. ಎಲ್ಲರ ವಿಶ್ವಾಸದಲ್ಲಿ ತೆಗೆದುಕೊಂಡು ಹೋಗುತ್ತೇನೆ ಎಂದು ತಿಳಿಸಿದರು.