ಚಂದನ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ‘ಸೀತಾ ವಲ್ಲಭ’ ನಟಿ

Public TV
1 Min Read
supritha sathyanarayan 1

ಕಿರುತೆರೆಯ ಜನಪ್ರಿಯ ‘ಸೀತಾ ವಲ್ಲಭ’ (Seetha Vallabha) ನಟಿ ಸುಪ್ರೀತಾ ಸತ್ಯನಾರಾಯಣ್ (Supritha Sathyanarayan) ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಚಂದನ್ ಶೆಟ್ಟಿ (Chandan Shetty) ಜೊತೆ ಎಂಗೇಜ್ ಆಗಿರುವ ಕುರಿತು ನಟಿ ಸೋಷಿಯಲ್ ಮೀಡಿಯಾದಲ್ಲಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ಬ್ಯಾಂಕ್‌ ಜನಾರ್ಧನ್ ಸಾವಿನ ಸುದ್ದಿ ಕೇಳಿ ಶಾಕ್ ಆಯ್ತು: ಧ್ರುವ ಸರ್ಜಾ

chandan shetty

ಹೊಸ ಚಾಪ್ಟರ್ ಇಲ್ಲಿಂದ ಶುರು. ಹಲೋ ಎನ್ನುವ ನಿನ್ನ ಧ್ವನಿಯಿಂದಲೇ ಪ್ರೀತಿ ಶುರುವಾದ ಬಗ್ಗೆ ಹೇಳಲಾ ಅಥವಾ ನಿನ್ನ ನಗು ನೋಡಿದಾಗ ನನ್ನ ಹೊಟ್ಟೆಯೊಳಗಡೆ ಚಿಟ್ಟೆ ಹಾರಾಟ ಮಾಡೋ ಬಗ್ಗೆ ಹೇಳಲಾ? ನಿನ್ನ ನಗು ಅಂದ್ರೆ ನನಗೆ ತುಂಬ ಇಷ್ಟ. ಆ ನಗುಗೋಸ್ಕರ ನಾನು ಏನು ಬೇಕಿದ್ರೂ ಮಾಡುವೆ. ಖುಷಿಗೋಸ್ಕರ ನಾನು ದೇವರ ಬಳಿ ಪ್ರಾರ್ಥಿಸಿದೆ. ಅವನು ನನಗೆ ನಿಮ್ಮನ್ನು ಕೊಟ್ಟ. ನನ್ನ ಜೀವನಕ್ಕೆ ಬಂದಿದ್ದಕ್ಕೆ, ನಿಜವಾದ ಲವ್ ಏನು ಎಂದು ಅರ್ಥ ಮಾಡಿಸಿದ್ದಕ್ಕೆ, ನನ್ನ ಜೀವನವನ್ನು ಸುಂದರ ಮಾಡಿದ್ದಕ್ಕೆ ಥ್ಯಾಂಕ್ಯೂ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಮನೆಗೆ ನುಗ್ಗಿ, ಕಾರು ಸ್ಫೋಟಿಸಿ ಕೊಲೆ ಮಾಡುವುದಾಗಿ ನಟ ಸಲ್ಮಾನ್‌ ಖಾನ್‌ಗೆ ಬೆದರಿಕೆ

ನಿನ್ನ ನಗು, ಶಾಂತಿ, ಖುಷಿಗೋಸ್ಕರ ನಾನು ಪ್ರಾಮೀಸ್ ಮಾಡುವೆ. ನಿನ್ನ ಜೀವನದುದ್ದಕ್ಕೂ ಇರುವೆ ಎಂದು ಮಾತುಕೊಡ್ತೀನಿ. ಇಬ್ಬರೂ ಒಟ್ಟಿಗೆ ಜೀವನ ಕಳೆಯೋಣ. ಐ ಲವ್ ಯೂ ಕಂದ. ನನ್ನ ಹೃದಯ ನಿನ್ನದು. ನನ್ನ ಎದೆಯಾಳೋ ಧಣಿ ನೀನೇ, ನಿನ್ನ ಸಹಚಾರಿಣಿ ನಾನೇ ಎಂದು ನಟಿ ಪೋಸ್ಟ್ ಬರೆದುಕೊಂಡಿದ್ದಾರೆ. ಭಾವಿ ಪತಿ ಜೊತೆಗಿನ ಫೋಟೋ ಶೇರ್ ಮಾಡಿ, ಈ ವರ್ಷ ಮಾರ್ಚ್ 12ರಂದು ಎಂಗೇಜ್ ಆಗಿರೋದಾಗಿ ರಿವೀಲ್ ಮಾಡಿದ್ದಾರೆ.

supritha sathyanarayan

ಡಿಜಿಟಲ್ ಕ್ರಿಯೇಟರ್, ಸಾಫ್ಟ್‌ವೇರ್ ಉದ್ಯೋಗಿ ಚಂದನ್ ಶೆಟ್ಟಿ ಅವರನ್ನು ಮದುವೆಯಾಗಲು ನಟಿ ಸಜ್ಜಾಗಿದ್ದಾರೆ. ಕೊಡಗು ಮೂಲದ ಚಂದನ್ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

Share This Article