ನವದೆಹಲಿ: ಸ್ಪೀಕರ್ ಆದೇಶ ಪ್ರಶ್ನಿಸಿ ಹದಿನೇಳು ಮಂದಿ ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಇಂದು ಕೂಡ ವಿಚಾರಣೆ ಮುಂದುವರಿಸಲಿದೆ.
ನ್ಯಾ. ಎನ್ ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠ ಇಂದೂ ಸುಧೀರ್ಘ ವಾದ ಆಲಿಸಲಿದೆ. ಕೆವಿಯಟ್ ಸಲ್ಲಿಸಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪರ ವಕೀಲ ಕಪಿಲ್ ಸಿಬಲ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪರ ದೇವದತ್ ಕಾಮತ್ ಜೆಡಿಎಸ್ ಪರ ವಕೀಲರು ವಾದ ಮಂಡಿಸಲಿದ್ದಾರೆ.
Advertisement
Advertisement
ಇದಾದ ಬಳಿಕ ಕೇಂದ್ರ ಚುನಾವಣಾ ಆಯೋಗದ ಪರ ವಕೀಲ ರಾಕೇಶ್ ದ್ವಿವೇದಿ ಕೂಡ ವಾದ ಮಂಡಿಸಲಿದ್ದು ಇಂದು ಕೇಂದ್ರ ಚುನಾವಣಾ ಆಯೋಗ ಮಂಡಿಸುವ ವಾದ ಮಹತ್ವ ಪಡೆದುಕೊಳ್ಳಲಿದೆ. ಈ ಹಿಂದೆ ಚುನಾವಣೆ ಅಧಿಸೂಚನೆಗೆ ತಡೆ ಕೊಡಲು ನಿರಾಕರಿಸಿದ್ದ ಆಯೋಗ ಅನರ್ಹರ ಸ್ಪರ್ಧೆಗೆ ಆಕ್ಷೇಪ ಇಲ್ಲ ರಾಕೇಶ್ ದ್ವಿವೇದಿ ಅಂತ ಹೇಳಿದ್ದರು. ಇಂದು ಸಹ ಬಹುತೇಕ ಸುದೀರ್ಘ ವಿಚಾರಣೆ ನಡೆಯಲಿದ್ದು ನಾಳೆಗೆ ತೀರ್ಪು ಕಾಯ್ದಿರಿಸುವ ಸಾಧ್ಯತೆ ಇದೆ.
Advertisement
ಬುಧವಾರವೂ ಕೋರ್ಟ್ ಸುಧೀರ್ಘ ವಾದ ಆಲಿಸಿತ್ತು. ಸ್ಪೀಕರ್ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿ ಸ್ವಯಂಪ್ರೇರಿತವಾಗಿ ಕೊಟ್ಟಿರುವ ರಾಜೀನಾಮೆಯನ್ನೇ ಮೊದಲು ಪರಿಗಣಿಸಬೇಕು ಎಂದು ಹೇಳಿದ್ದರು. ಇಂದು ಬಹುತೇಕ ವಿಚಾರಣೆ ಅಂತ್ಯ ಆಗುವ ಸಾಧ್ಯತೆ ಇದೆ.