Latest

ಇಂದು ಸುಪ್ರೀಂನಲ್ಲಿ ಅನರ್ಹರ ಅರ್ಜಿ ವಿಚಾರಣೆ – ಬೈ ಎಲೆಕ್ಷನ್‍ಗೆ ಸಿಗುತ್ತಾ ಮಧ್ಯಂತರ ತಡೆಯಾಜ್ಞೆ?

Published

on

Share this

ನವದೆಹಲಿ: ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ ಅರ್ಜಿ ಬಾಕಿ ಇರುವಾಗಲೇ ಬೈ ಎಲೆಕ್ಷನ್ ಘೋಷಣೆಯಾಗಿದ್ದು ಅನರ್ಹ ಶಾಸಕರ ಎದೆಯಲ್ಲಿ ಢವಢವ ಶುರವಾಗಿದೆ. ಅನರ್ಹ ಶಾಸಕರಿಗೆ ಇಂದು ನಿರ್ಣಾಯಕ ದಿನವಾಗಿದ್ದು ಸುಪ್ರೀಂಕೋರ್ಟಿನಲ್ಲಿ ಬಹುತೇಕ ಭವಿಷ್ಯ ನಿರ್ಧಾರ ಆಗಲಿದೆ. ಉಪಚುನಾವಣೆ ಸ್ವರ್ಧೆಗೆ ಸುಪ್ರೀಂಕೋರ್ಟ್ ಅವಕಾಶ ಕೊಡುತ್ತಾ ಇಲ್ವ ಅನ್ನೋದು ಇಂದು

ಉಪ ಚುನಾವಣೆ ಘೋಷಣೆ ಆಗಿದೆ. ಈ ನಡುವೆ ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು ರಾಜೀನಾಮೆ ನೀಡಿ ಅನರ್ಹಗೊಂಡಿದ್ದ 17 ಮಂದಿ ಅನರ್ಹ ಶಾಸಕರ ಅರ್ಜಿ ಇಂದು ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲಿದೆ. ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದ್ದು, ಉಪ ಚುನಾವಣೆಗೆ ಮಧ್ಯಂತರ ತಡೆ ನೀಡುತ್ತಾ..? ಅನರ್ಹರಿಗೆ ರಿಲೀಫ್ ನೀಡುವ ಎನ್ನುವ ಕುತೂಹಲ ಎದುರಾಗಿದೆ.

ಅನರ್ಹರ ಪರ ವಾದ ಏನಿರಬಹುದು?
ಸ್ಪೀಕರ್ ನಿರ್ಧಾರ ಸರಿಯಲ್ಲ. ಹೀಗಾಗಿ ಅವರ ಆದೇಶವನ್ನು ರದ್ದು ಮಾಡಿ. ಸ್ಪೀಕರ್ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿದ್ದಾರೆ. ನಮ್ಮ ರಾಜೀನಾಮೆ ಅಂಗಿಕರಿಸಲು ಸ್ಪೀಕರ್‍ಗೆ ಸೂಚನೆ ನೀಡಿ. ಅಲ್ಲದೆ ಪ್ರಕರಣ ಇತ್ಯರ್ಥ ಆಗೋವರೆಗೂ ಚುನಾವಣೆಗೆ ತಡೆ ನೀಡಿ. ಅಥವಾ ತುರ್ತಾಗಿ ಒಂದು ನಿರ್ಧಾರ ತೆಗೆದುಕೊಳ್ಳಿ. ಕೋರ್ಟ್ ಕೇಸ್ ಹಿನ್ನೆಲೆಯಲ್ಲಿ 2 ಕ್ಷೇತ್ರಗಳಲ್ಲಿ ಎಲೆಕ್ಷನ್ ಇಲ್ಲ. ನಮ್ಮ ಪ್ರಕರಣವೂ ಬಾಕಿ ಇದೆ. ಹೀಗಿರುವಾಗ ಉಪ ಕದನ ಎಷ್ಟು ಸರಿ?. ತಮಿಳುನಾಡಿನಲ್ಲಿ ಅನರ್ಹರ ಸ್ಪರ್ಧೆಗೆ ಆಯೋಗ ಅವಕಾಶ ನೀಡಿತ್ತು. ನಮಗೂ ಚುನಾವಣೆಯಲ್ಲಿ ಸ್ವರ್ಧಿಸಲು ಅವಕಾಶ ನೀಡಿ ಎಂಬ ಈ ಅಂಶಗಳನ್ನು ಇಂದು ವಿಚಾರಣೆ ವೇಳೆ ಕೋರ್ಟಿನಲ್ಲಿ ಪ್ರಸ್ತಾಪಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಮೊನ್ನೆ ರಾತ್ರಿಯೇ ನವದೆಹಲಿ ತಲುಪಿರುವ ಎಲ್ಲಾ 17 ಅನರ್ಹ ಶಾಸಕರು ತಮ್ಮ ಪರ ವಕೀಲ ಮುಕುಲ್ ರೊಹ್ಟಗಿ ಜೊತೆ ಚರ್ಚೆ ನಡೆಸಿದ್ದಾರೆ. ಇತ್ತ ಕಾಂಗ್ರೆಸ್ ಕೂಡ ತಮ್ಮನ್ನು ಭಾಗಿದಾರನ್ನಾಗಿ ಮಾಡುವಂತೆ ಕೋರಿದ್ದು, ಪ್ರಕರಣದ ವಿಚಾರಣೆ ವಿಳಂಬ ಮಾಡಲು ಪ್ರಯತ್ನ ಮಾಡಲಿದೆ.

ಕಾಂಗ್ರೆಸ್ ವಾದ ಏನಿರಬಹುದು?
17 ಶಾಸಕರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಸ್ಪೀಕರ್ ಅವರ ಅನರ್ಹತೆ ಆದೇಶ ಸರಿಯಾಗಿದೆ. ಚುನಾವಣೆಯಲ್ಲಿ ಸ್ವರ್ಧಿಸಲು ಅವಕಾಶ ನೀಡಬಾರದು. ಮತ್ತಷ್ಟು ಮಾಹಿತಿ ಕೋರ್ಟ್ ಗಮನಕ್ಕೆ ತರಬೇಕು. ನಮಗೆ ವಾದ ಮಂಡಿಸಲು ಕಾಲಾವಕಾಶ ಕೊಡಿ ಎಂದು ಕಾಂಗ್ರೆಸ್ ಪರ ವಕೀಲರು ವಾದ ಮಂಡನೆ ಮಾಡಬಹುದು.

ಅನರ್ಹತೆ ಪ್ರಕರಣದಲ್ಲಿ ಸಾಕಷ್ಟು ಚರ್ಚಾತ್ಮಕ ವಿಷಯಗಳಿದ್ದು, ಇಂದೇ ವಾದ ಪ್ರತಿವಾದದ ವಿಚಾರಣೆ ನಡೆದು ತೀರ್ಪು ಹೊರಬರೊದು ಡೌಟು ಎನ್ನಲಾಗುತ್ತಿದೆ. ಈಗಾಗಲೇ ಬೈ ಎಲೆಕ್ಷನ್ ಘೋಷಣೆಯಾಗಿದ್ದು ಇಂದು ನೋಟಿಫಿಕೇಷನ್ ಕೂಡ ಆಗಲಿದೆ. ಸೆಪ್ಟೆಂಬರ್ 30 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು ಪ್ರತಿ ನಿಮಿಷವೂ ಅನರ್ಹ ಶಾಸಕರಿಗೆ ಮುಖ್ಯ ಆಗಿದೆ. ಹೀಗಾಗಿ ಅನರ್ಹ ಶಾಸಕರು ಪ್ರತಿಕ್ಷಣವೂ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Bengaluru City28 mins ago

ವಿದ್ಯಾಪೀಠಕ್ಕೆ ಉತ್ತಮ ಪ್ರತಿಕ್ರಿಯೆ – ಎರಡನೇ ದಿನದ ಕಾರ್ಯಕ್ರಮಗಳು ಏನು?

Daily Horoscope in Kannada
Astrology2 hours ago

ದಿನ ಭವಿಷ್ಯ: 19-09-2021

Karnataka weather report
Karnataka2 hours ago

ರಾಜ್ಯದ ಹವಾಮಾನ ವರದಿ: 19-09-2021

Big Bulletin9 hours ago

ಬಿಗ್ ಬುಲೆಟಿನ್ 18 September 2021 Public TV Big Bulletin

Districts9 hours ago

ಬೋಟ್‍ನಲ್ಲಿ ನದಿ ದಾಟಿ ರೈತರ ಮನೆಯಂಗಳದಲ್ಲಿ ‘ಅನ್ನದಂಗಳದ ಮಾತುಕತೆ’

Belgaum9 hours ago

ಬೋರ್​ವೆಲ್​ಗೆ ಬಿದ್ದು ಮಗು ಸಾವು ಪ್ರಕರಣಕ್ಕೆ ಟ್ವಿಸ್ಟ್- ತಂದೆಯಿಂದಲೇ ಕಂದಮ್ಮನ ಕೊಲೆ!

Latest10 hours ago

ಪಂಜಾಬ್ ಸಿಎಂ ರೇಸ್‍ನಲ್ಲಿ ಅಚ್ಚರಿಯ ಹೆಸರು?

Latest10 hours ago

ಶೀಘ್ರವೇ ಕಾಂಗ್ರೆಸ್‍ಗೆ ಖಾಯಂ ಅಧ್ಯಕ್ಷರನ್ನು ನೇಮಕ ಮಾಡಬೇಕು: ಶಶಿ ತರೂರ್

Bengaluru City10 hours ago

ಸರ್ಕಾರಿ ಅಧಿಕಾರಿಗಳ ಪತ್ರಿಕಾಗೋಷ್ಠಿ, ಪ್ರಕಟಣೆಗಳಿಗೆ ಬ್ರೇಕ್‌ ಹಾಕಿದ ರಾಜ್ಯ ಸರ್ಕಾರ

Bengaluru City10 hours ago

ಕೌಟುಂಬಿಕ ಕಲಹದಿಂದ್ಲೇ ಸಾಮೂಹಿಕ ಆತ್ಮಹತ್ಯೆ – ದುರಂತಕ್ಕೆ ಪತ್ನಿಯೇ ಕಾರಣವೆಂದ ಪತಿ ಶಂಕರ್

Bengaluru City6 days ago

ನಿಖಿಲ್ ಪತ್ನಿ ರೇವತಿ ಸೀಮಂತ- ಗಣ್ಯರಿಂದ ಶುಭ ಹಾರೈಕೆ

Bollywood5 days ago

ಆಹಾರ, ಸೆಕ್ಸ್ ಯಾವುದನ್ನ ಆಯ್ಕೆ ಮಾಡಿಕೊಳ್ಳುತ್ತೀರಾ..?: ಶೃತಿ ಕೊಟ್ರು ಬೋಲ್ಡ್ ಆನ್ಸರ್

Bengaluru City5 days ago

ಬೆಂಗಳೂರಿನಲ್ಲಿ ಹಾಡಹಗಲೇ ಯುವತಿಯ ಅಂಗಾಂಗ ಮುಟ್ಟಿ ಹಲ್ಲೆ

Bengaluru City3 days ago

ಬಸ್ಸಿನಲ್ಲಿ ‘ಗೀತ ಗೋವಿಂದಂ’ ಸೀನ್ – ನಿದ್ದೆಗೆ ಜಾರಿದ್ದ ಯುವತಿಗೆ ಮುತ್ತಿಟ್ಟ ಅಪರಿಚಿತ ಯುವಕ!

Cinema5 days ago

ಸುದೀಪ್ ಫೋಟೋಗೆ ಫಿದಾ ಆದ ನಟಿ ರಮ್ಯಾ

Cinema5 days ago

ಅರುಣ್ ಸಾಗರ್ ಮಗನ ಸಾಧನೆ ಕೊಂಡಾಡಿದ ಸುದೀಪ್

Districts7 days ago

ಮತಾಂತರ ತಡೆಯಲು ನೀವು ಯಾರು? ಹಿಂದೂ ಜಾಗರಣಾ ವೇದಿಕೆ ವಿರುದ್ಧ ವೆರೋನಿಕಾ ಕಿಡಿ

Bengaluru City6 days ago

ದಿನ ಭವಿಷ್ಯ: 13-09-2021

Cinema6 days ago

ನಾಮಧಾರಿಯಾದ ಡಿಂಪಲ್ ಕ್ವೀನ್ ರಚಿತಾ ರಾಮ್

Bengaluru City4 days ago

ಅಮ್ಮ ನೀವು ಸೂಪರ್ ವುಮೆನ್ – ಹಾಡಿ ಹೊಗಳಿದ ರಾಧಿಕಾ ಪಂಡಿತ್