ಪತಂಜಲಿ ಆಯುರ್ವೇದದ ವಿರುದ್ಧ ಕ್ರಮ ಕೈಗೊಳ್ಳದ ಉತ್ತರಾಖಂಡ್ ಸರ್ಕಾರಕ್ಕೆ ಸುಪ್ರೀಂ ಚಾಟಿ

Public TV
1 Min Read
PATANJALI

ನವದೆಹಲಿ: ತಪ್ಪುದಾರಿಗೆಳೆಯುವ ಜಾಹೀರಾತು ಪ್ರಕರಣದಲ್ಲಿ ಪತಂಜಲಿ ಆಯುರ್ವೇದ (Patanjali Ayurveda) ವಿರುದ್ಧ ಕ್ರಮ ಕೈಗೊಳ್ಳದೆ ನಿಷ್ಕ್ರಿಯತೆ ತೋರಿದ ಉತ್ತರಾಖಂಡ್ (Uttarakhand) ರಾಜ್ಯ ಪರವಾನಗಿ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್ (Supreme Court) ಚಾಟಿ ಬೀಸಿದೆ. ನ್ಯಾಯಾಲಯದ ಆದೇಶಗಳನ್ನು ಪರವಾನಗಿ ಪ್ರಾಧಿಕಾರ ಪಾಲಿಸುತ್ತಿಲ್ಲ ಎಂದು ಹೇಳಿದೆ.

ನ್ಯಾ. ಹಿಮಾ ಕ್ಲೊಹಿ ನೇತೃತ್ವದ ದ್ವಿ-ಸದಸ್ಯ ಪೀಠ ಈ ಪ್ರಕರಣದ ವಿಚಾರಣೆ ನಡೆಸಿತು. ಸರ್ಕಾರದ ಪರ ವಾದ ಮಂಡಿಸಿದ ವಕೀಲರು ಪತಂಜಲಿ ಮತ್ತು ಅದರ ಸಹೋದರ ಸಂಸ್ಥೆ ದಿವ್ಯಾ ಫಾರ್ಮಸಿಯ 14 ಉತ್ಪನ್ನಗಳ ಉತ್ಪಾದನಾ ಪರವಾನಗಿಗಳನ್ನು ಏಪ್ರಿಲ್ 15 ರಂದು ‘ತಕ್ಷಣದ ಪರಿಣಾಮ’ ದೊಂದಿಗೆ ಅಮಾನತುಗೊಳಿಸಲಾಗಿದೆ ಎಂದು ವಾದಿಸಿದರು. ಇದನ್ನೂ ಓದಿ: ಜಮ್ಮು, ಕಾಶ್ಮೀರದಲ್ಲಿ ಪ್ರವಾಹ- ಐವರ ದುರ್ಮರಣ

baba ramdev patanjali

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಪತಂಜಲಿ ಉತ್ಪನ್ನಗಳನ್ನು ಯಾವಗ ನಿಷೇಧಿಸಲಾಗಿದೆ ಎಂದು ಪ್ರಶ್ನಿಸಿತು. ನಾವು ಆಕ್ಷೇಪ ವ್ಯಕ್ತಪಡಿಸಿದ ಮೇಲೆ ನಿಷೇಧ ಹೇರಲಾಯಿತೆ ಅಥವಾ ಅದಕ್ಕೂ ಮುನ್ನ ನಿಷೇಧ ಮಾಡಲಾಗಿತ್ತೆ ಎಂದು ಸ್ಪಷ್ಟನೆ ಕೇಳಿತು. ಪತಂಜಲಿ ವಿರುದ್ಧ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿತು. ಇದನ್ನೂ ಓದಿ: ಪ್ರಜ್ವಲ್ ಪ್ರಕರಣವನ್ನು ಕಾಂಗ್ರೆಸ್ ಎನ್‌ಡಿಎ ಅಪರಾಧ ಅನ್ನೋ ಥರ ಬಿಂಬಿಸಲು ಯತ್ನಿಸುತ್ತಿದೆ: ಸಿ.ಟಿ ರವಿ

ಬಳಿಕ ಪತಂಜಲಿ ಬೇಷರತ್ ಕ್ಷಮೆ ಬಗ್ಗೆ ಆಲಿಸಿದ ಕೋರ್ಟ್ ನಮಗೆ ಇ-ಪ್ರತಿಗಳು ಬೇಡ, ಮುದ್ರಣವಾಗಿರುವ ಅಸಲಿ ಪ್ರತಿಗಳನ್ನು ನಮಗೆ ಸಲ್ಲಿಸಬೇಕು ಎಂದು ಸೂಚನೆ ನೀಡಿತು. ಇದೇ ವೇಳೆ ಮುಂದಿನ ವಿಚಾರಣೆಗೆ ಖುದ್ದು ಹಾಜರಾತಿಯಿಂದ ಯೋಗ ಗುರು ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರಿಗೆ ವಿನಾಯತಿ ನೀಡಲಾಯಿತು. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಎನ್‍ಕೌಂಟರ್ – ಇಬ್ಬರು ಮಹಿಳೆಯರು ಸೇರಿ 7 ಮಂದಿ ನಕ್ಸಲರ ಹತ್ಯೆ

Share This Article